Homeಕರ್ನಾಟಕಕೆ.ಆರ್.ಪೇಟೆ ಚಲೋ: ಜಾಗೃತ ಸಮುದಾಯ ಜೀವಂತ ಆಗಿರುತ್ತದೆ, ಅದರ ಮೇಲೆ ದಾಳಿ ಆಗಲ್ಲ; ಜ್ಞಾನ ಪ್ರಕಾಶ್...

ಕೆ.ಆರ್.ಪೇಟೆ ಚಲೋ: ಜಾಗೃತ ಸಮುದಾಯ ಜೀವಂತ ಆಗಿರುತ್ತದೆ, ಅದರ ಮೇಲೆ ದಾಳಿ ಆಗಲ್ಲ; ಜ್ಞಾನ ಪ್ರಕಾಶ್ ಸ್ವಾಮಿ

- Advertisement -
- Advertisement -

‘‘ಯಾವ ಸಮುದಾಯ ಜಾಗೃತವಾಗಿ ಇರುತ್ತದೋ ಅದು ಜೀವಂತ ಆಗಿರುತ್ತದೆ. ಎಚ್ಚೆತ್ತ ಸಮುದಾಯಗಳ ಮೇಲೆ ದಾಳಿ ಆಗಲ್ಲ’’ ಎಂದು ಉರಿಲಿಂಗಪೆದ್ದಿ ಮಠದ ಪೀಠಾಧೀಶ ಜ್ಞಾನ ಪ್ರಕಾಶ್ ಸ್ವಾಮಿ ಮಂಗಳವಾರ ಹೇಳಿದರು. ಅವರು ಕೆ.ಆರ್. ಪೇಟೆ ತಾಲ್ಲೂಕಿನ ಕತ್ತರಘಟ್ಟ ಗ್ರಾಮದಲ್ಲಿ ಮೇ 17ರಂದು ನಡೆದ ದಲಿತ ಯುವಕ ಜಯಕುಮಾರ್‌ ಹತ್ಯೆ ವಿರೋಧಿಸಿ ಮೇ 27ರಂದು ನಡೆದ ಕೆ.ಆರ್. ಪೇಟೆ ಚಲೋ ಹೋರಾಟದಲ್ಲಿ ಭಾಗಿಯಾಗಿ ಮಾತನಾಡುತ್ತಿದ್ದರು. ಜಾಗೃತ ಸಮುದಾಯ ಜೀವಂತ

ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಕರಾಳ ಚರಿತ್ರೆಗೆ 75 ವರ್ಷ ಆಗಿದ್ದು, ಸರ್ಕಾರಕ್ಕೆ ನಾಚಿಕೆ ಆಗಬೇಕು. ಮಂಡ್ಯ ಹಾಗೂ ಕೆ.ಆರ್. ಪೇಟೆ ಆಡಳಿತಕ್ಕೂ ನಾಚಿಕೆ ಆಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. “ಎಚ್.ಡಿ. ಕೋಟೆ ತಾಲ್ಲೂಕಿನಲ್ಲಿ ತನ್ನ ಮಗಳು ಅನ್ಯ ಜಾತಿ ಯುವಕನನ್ನು ಮದುವೆ ಆಗಿದ್ದಕ್ಕೆ ಕೊಲೆ ಮಾಡಿದ್ದರು. ಯಾವ ಸಮುದಾಯ ಜಾಗೃತವಾಗಿ ಇರುತ್ತದೋ ಅದು ಜೀವಂತ ಆಗಿರುತ್ತದೆ, ಎಚ್ಚೆತ್ತ ಸಮುದಾಯಗಳ ಮೇಲೆ ದಾಳಿ ಆಗಲ್ಲ” ಎಂದು ಅವರು ಹೇಳಿದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

“ಮುಂದೆ ನಮ್ಮ ಎಲ್ಲರ ಮನೆಗಳೂ ಬೂದಿ ಆಗುತ್ತವೆ. ಕೆ.ಆರ್ ಪೇಟೆಯಲ್ಲಿ ಇಂತ ಪ್ರಕರಣಗಳು ನಡೆಯುತ್ತಲೇ ಇವೆ. ಜಯಕುಮಾರ್ ಹತ್ಯೆ ಪ್ರಕರಣವನ್ನ ಆತ್ಮಹತ್ಯೆ ಎಂದು ಹೇಳಿದ ಪೊಲೀಸ್ ಅಧಿಕಾರಿ ಯೂನಿಫಾರಂ ಬಿಚ್ಚಿಸಬೇಕು. ಆತ್ಮಹತ್ಯೆ ಎಂದು ಹೇಳುವುದಕ್ಕೆ ಆತನೇನು ನ್ಯಾಯಾಧೀಶನೆ” ಎಂದು ಅವರು ಪ್ರಶ್ನಿಸಿದರು.

ಜಯಕುಮಾರ್ ಪರ ಹೋರಾಟದಲ್ಲಿ ಅವರ ಕುಟುಂಬಕ್ಕೆ ನ್ಯಾಯ ಸಿಗುವವರೆಗೂ ನಾನು ಜೊತೆಯಲ್ಲಿ ಇರುತ್ತೇನೆ ಎಂದು ಅವರು ಪ್ರತಿಜ್ಞೆ ಮಾಡಿದ್ದಾರೆ. “ನಾನು ಭಾಷಣ ಮಾಡಿ ಹೋಗುವುದಕ್ಕೆ ಇಲ್ಲಿಗೆ ಬಂದಿಲ್ಲ. ನಿರ್ಲಕ್ಷ್ಯ ತೋರಿದ ಅಧಿಕಾರಿಗಳಿಗೆ ನಮ್ಮ ಶಕ್ತಿ ತೋರಿಸುತ್ತೇವೆ. ದಲಿತರ ಶಕ್ತಿ ಏನೆಂದು ಅವರಿಗೆ ಗೊತ್ತಿಲ್ಲ. ಪೊಲೀಸರು ಸರಿಯಾಗಿ ಕಾರ್ಯ ನಿರ್ವಹಿಸಿದ್ದರೆ ಈ ಪ್ರಕರಣ ನಡೆಯುತ್ತಿರಲಿಲ್ಲ. ಯಾವುದೇ ಕಾರಣಕ್ಕೂ ಪೊಲೀಸರನ್ನು ಸುಮ್ಮನೆ ಬಿಡುವ ಮಾತಿಲ್ಲ” ಎಂದರು. ಮುಖ್ಯಮಂತ್ರಿಗಳ ಜೊತೆಗೆ ಮಾತನಾಡಿ ಎಸ್.ಐ.ಟಿ ತನಿಖೆ ಮಾಡಿಸುತ್ತೇವೆ ಎಂದು ಅವರು ಹೇಳಿದರು.

“ಆತ್ಮಹತ್ಯೆ ಎಂದು ಬಿಂಬಿಸಲು ಹೊರಟ ಇನ್ಸ್‌ಪೆಕ್ಟರ್‌ ಮತ್ತು ಸರ್ಕಲ್ ಇನ್ಸ್‌ಪೆಕ್ಟರ್‌ ಅವರನ್ನು ಸುಮ್ಮನೆ ಬಿಡುವುದಿಲ್ಲ. ಕಾಕಿ ಬಟ್ಟೆ ಹಾಕಿದವರಿಗೆ ಕನಿಷ್ಟ ಮಾನವೀಯತೆ ಇರಬೇಕು. ರಾಗಿ ಬಿತ್ತಿದರೆ ಜೋಳ ಬರುವುದಿಲ್ಲ. ಮುಂದಿನ ದಿನಗಳಲ್ಲಿ ನಿಮ್ಮ ಮನೆಯ ಹೆಣ್ಣು ಮಕ್ಕಳಿಗೂ ಇಂತಹ ಸ್ಥಿತಿ ಬರಬಹುದು. 135 ಸೀಟು ಕೊಟ್ಟು ನಾವು ಬೀದಿಯಲ್ಲಿ ತಮಟೆ ಹೊಡೆದುಕೊಂಡು ಸುಮ್ಮನೆ ಕೂರಬೇಕ” ಎಂದು ಅವರು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದರು.

ಇದೇ ವೇಳೆ ಮಾತನಾಡಿದ ಸಿಪಿಐಎಂ ನಾಯಕಿ ಕುಮಾರಿ ಅವರು, “ತಮ್ಮ ಮಕ್ಕಳಿಗಾಗಿ ಜಯಕುಮಾರ್ ಬೆಂಗಳೂರಿನಲ್ಲಿ ಕೆಲಸ ಬಿಟ್ಟು ಹಳ್ಳಿಗೆ ಬಂದಿದ್ದರು. ಸರ್ಕಾರ ನೀಡಿದ್ದ ಜಮೀನನ್ನು ಹಸನು ಮಾಡುತ್ತಿದ್ದರು. ಅಲ್ಲಿ ಕೃಷಿ ಮಾಡಲು ಯೋಚಿಸುತ್ತಿದ್ದರು. ಆದರೆ ಅದನ್ನು ಸಹಿಸದ ಆರೋಪಿ ಜಯಕುಮಾರ್ ಅವರನ್ನು ಕೊಲೆ ಮಾಡಿದ್ದಾನೆ. ಅವನಿಗೆ ಪೊಲೀಸರು ಬೆಂಬಲ ನೀಡುತ್ತಿದ್ದಾರೆ.” ಎಂದು ಆರೋಪಿಸಿದರು.

“15 ನೆ ತಾರೀಖು ನಡೆದ ಗಲಾಟೆ ಬಗ್ಗೆ ಪೊಲೀಸ್ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಿತ್ತು. ಆದರೆ ಆತನಿಗೆ ಎಚ್ಚರಿಕೆ ನೀಡದಂತೆ ಪೊಲೀಸರನ್ನು ತಡೆದವರು ಯಾರು? ಆತನೇ ನಾಗಮಂಗಲ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಆತನಿಗೆ ಬೆಂಬಲ ನೀಡಿರುವವರು ಯಾರು ಎಂಬುದು ಗೊತ್ತಾಗಬೇಕು” ಎಂದು ಕುಮಾರಿ ಅವರು ಹೇಳಿದರು. ಕೊಲೆಯನ್ನು ಆತ್ಮಹತ್ಯೆ ಎಂದು ಬಿಂಬಿಸುತ್ತಿದ್ದು, ಆತನ ರಕ್ಷಣೆಗೆ ದೊಡ್ಡ ಶಕ್ತಿ ನಿಂತಿದೆ ಎಂದು ಆರೋಪಿಸಿದ ಅವರು, ಅದು ಯಾವ ಶಕ್ತಿ ಎಂದು ಗೊತ್ತಾಗಬೇಕು, ಸತ್ಯ ಹೊರಬರಬೇಕಾದರೆ ಎಸ್ಐಟಿ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು. ಜಾಗೃತ ಸಮುದಾಯ ಜೀವಂತ

ಇಲ್ಲಿ ಕ್ಲಿಕ್ ಮಾಡಿ

ಇದನ್ನೂಓದಿ:  ತಿಪಟೂರು | ದಲಿತ ಪತ್ರಕರ್ತನ ಮೇಲೆ ಹಲ್ಲೆ ಖಂಡಿಸಿ ದಲಿತಪರ ಸಂಘಟನೆಗಳಿಂದ ಪ್ರತಿಭಟನೆ

ತಿಪಟೂರು | ದಲಿತ ಪತ್ರಕರ್ತನ ಮೇಲೆ ಹಲ್ಲೆ ಖಂಡಿಸಿ ದಲಿತಪರ ಸಂಘಟನೆಗಳಿಂದ ಪ್ರತಿಭಟನೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -