Homeಕರ್ನಾಟಕಖ್ಯಾತ ಇತಿಹಾಸ ತಜ್ಞ, ಮಂಗಳೂರು & ಗೋವಾ ವಿ.ವಿ ಉಪ ಕುಲಪತಿ ಪ್ರೊ.ಬಿ.ಷೇಕ್ ಅಲಿ (98)...

ಖ್ಯಾತ ಇತಿಹಾಸ ತಜ್ಞ, ಮಂಗಳೂರು & ಗೋವಾ ವಿ.ವಿ ಉಪ ಕುಲಪತಿ ಪ್ರೊ.ಬಿ.ಷೇಕ್ ಅಲಿ (98) ನಿಧನ

- Advertisement -
- Advertisement -

ದೇಶದ ಪ್ರಮುಖ ಇತಿಹಾಸ ತಜ್ಞ, ಗೋವಾ ಮತ್ತು ಮಂಗಳೂರು ವಿಶ್ವವಿದ್ಯಾನಿಲಯಗಳ ಮಾಜಿ ಉಪಕುಲಪತಿ ಪ್ರೊ.ಬಿ.ಷೇಕ್ ಅಲಿ (98 ವರ್ಷ) ಅವರು ಮೈಸೂರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ನಿಧನರಾಗಿದ್ದಾರೆ. ಅವರು ಪುತ್ರ, ಪುತ್ರಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ದೇಶದ ಪ್ರಖ್ಯಾತ ಇತಿಹಾಸಕಾರರಾಗಿರುವ ಷೇಕ್ ಅಲಿ ಅವರು, ಇತಿಹಾಸದ ಸಿದ್ಧಾಂತ ಮತ್ತು ಕರ್ನಾಟಕದ ನೆಲ ಮೂಲದ ಇತಿಹಾಸಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯಾಗಿದ್ದ ಅವರು ಅಲ್ಲೆ ಇತಿಹಾಸ ಪ್ರಾಧ್ಯಾಪಕರಾಗಿ ನಿವೃತ್ತರಾಗಿದ್ದರು. ಶಿಕ್ಷಣ ತಜ್ಞರೂ ಆಗಿರುವ ಷೇಕ್ ಅಲಿ ಅವರು ಹಾಸನ ಜಿಲ್ಲೆಯ ಬೆಳಗೋಡು ಗ್ರಾಮದವರಾಗಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಮೈಸೂರು ವಿಶ್ವವಿದ್ಯಾಲಯದಿಂದ ಆನರ್ಸ್‌ ಪದವಿ ಹಾಗೂ ಆಲಿಘರ್‌ ಮುಸ್ಲಿಂ ವಿಶ್ವವಿದ್ಯಾಲಯ ಮತ್ತು ಲಂಡನ್‌ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪಡೆದಿದ್ದಾರೆ. ಉರ್ದು, ಇಂಗ್ಲಿಷ್, ಫ್ರೆಂಚ್ ಭಾಷೆ ಬಲ್ಲವರಾಗಿರುವ ಷೇಕ್ ಅಲಿ ಅವರು ಸಾಲಾರ್ ಉರ್ದು ದಿನಪತ್ರಿಕೆ ಹಾಗೂ ವಾರಪತ್ರಿಕೆಯ ಪ್ರಧಾನ ಸಂಪಾದಕರಾಗಿ, ನೂರ್-ಎ-ಬಸೀರತ್ ಉರ್ದು ಮಾಸಿಕದ ಸಂಪಾದಕರಾಗಿಯು ಸೇವೆ ಸಲ್ಲಿದ್ದಾರೆ. ಕನ್ನಡ ವಿಶ್ವವಿದ್ಯಾಲಯ ಪ್ರಕಟಿಸಿರುವ ‘ಕರ್ನಾಟಕ ಇತಿಹಾಸದ ಏಳು ಸಂಪುಟಗಳು’ ಇದರ ಪ್ರಧಾನ ಸಂಪಾದಕರಾಗಿದ್ದಾರೆ.

ಇದನ್ನೂ ಓದಿ: ಶಿಕ್ಷಣ, ಇತಿಹಾಸ ಮತ್ತು ಮತೀಯವಾದ

ಪ್ರಾಚೀನ ಕರ್ನಾಟಕದ ಐತಿಹಾಸಿಕ ಅಧ್ಯಯನಗಳಿಗೆ ಅವರು ಕೊಡುಗೆಗಳನ್ನು ನೀಡಿದ್ದಾರೆ. ಗಂಗರ ಇತಿಹಾಸದ ಬಗ್ಗೆ ಅಧ್ಯಯನ ನಡೆಸಿರುವ ಅವರು, ಗಂಗರು ದಕ್ಷಿಣ ಕರ್ನಾಟಕದ ಮೂಲದವರು ಮತ್ತು ಅವರ ಪೂರ್ವಜರು ಕರ್ನಾಟಕದ ದಕ್ಷಿಣ ಜಿಲ್ಲೆಗಳ ಕಡೆಯವರು ಎಂಬ ವಾದವನ್ನು ಷೇಕ್ ಅಲಿ ಅವರು ಬೆಂಬಲಿಸಿದ್ದಾರೆ. ಆರಂಭದಲ್ಲಿ ಗಂಗರು ಜೈನರಾಗಿದ್ದರು ಎಂಬ ಅಂಶವನ್ನು ಅವರು ಅನುಮೋದಿಸುವುದಿಲ್ಲ. ಪ್ರಮುಖವಾಗಿ ತಮ್ಮ ಹೆಚ್ಚಿನ ಕೃತಿಗಳಲ್ಲಿ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನರ ಇತಿಹಾಸವನ್ನು ದಾಖಲಿಸಿದ್ದಾರೆ.

‘ಹಿಸ್ಟರಿ: ಇಟ್ಸ್‌‌ ಥಿಯರಿ ಆಂಡ್‌ ಮೆಥಡ್‌’,  ‘ಹಿಸ್ಟರಿ ಆಫ್‌ ದಿ ವೆಸ್ಟರ್ನ್‌‌ ಗಂಗಾಸ್‌(ಕಾಂಪ್ರೆಹೆನ್ಸಿವ್‌ ಹಿಸ್ಟರಿ ಆಫ್‌ ಕರ್ನಾಟಕ- 1 ನೇ ಸಂಪುಟ’, ‘ಗೋವಾ ವಿನ್ಸ್ ಫ್ರೀಡಂ: ರಿಫ್ಲೆಕ್ಷನ್ಸ್ ಅಂಡ್ ರಿಮಿನಿಸೆನ್ಸ್’, ‘ಟೀಪು ಸುಲ್ತಾನ್; ಎ ಗ್ರೇಟ್‌ ಮಾರ್ಟರ್‌‌(ಸಂಪಾದನೆ), ‘ಟೀಪು ಸುಲ್ತಾನ್’, ‘ಬ್ರಿಟೀಷ್ ರಿಲೇಷನ್ಸ್‌ ವಿತ್‌ ಹೈದರ್‌ ಅಲಿ’, ‘ಎ ಗ್ರೇಟ್‌ ಟೀಚರ್‌‌’, ‘ಇಸ್ಲಾಂ, ಎ ಕಲ್ಚರ್‌ ಓರಿಯಂಟೇಷನ್’ ಷೇಕ್ ಅಲಿ ಅವರ ಪ್ರಮುಖ ಕೃತಿಗಳಾಗಿವೆ.

ಪ್ರೊ. ಷೇಕ್ ಅಲಿ ಅವರು ಕರ್ನಾಟಕ ಇತಿಹಾಸದ ಕುರಿತ 50ಕ್ಕೂ ಹೆಚ್ಚು ಕೃತಿಗಳನ್ನು ಪುಸ್ತಕಗಳನ್ನು ಬರೆದಿರುವ ಅವರು, ನೂರಾರು ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ್ದಾರೆ. ಅವರಿಗೆ ಮೈಸೂರು ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕನ್ನಡ ವಿಶ್ವವಿದ್ಯಾಲಯ ಹಂಪಿಯ ಗೌರವ ಡಿ.ಲಿಟ್. ದೊರೆತಿದ್ದಲ್ಲದೆ, ದೇಶ ವಿದೇಶಗಳಿಂದ ಹಲವಾರು ಪ್ರಶಸ್ತಿ ಮತ್ತು ಗೌರವಗಳು ಇವರನ್ನು ಅರಸಿಕೊಂಡು ಬಂದಿದೆ.

ಇದನ್ನೂ ಓದಿ: ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ವಿವಾದ; ಇತಿಹಾಸ ಏನು ಹೇಳುತ್ತದೆ?

ಮೃತರ ಪಾರ್ಥೀವ ಶರೀರವನ್ನು ಮೈಸೂರಿನ ಸರಸ್ವತಿಪುರಂನ ಮುಸ್ಲಿಂ ಹಾಸ್ಟೆಲ್‌ಗೆ ಅಂತಿಮ ದರ್ಶನಕ್ಕಾಗಿ ಕೊಂಡೊಯ್ಯಲಾಗುತ್ತದೆ. ಇದರ ನಂತರ ಟಿಪ್ಪು ಸರ್ಕಲ್‌ನಲ್ಲಿರುವ ಮೈಸೂರು ಜೈಲಿನ ಹಿಂಭಾಗದ ಮುಖ್ಯ ಖಬರಸ್ಥಾನದಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು.

ಪ್ರೊಫೆಸರ್‌ ಬಿ.ಷೇಕ್ ಅಲಿ ಅವರ ನಿಧನಕ್ಕೆ ರಾಜ್ಯದ ಹಲವಾರು ಪ್ರಾಧ್ಯಾಪಕರು, ರಾಜಕೀಯ ನಾಯಕರು, ಪತ್ರಕರ್ತರು ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ: ’ನಾವೂ ಇತಿಹಾಸ ಕಟ್ಟಿದೆವು- ಅಂಬೇಡ್ಕರ್ ಚಳವಳಿಯಲ್ಲಿ ಮಹಿಳೆಯರು’ ಪುಸ್ತಕದಿಂದ ಆಯ್ದ ಭಾಗ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೊಪ್ಪಳ: ಬಿಜೆಪಿ ಭದ್ರಕೋಟೆಯನ್ನು ಛಿದ್ರಗೊಳಿಸಲು ಕಾಂಗ್ರೆಸ್‌ಗೆ ಸುವರ್ಣಾವಕಾಶ!?

0
ಹಿಂದುತ್ವ ರಾಜಕಾರಣದ ವಿಚಾರದಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರ ಕಳೆದ ಒಂದೂವರೆ ದಶಕದಿಂದ ಥೇಟ್ ಚಿಕ್ಕಮಗಳೂರು-ಶಿವಮೊಗ್ಗದ ತದ್ರೂಪಿ. ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ಹಿಂದುತ್ವದ ಅಜೆಂಡಾ ಇಲ್ಲಿ ನಿರ್ಣಾಯಕ. ಆದರೆ, 2014ರಲ್ಲಿ ಲೋಕಸಭಾ ಕಣಕ್ಕೆ ಸಂಗಣ್ಣ ಕರಡಿ...