Homeಕರ್ನಾಟಕಹಾಸನದಲ್ಲಿ ಪ್ರೀತಮ್‌ಗೆ ಮುಖಭಂಗ : ಗೆದ್ದು ಬೀಗಿದ ಜೆಡಿಎಸ್

ಹಾಸನದಲ್ಲಿ ಪ್ರೀತಮ್‌ಗೆ ಮುಖಭಂಗ : ಗೆದ್ದು ಬೀಗಿದ ಜೆಡಿಎಸ್

- Advertisement -
- Advertisement -

ಸ್ವರೂಪ್ ನನ್ನ ಮಗ ಇದ್ದಂತೆ ನೀವು ಈ ಬಾರಿ ಹೆಚ್ಚಿನ ಮತ ನೀಡಿ ಗೆಲ್ಲಿಸಿ ಎಂದು ಭವಾನಿ ರೇವಣ್ಣ ಹಾಸನದ ಮತದಾರರನ್ನು ಬೇಡಿದ ಪರಿಗೆ ಹಾಸನದ ಮತದಾರರೂ ಸ್ವರೂಪ್‌ಗೆ ವಿಜಯದ ಮಾಲೆ ಹಾಕಿದ್ದಾರೆ. ಹಾಸನದಲ್ಲಿ ಭಾರಿ ಕುತೂಹಲ ಹುಟ್ಟಿಸಿದ್ದ ಸ್ವರೂಪ್ ಮತ್ತು ಪ್ರೀತಂಗೌಡ ನಡುವಿನ 2023ರ ಚುನಾವಣಾ ಕಣದಲ್ಲಿ ಜೆಡಿಎಸ್‌ನ ಸ್ವರೂಪ್ ಪ್ರಕಾಶ್ ಗೆಲುವಿನ ನಗೆ ಬೀರಿದ್ದಾರೆ.

ಜೆಡಿಎಸ್ ಗೆದ್ದ ಅಭ್ಯರ್ಥಿ ಸ್ವರೂಪ್ - ಜೆಡಿಎಸ್ ನಾಯಕ ರೇವಣ್ಣ
ಜೆಡಿಎಸ್ ಗೆದ್ದ ಅಭ್ಯರ್ಥಿ ಸ್ವರೂಪ್ – ಜೆಡಿಎಸ್ ನಾಯಕ ರೇವಣ್ಣ

ಇತ್ತ ಕಾಂಗ್ರೆಸ್‌ನ ಬನವಾಸೆ ರಂಗಸ್ವಾಮಿ ಮೂರನೇ ಸ್ಥಾನಕ್ಕೆ ಸಮಾಧಾನ ಪಟ್ಟುಕೊಂಡಿದ್ದಾರೆ. ಕಳೆದ ಬಾರಿ ಗೆಲುವು ಸಾಧಿಸಿದ್ದ ಪ್ರೀತಂಗೌಡ ದೇವೇಗೌಡ ಕುಟುಂಬದ ವಿರುದ್ದ ಸದಾ ಹರಿಹಾಯುತ್ತಿದ್ದರು. ಅದರಲ್ಲೂ ರೇವಣ್ಣನ ವಿರುದ್ದ ಎಲ್ಲ ಕಡೆ ವ್ಯಂಗ್ಯವಾಗಿ ಮಾತನಾಡುತ್ತ, ಗೇಲಿ ಮಾಡುತ್ತಲೇ ಬಂದಿದ್ದ ಪ್ರೀತಂಗೌಡ ಕೊನೆಗೂ ಸೋಲುಂಡಿದ್ದಾರೆ.

ಸೋತ ಬಿಜೆಪಿ ಅಭ್ಯರ್ಥಿ ಪ್ರೀತಮ್‌ಗೌಡ ಮಾಧ್ಯಮ ಪ್ರತಿನಿಧಿಗಳೊಂದಿಗೆ ಪ್ರತಿಕ್ರಿಯಿಸಿದ್ದು, ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಸ್ವರೂಪ್ ಅವರಿಗೆ ಅಭಿನಂದನೆ ಸಲ್ಲಿಸಿದ್ದು, ಹಾಸನದ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡಿ ಕೆಲಸ ಮಾಡಲೆಂದು ಆಶಿಸುತ್ತೇನೆ ಎಂದು ಸ್ವರೂಪ್‌ಗೆ ಶುಭ ಕೋರಿದ್ದಾರೆ. ಒಟ್ಟಾರೆಯಾಗಿ ಹಾಸನ ಕ್ಷೇತ್ರವನ್ನು ಶತಾಯಗತಾಯ ಜೆಡಿಎಸ್ ತೆಕ್ಕೆಗೆ ತೆಗೆದುಕೊಳ್ಳಬೇಕೆಂದು ಬಯಸಿದ್ದ ಹೆಚ್‌.ಡಿ. ರೇವಣ್ಣಅವರಿಗೆ ಸ್ವರೂಪ್ ಗೆಲುವು ಬಲತಂದುಕೊಟ್ಟಿದೆ.

ಹಾಸನ ಕ್ಷೇತ್ರದ ಹಿಂದಿನ ಚುನಾವಣಾ ಇತಿಹಾಸ ನೋಡುವುದಾದರೆ 1957ರಿಂದ ಈಚೆ 2018 ರವರೆಗೆ 14 ಚುನಾವಣೆಗಳು ಈ ಕ್ಷೇತ್ರದಲ್ಲಿ ನಡೆದಿವೆಜೆಡಿಎಸ್ ಹಾಗೂ ಅದಕ್ಕೂ ಹಿಂದಿನ ಜನತಾ ಪಕ್ಷ ಅತಿ ಹೆಚ್ಚು ಬಾರಿ ಗೆದ್ದಿವೆಕಾಂಗ್ರೆಸ್ ಬಾರಿ ಗೆದ್ದಿದೆಬಿಜೆಪಿ ಅಭ್ಯರ್ಥಿಗಳೂ ಎರಡು ಬಾರಿ ಗೆದ್ದಿದ್ದಾರೆ.


ಇದನ್ನೂ ಓದಿರಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಹಾಸನ: ಒಕ್ಕಲಿಗರ ಮೇಲಾಟದ ಕ್ಷೇತ್ರದಲ್ಲಿ ಜೆಡಿಎಸ್-ಬಿಜೆಪಿ ನಡುವೆ ಫೈಟ್


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಧಾರವಾಡ ಅಖಾಡ: ಕೇಸರಿ ಕೋಟೆಯಲ್ಲೇ ಸಂಘೀ ಸೇನಾಧಿಪತಿ ಪ್ರಹ್ಲಾದ್ ಜೋಶಿಗೆ ನಡುಕ!!

0
ಪೇಡಾ ನಗರಿ, ಸಾಂಸ್ಕೃತಿಕ ರಾಜಧಾನಿ, ಕರ್ನಾಟಕದ ಆಕ್ಸ್‌ಫರ್ಡ್ ಎಂದೆಲ್ಲ ಗುರುತಿಸಲ್ಪಡುವ ಧಾರವಾಡ ನಗರ ಕೇಂದ್ರವಾಗಿರುವ ಧಾರವಾಡ ಲೋಕಸಭಾ ಕ್ಷೇತ್ರ ಮಲೆನಾಡು, ಅರೆಮಲೆನಾಡು ಮತ್ತು ಬಯಲುನಾಡುಗಳ ವಿಭಿನ್ನ ನೈಸರ್ಗಿಕ ಗುಣ-ಧರ್ಮದ ಸೀಮೆ. ಖಡಕ್ ಜವಾರಿ...