Homeಮುಖಪುಟ"ಸಾಹಿಬ್, ನಿಮ್ಮ ದುರಹಂಕಾರವನ್ನು ಪೋಷಿಸಬೇಡಿ": ಬಿಜೆಪಿ ವಿರುದ್ಧ ಶಿವಸೇನೆ ವಾಗ್ದಾಳಿ

“ಸಾಹಿಬ್, ನಿಮ್ಮ ದುರಹಂಕಾರವನ್ನು ಪೋಷಿಸಬೇಡಿ”: ಬಿಜೆಪಿ ವಿರುದ್ಧ ಶಿವಸೇನೆ ವಾಗ್ದಾಳಿ

- Advertisement -
- Advertisement -

“ಸಾಹಿಬ್, ನಿಮ್ಮ ದುರಹಂಕಾರವನ್ನು ಪೋಷಿಸಬೇಡಿ … ಅನೇಕ ಅಲೆಕ್ಸಾಂಡರ್‌ಗಳು ಸಮಯದ ಸಾಗರದಲ್ಲಿ ಮುಳುಗಿದ್ದಾರೆ …” ಎಂದು ಶಿವಸೇನೆಯ ಮುಖಂಡ ಸಂಜಯ್‌ ರಾವತ್‌ ಟ್ವೀಟ್‌ ಮಾಡುವ ಮೂಲಕ ಬಿಜೆಪಿಯ ವಿರುದ್ಧ ಹರಿಹಾಯ್ದಿದ್ದಾರೆ.

ಅಲ್ಲದೇ ಮಹಾರಾಷ್ಟ್ರದ ಜನರು ಶಿವಸೇನಾದಿಂದ ಮುಖ್ಯಮಂತ್ರಿಯನ್ನು ಬಯಸುತ್ತಾರೆ ಎಂದು ಸಂಜಯ್ ರೌತ್ ಎನ್‌ಸಿಪಿಯ ಶರದ್ ಪವಾರ್ ಅವರೊಂದಿಗಿನ ಭೇಟಿಯನ್ನು ’ಸೌಜನ್ಯದ ಭೇಟಿ’ಯ ನಂತರ ತಿಳಿಸಿದ್ದಾರೆ.

ಬಿಜೆಪಿಯೊಂದಿಗೆ ಅಧಿಕಾರ ಹಂಚಿಕೆಗಾಗಿ ವಾರದಿಂದಲೂ ಜಗಳವಾಡುತ್ತಿರುವ ಶಿವಸೇನೆ ಎರಡೂವರೆ ವರ್ಷಗಳ ಮುಖ್ಯಮಂತ್ರಿ ಹುದ್ದೆಗೆ ಪಟ್ಟು ಹಿಡಿದಿದೆ. “ಶಿವಸೇನೆ ನಿರ್ಧರಿಸಿದರೆ, ಅದು ರಾಜ್ಯದಲ್ಲಿ ಸ್ಥಿರವಾದ ಸರ್ಕಾರವನ್ನು ರಚಿಸಲು ಅಗತ್ಯವಾದ ಸಂಖ್ಯೆಗಳನ್ನು ಪಡೆಯುತ್ತದೆ. ಮಹಾರಾಷ್ಟ್ರದ ಜನರ ಮುಂದೆ ಇಡಲಾದ 50-50 ಅಧಿಕಾರ ಹಂಚಿಕೆಯ ಸೂತ್ರದ ಆಧಾರದ ಮೇಲೆ ಜನರು ಸರ್ಕಾರ ರಚಿಸುವ ಆದೇಶವನ್ನು ನೀಡಿದ್ದಾರೆ ಎಂದು ರಾವತ್‌ ಹೇಳಿದ್ದಾರೆ.

ಅದರಲ್ಲಿಯೂ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರೊಂದಿಗಿನ ಭೇಟಿಯ ನಂತರ ರಾವತ್‌ ಅವರ ಮಾತುಗಳಿಗೆ ಹೆಚ್ಚಿನ ಮಹತ್ವ ಬಂದಿದೆ. ಏಕೆಂದರೆ  ಪವಾರ್ ಅವರ ಪಕ್ಷವು 54 ಸ್ಥಾನಗಳನ್ನು ಮತ್ತು ಕಾಂಗ್ರೆಸ್ 44 ಸ್ಥಾನಗಳನ್ನು ಗೆದ್ದಿದೆ. ಶಿವಸೇನೆಯು 56 ಸ್ಥಾನಗಳನ್ನು ಪಡೆದಿದ್ದು ಈ ಮೂವರು ಸೇರಿದರೆ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ಶಕ್ತಿಪಡೆದುಕೊಂಡಿದೆ. ಈ ಮೂವರ ಸೇರಿದಲ್ಲಿ ಸರ್ಕಾರ ರಚಿಸುವ ಅವಕಾಶವೂ ಇದೆ.

ಇದು ಸೌಜನ್ಯದ ಭೇಟಿ ಎಂದು ಹೇಳುತ್ತಿದ್ದರೂ ಸಹ ಮಹಾರಾಷ್ಟ್ರದ ಜನ ಅದನ್ನು ನಂಬಲು ಸಿದ್ಧರಿಲ್ಲ. ಬಿಜೆಪಿಯೊಂದಿಗಿನ ಅದರ ಹಠ ಬೇರೆಯದೇ ಸಾಧ್ಯತೆಗಳನ್ನು ತೆರೆದಿಡುತ್ತಿವೆ.

“ಬಿಜೆಪಿ ಮುಖ್ಯಸ್ಥ ಅಮಿತ್ ಶಾ ನನ್ನ ಮನೆಗೆ ಭೇಟಿ ನೀಡಿದಾಗ ಬಂದ ಸೂತ್ರದ ಬಗ್ಗೆ ಬಿಜೆಪಿಗೆ ನೆನಪಿಸುವ ಸಮಯ ಇದು. ನಾವು 50:50 ಸೂತ್ರವನ್ನು ನಿರ್ಧರಿಸಿದ್ದೇವೆ” ಎಂದು ಫಲಿತಾಂಶದ ದಿನವಾದ ಅಕ್ಟೋಬರ್ 24 ರಂದು ಉದ್ಧವ್ ಠಾಕ್ರೆ ಮಾಧ್ಯಮಗಳಿಗೆ ತಿಳಿಸಿದ್ದರು. ಅಂದಿನಿಂದ ಅಧಿಕಾರ ಹಂಚಿಕೆ ಕಗ್ಗಾಂಟಾಗಿದೆ.

2014 ರ ರಾಜ್ಯ ಚುನಾವಣೆಗೆ ಹೋಲಿಸಿದರೆ ಬಿಜೆಪಿ ಕಡಿಮೆ ಸ್ಥಾನಗಳನ್ನು ಗಳಿಸಿದೆ. ಹಾಗಾಗಿ ಅಧಿಕಾರದಲ್ಲಿ ಸಮಾನ ಸಮಯ ಹಂಚಿಕೆಗೆ ಇದು ನಾವು ಅರ್ಹವಾಗಿದ್ದೇವೆ ಎಂದು ಸೇನಾ ನಂಬುತ್ತದೆ, ಅಂದರೆ ಪ್ರತಿ ಪಕ್ಷದ ಮುಖ್ಯಮಂತ್ರಿಯೊಬ್ಬರಿಗೆ ಎರಡೂವರೆ ವರ್ಷಗಳಾಗಿವೆ ಎಂಬ ಬೇಡಿಕೆ ಶಿವಸೇನೆಯದು. ಆದರೆ ಬಿಜೆಪಿಯ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಮತ್ತೊಂದು ಪೂರ್ಣ ಅವಧಿಗೆ ಆಡಳಿತ ನಡೆಸಲು ಪಟ್ಟು ಹಿಡಿದಿದ್ದಾರೆ.

ಉಪಮುಖ್ಯಮಂತ್ರಿ ಹುದ್ದೆಗಿಂತ ಹೆಚ್ಚಿನದನ್ನು ನೀಡಲು ಸಾಧ್ಯವಿಲ್ಲ ಎಂದು ಬಿಜೆಪಿ ಸ್ಪಷ್ಟಪಡಿಸುವುದರೊಂದಿಗೆ, ಬಿಜೆಪಿಯ ಮೇಲೆ ಶಿವಸೇನೆಯ ದಾಳಿಗಳು ಹೆಚ್ಚು ಹೆಚ್ಚು ಕ್ರೂರವಾಗಿವೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...