Homeಮುಖಪುಟಗುಜರಾತ್‌ ಗಲಭೆ: 17 ಜನರ ಕೊಂದ ಪ್ರಕರಣದಲ್ಲಿ 22 ಆರೋಪಿಗಳು ಖಲಾಸೆ

ಗುಜರಾತ್‌ ಗಲಭೆ: 17 ಜನರ ಕೊಂದ ಪ್ರಕರಣದಲ್ಲಿ 22 ಆರೋಪಿಗಳು ಖಲಾಸೆ

- Advertisement -
- Advertisement -

2002ರಲ್ಲಿ ಗುಜರಾತ್‌ನಲ್ಲಿ ನಡೆದ ಗೋಧ್ರೋತ್ತರ ಕೋಮು ಗಲಭೆಯಲ್ಲಿ ಅಲ್ಪಸಂಖ್ಯಾತ ಸಮುದಾಯದ 17 ಜನರನ್ನು ಕೊಂದ ಆರೋಪ ಎದುರಿಸುತ್ತಿದ್ದ 22 ಜನರನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ಸ್ಥಳೀಯ ನ್ಯಾಯಾಲಯ ಖುಲಾಸೆಗೊಳಿಸಿದೆ.

ಇಬ್ಬರು ಮಕ್ಕಳು ಸೇರಿದಂತೆ ಅಲ್ಪಸಂಖ್ಯಾತ ಸಮುದಾಯದ 17 ಸದಸ್ಯರನ್ನು ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್‌ನ ಪಂಚಮಹಲ್ ಜಿಲ್ಲೆಯ ಹಲೋಲ್ ಪಟ್ಟಣದ ನ್ಯಾಯಾಲಯವು ಮಂಗಳವಾರ ತೀರ್ಪು ನೀಡಿದೆ.

ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಹರ್ಷ್ ತ್ರಿವೇದಿ ಅವರಿದ್ದ ನ್ಯಾಯಾಲಯವು ಎಲ್ಲಾ 22 ಆರೋಪಿಗಳನ್ನು ಖುಲಾಸೆಗೊಳಿಸಿದೆ, ಅವರಲ್ಲಿ ಎಂಟು ಮಂದಿ ಪ್ರಕರಣದ ವಿಚಾರಣೆಯ ಸಮಯದಲ್ಲಿ ಸಾವನ್ನಪ್ಪಿದ್ದಾರೆ ಎಂದು ಪ್ರತಿವಾದಿ ವಕೀಲ ಗೋಪಾಲಸಿಂಹ ಸೋಲಂಕಿ ಹೇಳಿದ್ದಾರೆ.

ನ್ಯಾಯಾಲಯವು ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿದೆ. ಜಿಲ್ಲೆಯ ಡೆಲೋಲ್ ಗ್ರಾಮದಲ್ಲಿ ಗಲಭೆ ಮತ್ತು ಇಬ್ಬರು ಮಕ್ಕಳು ಸೇರಿದಂತೆ ಅಲ್ಪಸಂಖ್ಯಾತ ಸಮುದಾಯದ 17 ಜನರ ಕೊಲೆ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳ ಕೊರತೆ ಇದೆ ಎಂದಿದೆ.

ಸಂತ್ರಸ್ತರನ್ನು ಫೆಬ್ರವರಿ 28, 2002 ರಂದು ಕೊಲ್ಲಲಾಯಿತು ಮತ್ತು ಸಾಕ್ಷ್ಯವನ್ನು ನಾಶಪಡಿಸುವ ಉದ್ದೇಶದಿಂದ ಅವರ ದೇಹಗಳನ್ನು ಸುಡಲಾಯಿತು. ಫೆಬ್ರವರಿ 27, 2002ರಂದು ಪಂಚಮಹಲ್ ಜಿಲ್ಲೆಯ ಗೋಧ್ರಾ ಪಟ್ಟಣದ ಬಳಿ ಸಬರಮತಿ ಎಕ್ಸ್‌ಪ್ರೆಸ್ ಬೋಗಿಗೆ ಬೆಂಕಿ ಹಚ್ಚಿ 59 ಮಂದಿ ಕರಸೇವಕರನ್ನು ಕೊಂದ ಒಂದು ದಿನದ ನಂತರ ಕೋಮು ಹಿಂಸಾಚಾರ ರಾಜ್ಯದ ವಿವಿಧೆಡೆ ಭುಗಿಲೆದ್ದಿತ್ತು.

ಡೆಲೋಲ್ ಗ್ರಾಮದಲ್ಲಾದ ಹಿಂಸಾಚಾರದ ನಂತರ, ಕೊಲೆ ಮತ್ತು ಗಲಭೆಗೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ (ಪ್ರಥಮ ಮಾಹಿತಿ ವರದಿ) ದಾಖಲಿಸಲಾಯಿತು.

ಘಟನೆಯ ಸುಮಾರು ಎರಡು ವರ್ಷಗಳ ನಂತರ, ಪೊಲೀಸ್ ಇನ್ಸ್‌ಪೆಕ್ಟರ್ ಹೊಸ ದೂರನ್ನು ದಾಖಲಿಸಿದರು. ಗಲಭೆಯಲ್ಲಿ ಭಾಗಿಯಾಗಿದ್ದಕ್ಕಾಗಿ 22 ಜನರನ್ನು ಬಂಧಿಸಿದರು. ವಕೀಲರಾದ ಸೋಲಂಕಿ ಅವರ ಪ್ರಕಾರ, “ಆರೋಪಿಗಳ ವಿರುದ್ಧ ಸಾಕಷ್ಟು ಸಾಕ್ಷ್ಯಗಳನ್ನು ಸಂಗ್ರಹಿಸಲು ಕಾನೂನು ಪ್ರಕ್ರಿಯೆಗೆ ಸಾಧ್ಯವಾಗಲಿಲ್ಲ. ಸಾಕ್ಷಿಗಳೂ ವ್ಯತಿರಿಕ್ತ ಹೇಳಿಕೆಗಳನ್ನು ನುಡಿದರು” ಎಂದಿದ್ದಾರೆ.

ಸಂತ್ರಸ್ತರ ಪರ ವಕೀಲರ ಪ್ರಕಾರ ಸಂತ್ರಸ್ತರಿಗೆ ಸಂಬಂಧಿಸಿದ ಅವಶೇಷಗಳು ಎಂದಿಗೂ ಪತ್ತೆಯಾಗಿಲ್ಲ. ಪೊಲೀಸರು ನದಿಯ ದಡದಲ್ಲಿರುವ ಪ್ರತ್ಯೇಕ ಸ್ಥಳಗಳಿಂದ ಮೂಳೆಗಳನ್ನು ವಶಪಡಿಸಿಕೊಂಡರು. ಆದರೆ ಸಂತ್ರಸ್ತರ ಗುರುತುಗಳನ್ನು ಅವುಗಳಿಂದ ಪತ್ತೆಹಚ್ಚಲು ಸಾಧ್ಯವಾಗದ ಮಟ್ಟಿಗೆ ಅವು ಸುಟ್ಟುಹೋಗಿವೆ.

ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ, ನ್ಯಾಯಾಲಯವು ಎಲ್ಲಾ 22 ಆರೋಪಿಗಳನ್ನು ಖುಲಾಸೆಗೊಳಿಸಿತು, ಅವರಲ್ಲಿ ಎಂಟು ಮಂದಿ ವಿಚಾರಣೆಯ ಸಮಯದಲ್ಲಿ ಸಾವನ್ನಪ್ಪಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ನಾಡಾ’ದಿಂದ ಕುಸ್ತಿಪಟು ಬಜರಂಗ್ ಪುನಿಯಾ ಅಮಾನತು: ವರದಿ

0
ಡೋಪಿಂಗ್ ಪರೀಕ್ಷೆ (ಮಾದಕವಸ್ತು ಪತ್ತೆ ಪರೀಕ್ಷೆ)ಗೆ ಸರಿಯಾದ ಸಮಯಕ್ಕೆ ಮೂತ್ರದ ಮಾದರಿಯನ್ನು ನೀಡದ ಆರೋಪದ ಮೇಲೆ ಒಲಿಂಪಿಕ್ ಕಂಚಿನ ಪದಕ ವಿಜೇತ ಕುಸ್ತಿಪಟು ಬಜರಂಗ್ ಪುನಿಯಾ ಅವರನ್ನು ರಾಷ್ಟ್ರೀಯ ಉದ್ದೀಪನ ಮದ್ದು ತಡೆ...