Homeರಂಜನೆಕ್ರೀಡೆನ್ಯೂಜಿಲೆಂಡ್ ಎದುರು ಆಫ್ಘಾನಿಸ್ತಾನ ಗೆಲ್ಲಲು ಪ್ರಾರ್ಥಿಸುತ್ತಿರುವ ಭಾರತೀಯ ಅಭಿಮಾನಿಗಳು- ನಗು ತರಿಸುವ ಮೀಮ್ಸ್‌ಗಳು ಇಲ್ಲಿವೆ

ನ್ಯೂಜಿಲೆಂಡ್ ಎದುರು ಆಫ್ಘಾನಿಸ್ತಾನ ಗೆಲ್ಲಲು ಪ್ರಾರ್ಥಿಸುತ್ತಿರುವ ಭಾರತೀಯ ಅಭಿಮಾನಿಗಳು- ನಗು ತರಿಸುವ ಮೀಮ್ಸ್‌ಗಳು ಇಲ್ಲಿವೆ

- Advertisement -
- Advertisement -

ಇಂದು ಐಸಿಸಿ ಟಿ20 ವಿಶ್ವಕಪ್‌ನ ಗ್ರೂಪ್ 2ರ ನ್ಯೂಜಿಲೆಂಡ್ ಮತ್ತು ಆಫ್ಘಾನಿಸ್ತಾನ ನಡುವಿನ ಕೊನೆಯ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಆಫ್ಘಾನಿಸ್ತಾನ ಗೆಲ್ಲಲೆಂದು ಭಾರತೀಯ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದು, ಆಫ್ಘಾನಿಸ್ತಾನ ತಂಡವನ್ನು ಬೆಂಬಲಿಸುತ್ತಿವೆ. ಏಕೆಂದರೆ ನ್ಯೂಜಿಲೆಂಡ್ ಗೆದ್ದಲ್ಲಿ ಅದು ಸೆಮಿಫೈನಲ್ ತಲುಪಲಿದ್ದು ಭಾರತದ ಸೆಮಿಫೈನಲ್ ಕನಸು ನುಚ್ಚು ನೂರಾಗಲಿದೆ. ಒಂದು ವೇಳೆ ಆಫ್ಘಾನಿಸ್ತಾನ ಗೆದ್ದಲ್ಲಿ ಭಾರತಕ್ಕೆ ಸೆಮಿ ಫೈನಲ್ ತಲುಪುವ ಅವಕಾಶವಿರುತ್ತದೆ.

ಗ್ರೂಪ್ ಎರಡರಲ್ಲಿ ಪಾಕಿಸ್ತಾನವು 4ಕ್ಕೆ 4 ಪಂದ್ಯಗಳನ್ನು ಗೆದ್ದು ಸೆಮಿಫೈನಲ್ ತಲುಪಿದೆ. ಈ ಗ್ರೂಪ್‌ನಲ್ಲಿ ಇನ್ನೊಂದು ತಂಡಕ್ಕೆ ಮಾತ್ರ ಸೆಮಿಫೈನಲ್ ತಲುಪುವ ಅವಕಾಶವಿದ್ದು ಅದಕ್ಕಾಗಿ ಆಫ್ಘಾನಿಸ್ತಾನ, ನ್ಯೂಜಿಲೆಂಡ್, ಭಾರತ ತಂಡಗಳು ತೀವ್ರ ಪೈಪೋಟಿ ನಡೆಸುತ್ತಿವೆ. ನ್ಯೂಜಿಲೆಂಡ್ ತಂಡವು 4 ಪಂದ್ಯಗಳಲ್ಲಿ 3 ನ್ನು ಜಯಿಸಿ 6 ಪಾಯಿಂಟ್ ಮತ್ತು +1.277 ನೆಟ್‌ ರನ್‌ ರೇಟ್ ಪಡೆದು ಎರಡನೇ ಸ್ಥಾನದಲ್ಲಿದೆ. ಭಾರತ ಎರಡು ಪಂದ್ಯ ಗೆದ್ದು 4 ಪಾಯಿಂಟ್ ಮತ್ತು ಉತ್ತಮ ನೆಟ್ ರನ್‌ ರೇಟ್ (+1.619) ಹೊಂದಿದೆ. ಆಫ್ಘಾನಿಸ್ತಾನವು 4 ಪಂದ್ಯಗಳಲ್ಲಿ 2 ಅನ್ನು ಗೆದ್ದು 4 ಪಾಯಿಂಟ್ ಮತ್ತು ಉತ್ತಮ ನೆಟ್‌ ರನ್‌ರೇಟ್‌ನೊಂದಿಗೆ (+1.481) ನಾಲ್ಕನೇ ಸ್ಥಾನದಲ್ಲಿದೆ.

ಇಂದು ನ್ಯೂಜಿಲೆಂಡ್ ಮತ್ತು ಆಫ್ಘಾನಿಸ್ತಾನದ ಪಂದ್ಯ ನಡೆಯುತ್ತಿದೆ. ನ್ಯೂಜಿಲೆಂಡ್ ಗೆದ್ದರೆ ಭಾರತದ ಕನಸು ನುಚ್ಚು ನೂರಾಗುತ್ತದೆ. ಏಕೆಂದರೆ 8 ಪಾಯಿಂಟ್ ಪಡೆದು ಅದು ಸೆಮಿಫೈನಲ್ ಪ್ರವೇಶಿಸುತ್ತದೆ. ಒಂದು ವೇಳೆ ನ್ಯೂಜಿಲೆಂಡ್ ಕಡಿಮೆ ಅಂತರದಲ್ಲಿ ಸೋತರೆ, ಭಾರತಕ್ಕೆ ಅವಕಾಶ ತೆರೆದುಕೊಳ್ಳುತ್ತದೆ. ಏಕೆಂದರೆ ಆಗ ನ್ಯೂಜಿಲೆಂಡ್ 6 ಪಾಯಿಂಟ್, ಆಫ್ಘಾನಿಸ್ತಾನ 6 ಪಾಯಿಂಟ್ ಪಡೆದಿರುತ್ತವೆ (ನೆಟ್ ರನ್ ರೇಟ್ +1.481). ಅದೇ ರೀತಿಯಾಗಿ ಭಾರತವು ನಮೀಬಿಯಾ ಎದುರಿನ ಕೊನೆಯ ಪಂದ್ಯದಲ್ಲಿ ಭಾರೀ ಅಂತರದಿಂದ ಗೆದ್ದರೆ ಅದು ಸಹ 6 ಪಾಯಿಂಟ್ ಗಳಿಸುತ್ತದೆ. ಭಾರತದ ನೆಟ್‌ ರನ್ ರೇಟ್ ಮತ್ತಷ್ಟು ಹೆಚ್ಚಾಗುವುದರಿಂದ ಸೆಮಿಫೈನಲ್ ತಲುಪುವ ಅವಕಾಶವಿದೆ. ಹಾಗಾಗಿ ಹಲವಾರು ಜನ ಆಫ್ಘಾನಿಸ್ತಾನ ಗೆಲುವಿಗಾಗಿ ಪ್ರಾರ್ಥಿಸುತ್ತಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಮೀಮ್ಸ್‌ಗಳು ಹರಿದಾಡುತ್ತಿವೆ. ಕೆಲವೊಂದು ಇಲ್ಲಿವೆ.

ಇಂದು ಟಾಸ್ ಗೆದ್ದ ಆಫ್ಘಾನಿಸ್ತಾನವು ಬ್ಯಾಟಿಂಗ್ ಆಯ್ದುಕೊಂಡಿದೆ. ಆದರೆ 6 ಓವರ್‌ಗಳಲ್ಲಿ 23 ರನ್ ಗಳಿಸಿದ್ದು 3 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.


ಇದನ್ನೂ ಓದಿ: ಐಸಿಸಿ ಟಿ20 ವಿಶ್ವಕಪ್: ಭಾರತ ಸೆಮಿಫೈನಲ್ ತಲುಪಲು ಈ ಎರಡು ಪಂದ್ಯ ಬಹಳ ಮುಖ್ಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸೊರೇನ್ ಜಾಮೀನು ಅರ್ಜಿಗೆ ಉತ್ತರಿಸಲು ಇಡಿಗೆ ಕಾಲಾವಕಾಶ ನೀಡಿದ ಕೋರ್ಟ್‌

0
ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ಜಾಮೀನು ಅರ್ಜಿಗೆ ಉತ್ತರಿಸಲು ವಿಶೇಷ ಪಿಎಂಎಲ್‌ಎ ನ್ಯಾಯಾಲಯ ಮಂಗಳವಾರ ಜಾರಿ ನಿರ್ದೇಶನಾಲಯಕ್ಕೆ (ಇಡಿ) ಇನ್ನೂ ಒಂದು ವಾರ ಕಾಲಾವಕಾಶ ನೀಡಿದೆ. ನ್ಯಾಯಾಲಯವು ಪ್ರಕರಣದ ಮುಂದಿನ...