Homeಮುಖಪುಟಪಕ್ಷದ ದೆಹಲಿ ನಾಯಕರಿಗೆ ಪಂಜಾಬ್‌ನಲ್ಲಿ ಪ್ರಮುಖ ಹುದ್ದೆ: ಎಎಪಿ ವಿರುದ್ಧ ಪ್ರತಿಪಕ್ಷಗಳ ಟೀಕೆ

ಪಕ್ಷದ ದೆಹಲಿ ನಾಯಕರಿಗೆ ಪಂಜಾಬ್‌ನಲ್ಲಿ ಪ್ರಮುಖ ಹುದ್ದೆ: ಎಎಪಿ ವಿರುದ್ಧ ಪ್ರತಿಪಕ್ಷಗಳ ಟೀಕೆ

- Advertisement -
- Advertisement -

ಆಮ್ ಆದ್ಮಿ ಪಕ್ಷ (ಎಎಪಿ) ನೇತೃತ್ವದ ಪಂಜಾಬ್ ಸರ್ಕಾರವು ಕೆಲವು ಪ್ರಮುಖ ಹುದ್ದೆಗಳಿಗೆ ಪಕ್ಷದ ದೆಹಲಿಯ ನಾಯಕರನ್ನು ಸರಣಿಯಾಗಿ ನೇಮಕಾತಿ ಮಾಡಿರುವುದು ವಿರೋಧ ಪಕ್ಷಗಳಿಂದ ಟೀಕೆಗೆ ಗುರಿಯಾಗಿದ್ದು, ರಾಜ್ಯದಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ. ಪಕ್ಷದ ದೆಹಲಿ ನಾಯಕರಿಗೆ

ದೆಹಲಿಯ ಮಾಜಿ ಸಚಿವ ಸತ್ಯೇಂದ್ರ ಜೈನ್ ಅವರ ವಿಶೇಷ ಕರ್ತವ್ಯ ಅಧಿಕಾರಿ (OSD) ಶಲೀನ್ ಮಿತ್ರ ಅವರನ್ನು ಪಂಜಾಬ್ ಆರೋಗ್ಯ ಸಚಿವ ಡಾ. ಬಲ್ಬೀರ್ ಸಿಂಗ್ ಅವರ OSD ಆಗಿ ನೇಮಿಸಲಾಗಿದೆ. ದೆಹಲಿಯ ಇಬ್ಬರು ನಾಯಕಿಯರಾದ ರೀನಾ ಗುಪ್ತಾ ಮತ್ತು ದೀಪಕ್ ಚೌಹಾಣ್ ಅವರನ್ನು ಕ್ರಮವಾಗಿ ಪಂಜಾಬ್ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಪಂಜಾಬ್ ದೊಡ್ಡ ಕೈಗಾರಿಕಾ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸಿದ ಕೆಲವೇ ದಿನಗಳಲ್ಲಿ ಈ ಬೆಳವಣಿಗೆ ನಡೆದಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

ಈ ನೇಮಕಾತಿಗಳ ಬಗ್ಗೆ ವಿರೋಧ ಪಕ್ಷವು ಸರ್ಕಾರವನ್ನು ಪ್ರಶ್ನಿಸಿದ್ದು, ರಾಜ್ಯದ ಹೊರಗಿನ ವ್ಯಕ್ತಿಗಳನ್ನು ಪ್ರಮುಖ ಆಡಳಿತಾತ್ಮಕ ಪಾತ್ರಗಳಲ್ಲಿ ನೇಮಿಸುವುದು ಪಂಜಾಬಿ ಗೌರವಕ್ಕೆ ಹಾನಿ ಮಾಡುತ್ತಿದೆ ಎಂದು ಹೇಳಿದೆ. ಮುಖ್ಯಮಂತ್ರಿ ಭಗವಂತ್ ಮಾನ್ “ಪಂಜಾಬ್ ಅನ್ನು ದೆಹಲಿ ನಾಯಕತ್ವಕ್ಕೆ ಶರಣಾಗಿಸಿದ್ದಾರೆ” ಎಂದು ಅವರು ಆರೋಪಿಸಿದ್ದಾರೆ.

ಶಲೀನ್ ಮಿತ್ರ ಅವರು ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್‌ನ ಯೋಜನಾ ವ್ಯವಸ್ಥಾಪಕರೂ ಆಗಿದ್ದವರು. ಪಂಜಾಬ್ ಆರೋಗ್ಯ ಸಚಿವ ಡಾ. ಬಲ್ಬೀರ್ ಸಿಂಗ್ ಅವರೊಂದಿಗೆ ಮಿತ್ರಾ ಅವರು ಕುಳಿತಿರುವ ಸಭೆಯ ಛಾಯಾಚಿತ್ರ ನಿನ್ನೆ ವೈರಲ್ ಆಗಿದೆ.

ಕಳೆದ ತಿಂಗಳು, ಎಎಪಿ ದೆಹಲಿಯ ವಕ್ತಾರೆ ಮತ್ತು ಪಕ್ಷದ ದೆಹಲಿ ಘಟಕದ ಮಾಜಿ ಕಾರ್ಯದರ್ಶಿಯಾಗಿದ್ದ ರೀನಾ ಗುಪ್ತಾ, ಪಂಜಾಬ್ ಮಾಲಿನ್ಯ ನಿಯಂತ್ರಣ ಮಂಡಳಿಯ (ಪಿಪಿಸಿಬಿ) ಅಧ್ಯಕ್ಷೆಯಾಗಿ ನೇಮಕಗೊಂಡ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅವರು ಈ ಹಿಂದೆ ರಾಜ್ಯಸಭಾ ಸದಸ್ಯ ಸಂದೀಪ್ ಪಾಠಕ್ ಅವರೊಂದಿಗೆ ಕೆಲಸ ಮಾಡಿದ್ದರು. ಎರಡೂ ನೇಮಕಾತಿಗಳು ರಾಜ್ಯದಲ್ಲಿ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದ್ದವು.

“ಪಂಜಾಬ್ ಅನ್ನು ದೆಹಲಿಯಿಂದ ‘ರಿಮೋಟ್-ಕಂಟ್ರೋಲ್ಡ್’ ಮಾಡಲಾಗುತ್ತಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ, ವಿರೋಧ ಪಕ್ಷದ ನಾಯಕ ಪ್ರತಾಪ್ ಸಿಂಗ್ ಬಜ್ವಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಪ್ರಶ್ನಿಸಿದ್ದಾರೆ.

“ಎಎಪಿ ಸರ್ಕಾರ ದೆಹಲಿಯ ನಾಯಕ ಸತ್ಯೇಂದ್ರ ಜೈನ್ ಅವರ ಪಿಎ ಶಲೀನ್ ಮಿತ್ರ ಅವರನ್ನು ಪಂಜಾಬ್ ಸಂಪುಟ ಸಚಿವ ಡಾ. ಬಲ್ಬೀರ್ ಸಿಂಗ್ ಅವರಿಗೆ OSD ಆಗಿ ನೇಮಿಸಿದೆ. ಪಂಜಾಬ್ ಅನ್ನು ದೆಹಲಿಯಿಂದ ರಿಮೋಟ್-ಕಂಟ್ರೋಲ್ಡ್ ಏಕೆ ಮಾಡಲಾಗುತ್ತಿದೆ? ಪಂಜಾಬಿಗಳಿಗೆ ಉದ್ಯೋಗಗಳು ಅಥವಾ ದೆಹಲಿ ಸಹಾಯಕರಿಗೆ ಬಹುಮಾನಗಳು? ಬಲವಂತ್ ಮಾನ್ ಅವರು ಪಂಜಾಬ್ ಅನ್ನು ದೆಹಲಿ ವಾಲಾಗಳಿಗೆ ಬಿಟ್ಟುಕೊಟ್ಟರು,” ಎಂದು ಬಜ್ವಾ ಎಕ್ಸ್‌ನಲ್ಲಿ ಬರೆದಿದ್ದಾರೆ.

ಅಲ್ಲದೆ, ಕಾಂಗ್ರೆಸ್ ಶಾಸಕ ಸುಖ್‌ಪಾಲ್ ಖೈರಾ ಕೂಡಾ ಈ ಬಗ್ಗೆ ಪ್ರಶ್ನಿಸಿದ್ದು, “ಭಗವಂತ್ ಮಾನ್ ಮತ್ತು ಅರವಿಂದ್ ಕೇಜ್ರಿವಾಲ್ ಅವರು ವೀಡಿಯೊ 125 ರ ಪ್ರಕಾರ ವಿವರಿಸಬೇಕೆಂದು ನಾನು ಒತ್ತಾಯಿಸುತ್ತೇನೆ. ಪಂಜಾಬ್‌ನ ವಿವಿಧ ಇಲಾಖೆಗಳು ಮತ್ತು ಮಂತ್ರಿಗಳ ಮೇಲೆ ನಿಗಾ ಇಡಲು ದೆಹಲಿಯಿಂದ ನಿಯೋಜಿತರಾಗಿರುವ ಆಮ್ ಆದ್ಮಿ ಪಕ್ಷದ ಜನರು ತಮ್ಮ ಸಂಬಳ, ಸವಲತ್ತುಗಳು ಮತ್ತು ಮನೆ, ಆರೈಕೆ, ಇಂಧನ ಮುಂತಾದ ಇತರ ದೈನಂದಿನ ಖರ್ಚುಗಳನ್ನು ಎಲ್ಲಿಂದ ಪಡೆಯುತ್ತಿದ್ದಾರೆ? ಈ ಹಣವು ಭ್ರಷ್ಟ ವಿಧಾನಗಳ ಮೂಲಕ ಗಳಿಸಿದ ಎಲ್ಲಾ ಅಕ್ರಮ ಸಂಪತ್ತಿನಿಂದ ಬರುತ್ತಿದೆಯೇ?” ಎಂದು ಪ್ರಶ್ನಿಸಿದ್ದಾರೆ.

ಇದಕ್ಕೂ ಮೊದಲು ಮತ್ತೊಂದು ಹೇಳಿಕೆಯಲ್ಲಿ ಅವರು, “ಆರೋಗ್ಯ ಸಚಿವ ಬಲ್ಬೀರ್ ಅವರ ಒಎಸ್‌ಡಿ ಆಗಿ ಶಲೀನ್ ಮಿತ್ರಾ ಅವರನ್ನು ನೇಮಕ ಮಾಡುವ ಮೂಲಕ  ಅರವಿಂದ್ ಕೇಜ್ರಿವಾಲ್ ಪಂಜಾಬ್ ಸರ್ಕಾರವನ್ನು ರಿಮೋಟ್-ಕಂಟ್ರೋಲ್ ಮಾಡುತ್ತಿದ್ದಾರೆ. ಅವರು ಪಂಜಾಬ್‌ನ ಎಲ್ಲಾ ಪ್ರಮುಖ ಹುದ್ದೆಗಳನ್ನು ನಿಧಾನವಾಗಿ ವಶಪಡಿಸಿಕೊಂಡಿದ್ದಾರೆ. ಸಿಎಂ ಭಗವಂತ್ ಮಾನ್ ಕೇವಲ ‘ಡಮ್ಮಿ’ ಆಗಿದ್ದು, ಅವರು ಜೋಕ್‌ಗಳನ್ನು ಹೇಳಲು, ನೃತ್ಯ ಮಾಡಲು, ರಿಬ್ಬನ್‌ಗಳನ್ನು ಕತ್ತರಿಸಲು, ಅವರ ಭದ್ರತೆಯನ್ನು ಆನಂದಿಸಲು ಮಾತ್ರ ಇದ್ದಾರೆ” ಎಂದು ಹೇಳಿದ್ದಾರೆ.

ಶಿರೋಮಣಿ ಅಕಾಲಿ ದಳ ಕೂಡಾ ಈ ಅವಕಾಶವನ್ನು ಬಳಸಿಕೊಂಡು ರಾಜ್ಯ ಸರ್ಕಾರವನ್ನು ಟೀಕಿಸಿದ್ದು, “ಮತ್ತೊಂದು ಆಘಾತಕಾರಿ ಬೆಳವಣಿಗೆ. ಜೈಲಿನಲ್ಲಿರುವ ದೆಹಲಿ ಆಮ್ ಆದ್ಮಿ ಪಕ್ಷದ ಸಚಿವ ಸತ್ಯೇಂದ್ರ ಜೈನ್ ಅವರ ಒಎಸ್‌ಡಿ ಶಲೀನ್ ಮಿತ್ರ ಈಗ ಪಂಜಾಬ್ ಆರೋಗ್ಯ ಸಚಿವರಿಗೆ ಒಎಸ್‌ಡಿ ಆಗಿರುತ್ತಾರೆ. ಇದರರ್ಥ ಈ ಸಚಿವಾಲಯವನ್ನು ದೆಹಲಿಯ ಭ್ರಷ್ಟ ಎಎಪಿ ನಾಯಕತ್ವವು ವಹಿಸಿಕೊಂಡಿದೆ.” ಎಂದು ಹೇಳಿದೆ.

“ಅಧಿಕಾರದಿಂದ ಹೊರಹಾಕುವ ಕ್ಷಣಗಣನೆ ಪ್ರಾರಂಭವಾಗಿದೆ ಎಂದು ಚೆನ್ನಾಗಿ ತಿಳಿದಿದ್ದರೂ, ಎಎಪಿ ನಾಯಕತ್ವವು ಪಂಜಾಬ್‌ನ ಲೂಟಿಯನ್ನು ತ್ವರಿತಗೊಳಿಸಲು ಬಯಸುತ್ತಿದೆ ಎಂದು ತೋರುತ್ತದೆ. ಶಿರೋಮಣಿ ಅಕಾಲಿ ದಳವು ರಾಜ್ಯದಲ್ಲಿ ಅಧಿಕಾರ ವಹಿಸಿಕೊಂಡ ನಂತರ ಪ್ರತಿಯೊಂದು ಭ್ರಷ್ಟಾಚಾರ ಕೃತ್ಯವನ್ನು ಬಹಿರಂಗಪಡಿಸಲು ಮತ್ತು ಶಿಕ್ಷಿಸಲು ಬದ್ಧವಾಗಿದೆ.” ಎಂದು ಪಕ್ಷ ಹೇಳಿದೆ.

ಅದಾಗ್ಯೂ, ಆಡಳಿತಾರೂಢ ಎಎಪಿ ತನ್ನ ನಿರ್ಧಾರನ್ನು ಸಮರ್ಥಿಸಿಕೊಂಡಿದ್ದು ವಿರೋಧ ಪಕ್ಷಗಳಿಗೆ ತಿರುಗೇಟು ನೀಡಿದೆ. ಪಂಜಾಬ್ ಹಣಕಾಸು ಸಚಿವ ಹರ್ಪಾಲ್ ಚೀಮಾ ಪ್ರತಿಕ್ರಿಯಿಸಿ, “ಪ್ರಶಾಂತ್ ಕಿಶೋರ್ ಅವರನ್ನು ಮುಖ್ಯಮಂತ್ರಿಯ ಮುಖ್ಯ ಸಲಹೆಗಾರರನ್ನಾಗಿ ನೇಮಿಸಿದ್ದು ‘ಪಂಜಾಬ್‌ನ ಗೌರವ’ಕ್ಕೆ ಹೊಡೆತವಲ್ಲವೇ?” ಎಂದು ಪ್ರಶ್ನಿಸಿದ್ದಾರೆ.

“ಅವರ ಆಡಳಿತದಲ್ಲಿ ಹೊರಗಿನವರಿಗೆ ಯಾವುದೇ ಹೊಣೆಗಾರಿಕೆ, ಪ್ರಶ್ನೆಗಳಿಲ್ಲದೆ ಅಧಿಕಾರ ವಹಿಸಲಾಯಿತು. ಅಂತಹ ಪ್ರತಾಪ್ ಸಿಂಗ್ ಬಜ್ವಾ ಈಗ OSD ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ, ಇದು ಶುದ್ಧ ಬೂಟಾಟಿಕೆ. ಎಎಪಿ ಆಡಳಿತವನ್ನು ನೀಡಲು ಇಲ್ಲಿದ್ದು, ಹೊರಗುತ್ತಿಗೆ ನೀಡಲು ಅಲ್ಲ.” ಎಂದು ಹೇಳಿದ್ದಾರೆ.

“ಕಾಂಗ್ರೆಸ್ ಪಕ್ಷವು ಪ್ರಶಾಂತ್ ಕಿಶೋರ್ ಅವರನ್ನು ಪಂಜಾಬ್‌ನ ವಾಸ್ತವಿಕ ಮುಖ್ಯಮಂತ್ರಿಯನ್ನಾಗಿ ಮಾಡಿದಾಗ, ಒಂದೇ ಒಂದು ಪ್ರಶ್ನೆಯೂ ಉದ್ಭವಿಸಲಿಲ್ಲ. ಆಗ ಯಾವುದೇ ಹೊಣೆಗಾರಿಕೆಯೂ ಇರಲಿಲ್ಲ. ಯಾವುದೇ ಪ್ರತಿಭಟನೆ ನಡೆದಿಲ್ಲ. ಆಗ ಪ್ರತಾಪ್ ಸಿಂಗ್ ಬಜ್ವಾ ಮೌನವಾಗಿದ್ದರು” ಎಂದು ಅವರು ಹೇಳಿದ್ದಾರೆ.

“ಪಾಕಿಸ್ತಾನಿ ಏಜೆಂಟ್ ಅರುಸಾ ಆಲಂ, ಕಾಂಗ್ರೆಸ್ ಆಳ್ವಿಕೆಯಲ್ಲಿ ಸಿಎಂ ಕಚೇರಿಗೆ ಮುಕ್ತ ಪ್ರವೇಶವನ್ನು ಹೊಂದಿದ್ದರು. ಅವರ ‘ಅನುಮೋದನೆ’ ಇಲ್ಲದೆ ಯಾವುದೇ ಫೈಲ್‌ಗಳೂ ಚಲಿಸುತ್ತಿರಲಿಲ್ಲ. ಛತ್ತೀಸ್‌ಗಢದ ಕಾಂಗ್ರೆಸ್ ನಾಯಕ ಭೂಪೇಶ್ ಬಾಘೇಲ್ ಪಂಜಾಬ್‌ನ ಕಾಂಗ್ರೆಸ್ ಪ್ರಭಾರಿ ಆಗಿದ್ದಾರೆ. ಇದು ಪಂಜಾಬ್ ಕಾಂಗ್ರೆಸ್ ರಿಮೋಟ್ ಕಂಟ್ರೋಲ್‌ನಲ್ಲಿದೆ ಎಂಬ ಸ್ಪಷ್ಟ ಸಂದೇಶ.” ಎಂದು ಎಎಪಿ ನಾಯಕ ಹೇಳಿದ್ದಾರೆ.

“ಇದು ಕೇವಲ ಆಡಳಿತದ ಬಗ್ಗೆ ಅಲ್ಲ. ಇದು ಕಾಂಗ್ರೆಸ್‌ನ ಅರ್ಹತೆಯ ಬಗ್ಗೆಗಿನ ವಿಚಾರವಾಗಿದೆ. ಎಎಪಿ ಕಾಂಗ್ರೆಸ್ ಅಲ್ಲ. ನಾವು ಪಂಜಾಬ್ ಅನ್ನು ಹೊರಗುತ್ತಿಗೆ ನೀಡುವುದಿಲ್ಲ, ನಾವು ಪಂಜಾಬಿಗಳಿಗೆ ಅಧಿಕಾರ ನೀಡುತ್ತೇವೆ. ನಾವು ವ್ಯವಸ್ಥೆಗಳನ್ನು ನಿರ್ಮಿಸುತ್ತಿದ್ದೇವೆ, ಸಿಕೋಫಾನ್ಸಿ ಅಲ್ಲ.” ಎಂದು ಅವರು ಹೇಳಿದ್ದಾರೆ. ಪಕ್ಷದ ದೆಹಲಿ ನಾಯಕರಿಗೆ

ಇಲ್ಲಿ ಕ್ಲಿಕ್ ಮಾಡಿ

ಇದನ್ನೂಓದಿ:  ಶಿಕ್ಷಣ ನಿಧಿ ತಡೆಹಿಡಿದ ಕೇಂದ್ರದ ವಿರುದ್ಧ ಸುಪ್ರಿಂಕೋರ್ಟ್‌ ಮೆಟ್ಟಿಲೇರಲಿದ್ದೇವೆ: ಸಿಎಂ ಸ್ಟಾಲಿನ್

ಶಿಕ್ಷಣ ನಿಧಿ ತಡೆಹಿಡಿದ ಕೇಂದ್ರದ ವಿರುದ್ಧ ಸುಪ್ರಿಂಕೋರ್ಟ್‌ ಮೆಟ್ಟಿಲೇರಲಿದ್ದೇವೆ: ಸಿಎಂ ಸ್ಟಾಲಿನ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -