Homeಮುಖಪುಟಭಾರತದಲ್ಲಿ ಹಿಂದೂಗಳನ್ನು ಅಲ್ಪಸಂಖ್ಯಾತರು ಎನ್ನಲಾಗುವುದಿಲ್ಲ: ಸುಪ್ರೀಂ ಕೋರ್ಟ್

ಭಾರತದಲ್ಲಿ ಹಿಂದೂಗಳನ್ನು ಅಲ್ಪಸಂಖ್ಯಾತರು ಎನ್ನಲಾಗುವುದಿಲ್ಲ: ಸುಪ್ರೀಂ ಕೋರ್ಟ್

- Advertisement -
- Advertisement -

ಧರ್ಮವು ಯಾವುದೇ ಗಡಿಗಳನ್ನು ಹೊಂದಿಲ್ಲ. ಧರ್ಮವನ್ನು ಸಂಪೂರ್ಣ ಭಾರತದ ಸನ್ನಿವೇಶದಲ್ಲಿ ನೋಡಬೇಕು. ಹಾಗಾಗಿ ಭಾರತದಲ್ಲಿ ಹಿಂದೂಗಳು ಅಲ್ಪಸಂಖ್ಯಾತರಲ್ಲ ಎಂದು ಅಭಿಪ್ರಾಯಪಟ್ಟಿರುವ ಸುಪ್ರೀಂ ಕೋರ್ಟ್, ಕೆಲವು ರಾಜ್ಯಗಳಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂ ಸಮುದಾಯಗಳಿಗೆ ಸವಲತ್ತುಗಳನ್ನು ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.

ಭಾರತದ ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೊಬ್ಡೆ ನೇತೃತ್ವದ ಮೂವರು ಸದಸ್ಯರ ಉನ್ನತ ನ್ಯಾಯಾಲಯದ ನ್ಯಾಯಪೀಠ ಈ ಪ್ರಕರಣದಲ್ಲಿ ಯಾವುದೇ ಮಾರ್ಗಸೂಚಿಗಳನ್ನು ಅಂಗೀಕರಿಸಲಾಗುವುದಿಲ್ಲ ಎಂದು ಹೇಳಿದೆ. ಒಂದು ಗುಂಪು ಅಥವಾ ಸಮುದಾಯವನ್ನು ಅಲ್ಪಸಂಖ್ಯಾತರು ಎಂದು ಘೋಷಿಸುವುದು ಸರ್ಕಾರವೇ ಹೊರತು ನ್ಯಾಯಾಲಯಗಳಲ್ಲ ಎಂದು ಅರ್ಜಿದಾರರಿಗೆ ಮತ್ತು ಬಿಜೆಪಿ ಮುಖಂಡ ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯರಿಗೆ ಕೋರ್ಟ್‌ ನೆನಪಿಸಿದೆ.

ಪಾರ್ಸಿಗಳು, ಮುಸ್ಲಿಮರು, ಕ್ರಿಶ್ಚಿಯನ್ನರು, ಸಿಖ್ಖರು ಮತ್ತು ಬೌದ್ಧರ ಐದು ಸಮುದಾಯಗಳನ್ನು ಅಲ್ಪಸಂಖ್ಯಾತರನ್ನಾಗಿ ಪಟ್ಟಿ ಮಾಡಿದ ಕೇಂದ್ರದ 26 ವರ್ಷದ ಅಧಿಸೂಚನೆಯ ಮಾನ್ಯತೆಯನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿತ್ತು.

“ಭಾಷೆಗಳನ್ನು ರಾಜ್ಯವಾರು ನಿರ್ಬಂಧಿಸಬಹುದು … ಆದರೆ ಧರ್ಮಗಳಿಗೆ ರಾಜ್ಯ ಗಡಿಗಳಿಲ್ಲ. ನಾವು ಪ್ಯಾನ್-ಇಂಡಿಯಾ ವಿಧಾನವನ್ನು ತೆಗೆದುಕೊಳ್ಳಬೇಕಾಗಿದೆ. ಲಕ್ಷದ್ವೀಪದಲ್ಲಿ ಮುಸ್ಲಿಮರು ಹಿಂದೂ ಕಾನೂನನ್ನು ಅನುಸರಿಸುತ್ತಾರೆ” ಎಂದು ನ್ಯಾಯಮೂರ್ತಿಗಳಾದ ಬಿ.ಆರ್. ಮತ್ತು ಸೂರ್ಯ ಕಾಂತ್ ಹೇಳಿದ್ದಾರೆ. “ನಾವು ನಿಮ್ಮ (ಅರ್ಜಿದಾರ) ವಾದವನ್ನು ಒಪ್ಪುವುದಿಲ್ಲ. ನ್ಯಾಯಾಲಯಗಳು ಯಾರನ್ನೂ ಅಲ್ಪಸಂಖ್ಯಾತರೆಂದು ಘೋಷಿಸಿಲ್ಲ, ಅದನ್ನು ಸರ್ಕಾರವೇ ಮಾಡುತ್ತದೆ” ಎಂದಿದ್ದಾರೆ.

ಈ ವಿಷಯದಲ್ಲಿ ಸುಪ್ರೀಂ ಕೋರ್ಟ್ ಈ ಹಿಂದೆ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರನ್ನು ಸಂಪರ್ಕಿಸಿತ್ತು. ಎಂಟು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹಿಂದೂಗಳು ಅಲ್ಪಸಂಖ್ಯಾತ ಜನಸಂಖ್ಯೆ ಎಂದು ಹೇಳಲಾಗಿತ್ತು. ಇವುಗಳಲ್ಲಿ ಪಂಜಾಬ್, ಮಿಜೋರಾಂ, ನಾಗಾಲ್ಯಾಂಡ್, ಮೇಘಾಲಯ, ಅರುಣಾಚಲ ಪ್ರದೇಶ ಮತ್ತು ಮಣಿಪುರ ಮತ್ತು ಕೇಂದ್ರ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರ ಮತ್ತು ಲಕ್ಷದ್ವೀಪ ಸೇರಿವೆ.

ಪ್ಯಾನ್-ಇಂಡಿಯಾ ಸನ್ನಿವೇಶದಲ್ಲಿ ಧರ್ಮದ ಬಗ್ಗೆ ನ್ಯಾಯಾಲಯದ ಅವಲೋಕನವು ಕೇಂದ್ರ ಸರ್ಕಾರದ ಹೊಸ ಪೌರತ್ವ ಕಾನೂನಿನ ವಿರುದ್ಧ ಹೆಚ್ಚುತ್ತಿರುವ ಪ್ರತಿಭಟನೆಯ ಹಿನ್ನೆಲೆಯಲ್ಲಿ ಬಂದಿರುವುದರಿಂದ ಮಹತ್ವ ಸಿಕ್ಕಿದೆ.

ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಪ್ರತಿಪಕ್ಷಗಳು ಪದೇ ಪದೇ ಸರ್ಕಾರದ ಮೇಲೆ ದಾಳಿ ನಡೆಸಿವೆ. ಇದು ಮುಸ್ಲಿಮರು ಸೇರಿದಂತೆ ಇತರ ಧಾರ್ಮಿಕ ಸಮುದಾಯಗಳ ವಿರುದ್ಧ ತಾರತಮ್ಯವನ್ನುಂಟುಮಾಡುತ್ತದೆ ಮತ್ತು ಸಂವಿಧಾನದ 14 ನೇ ವಿಧಿಯನ್ನು ಉಲ್ಲಂಘಿಸುತ್ತದೆ ಎಂದು ಅವು ಆರೋಪಿಸಿವೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಧಾರವಾಡ ಅಖಾಡ: ಕೇಸರಿ ಕೋಟೆಯಲ್ಲೇ ಸಂಘೀ ಸೇನಾಧಿಪತಿ ಪ್ರಹ್ಲಾದ್ ಜೋಶಿಗೆ ನಡುಕ!!

0
ಪೇಡಾ ನಗರಿ, ಸಾಂಸ್ಕೃತಿಕ ರಾಜಧಾನಿ, ಕರ್ನಾಟಕದ ಆಕ್ಸ್‌ಫರ್ಡ್ ಎಂದೆಲ್ಲ ಗುರುತಿಸಲ್ಪಡುವ ಧಾರವಾಡ ನಗರ ಕೇಂದ್ರವಾಗಿರುವ ಧಾರವಾಡ ಲೋಕಸಭಾ ಕ್ಷೇತ್ರ ಮಲೆನಾಡು, ಅರೆಮಲೆನಾಡು ಮತ್ತು ಬಯಲುನಾಡುಗಳ ವಿಭಿನ್ನ ನೈಸರ್ಗಿಕ ಗುಣ-ಧರ್ಮದ ಸೀಮೆ. ಖಡಕ್ ಜವಾರಿ...