ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ನಾಯಕರ ಸಾಮೂಹಿಕ ರಾಜೀನಾಮೆಗೆ ಗುರುವಾರ ಪ್ರತಿಕ್ರಿಯಿಸಿರುವ ವಿಧಾನಪರಿಷತ್ ನಾಯಕ ಬಿ.ಕೆ. ಹರಿಪ್ರಸಾದ್, ಕಾಂಗ್ರೆಸ್ ಪಕ್ಷ ಅವರನ್ನು ಕಳೆದುಕೊಳ್ಳುವುದಿಲ್ಲ, ನಾಯಕರು ತಮ್ಮ ರಾಜೀನಾಮೆಯನ್ನು ಹಿಂಪಡೆಯುವಂತೆ ವಿನಂತಿಸುವುದಾಗಿ ಹೇಳಿದ್ದಾರೆ. ಸರ್ಕಾರವನ್ನು ಬೆಂಬಲಿಸಿದರೂ ತಮ್ಮ ನಾಯಕರು ಕೆಲಸ ಮಾಡದಿದ್ದಾಗ ಅವರು ರಾಜೀನಾಮೆ ನೀಡಿದ್ದು ಸರಿಯಾಗಿಯೆ ಇದೆ ಎಂದು ಅವರು ಅಲ್ಪಸಂಖ್ಯಾತ ನಾಯಕರನ್ನು ಸಮರ್ಥಿಸಿಕೊಂಡಿದ್ದಾರೆ. ಮಂಗಳೂರು | ಮುಸ್ಲಿಂ ನಾಯಕರು
ಗುರುವಾರ ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ರಾಜ್ಯ ಶಾಂತಿಯಿಂದ ಬದುಕುತ್ತಿದ್ದರೂ, ಕರಾವಳಿ ಜಿಲ್ಲೆಗಳಿಂದ ಅಹಿತಕರ ಘಟನೆಗಳ ವರದಿಗಳು ಹೊರಬರುತ್ತಿವೆ. ನಗರವು ರಾಜ್ಯದಲ್ಲಿ ಉತ್ತಮ ಖ್ಯಾತಿಯನ್ನು ಹೊಂದಿದೆ ಮತ್ತು ಅದನ್ನು ಮತ್ತೊಂದು ಮಣಿಪುರವನ್ನಾಗಿ ಮಾಡಲು ಬಿಡಬಾರದು ಎಂದು ಒತ್ತಿ ಹೇಳಿದ್ದಾರೆ.
“ಕರಾವಳಿ ಪ್ರದೇಶವು ಕೋಮು ಸೂಕ್ಷ್ಮವಾಗಿರುವುದರಿಂದ, ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಇಬ್ಬರೂ ಜಾಣ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ” ಎಂದು ಬಿ ಕೆ ಹರಿಪ್ರಸಾದ್ ತಮ್ಮ ಸರ್ಕಾರಕ್ಕೆ ನಿರ್ಧಾರಕ್ಕೆ ಬದ್ಧರಾಗಿರುವುದಾಗಿ ಮತ್ತು ‘ಎಲ್ಲವೂ ಸರಿಯಾಗುತ್ತದೆ ಎಂದು ಆಶಿಸುತ್ತೇನೆ’ ಎಂದು ಹೇಳಿದ್ದಾರೆ. ಗಲಭೆಯಲ್ಲಿ ಭಾಗಿಯಾಗಿರುವ ಜನರು ಮತ್ತು ಅವರ ಕುಟುಂಬ ಸದಸ್ಯರು ಬಡ ಬಲಿಪಶುಗಳು ಎಂದು ಅವರು ಹೇಳಿದ್ದಾರೆ.
“ನಿಜವಾದ ಕಿಂಗ್‌ಪಿನ್‌ಗಳು ಮುಕ್ತವಾಗಿ ತಿರುಗಾಡುತ್ತಿದ್ದಾರೆ. ಅವರ ಗುರುತುಗಳು ಶೀಘ್ರದಲ್ಲೇ ಬಹಿರಂಗಗೊಳ್ಳಲಿವೆ. ಪ್ರಾಮಾಣಿಕ ಮತ್ತು ಸಮರ್ಥ ಪೊಲೀಸ್ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳುತ್ತಾರೆ”: ಅವರು ಹೇಳಿದ್ದಾರೆ.
ಮುಖ್ಯಮಂತ್ರಿಯೊಂದಿಗಿನ ಅವರ ಇತ್ತೀಚಿನ ಭೇಟಿಯ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಅವರು, “ಇದು ಸೌಜನ್ಯದ ಭೇಟಿ. ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನನ್ನನ್ನು ನಿಯೋಜಿಸುವ ವದಂತಿ ಆಧಾರರಹಿತ. ಕರಾವಳಿ ಪ್ರದೇಶದಲ್ಲಿ ಅಹಿತಕರ ಘಟನೆಗಳನ್ನು ತಡೆಯಲು ಕ್ರಮ ಕೈಗೊಳ್ಳುವಂತೆ ನಾನು ಸಿಎಂ ಅವರನ್ನು ವಿನಂತಿಸಿದ್ದೆ ಮತ್ತು ಅವರು ಅಗತ್ಯವಿರುವದನ್ನು ಮಾಡುವುದಾಗಿ ನನಗೆ ಭರವಸೆ ನೀಡಿದರು. ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಮಾತನಾಡಲು ಸಿಎಂ ನನಗೆ ನಿರ್ದೇಶನ ನೀಡಿದ್ದಾರೆ.” ಎಂದು ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ನಾಯಕರ ಸಾಮೂಹಿಕ ರಾಜೀನಾಮೆಗೆ ಪ್ರತಿಕ್ರಿಯಿಸಿದ ಅವರು, ಕೆಲವು ದುರದೃಷ್ಟಕರ ಘಟನೆಗಳನ್ನು ಅನುಭವಿಸಿದ ಕಾರಣಕ್ಕೆ ನಾಯಕರು ರಾಜೀನಾಮೆ ನೀಡಿದ್ದಾರೆ. ಆದಾಗ್ಯೂ, ನಾಯಕರು ತಮ್ಮ ರಾಜೀನಾಮೆಯನ್ನು ಹಿಂಪಡೆಯುವಂತೆ ವಿನಂತಿಸುತ್ತೇನೆ. ಕಾಂಗ್ರೆಸ್ ಪಕ್ಷ ಅವರನ್ನು ಕಳೆದುಕೊಳ್ಳುವುದಿಲ್ಲ. ರಾಜೀನಾಮೆ ನೀಡುವ ಅಗತ್ಯವಿಲ್ಲ” ಎಂದು ಹೇಳಿದ್ದಾರೆ.
“ಇಂತಹ ಘಟನೆಗಳು ವ್ಯಕ್ತಿಗಳ ಮನೋಭಾವವನ್ನು ಮುರಿಯಬಾರದು. ಸರ್ಕಾರ ಬೆಂಬಲಿಸಿದರೂ ನಾಯಕರು ಕೆಲಸ ಮಾಡದಿದ್ದಾಗ ಅವರು ರಾಜೀನಾಮೆ ನೀಡಿದ್ದ ಪ್ರಸ್ತುತವಾಗಿದೆ. ಕಾಂಗ್ರೆಸ್ ಸಂವಿಧಾನದ ಪರವಾಗಿದೆ ಮತ್ತು ಸೈದ್ಧಾಂತಿಕವಾಗಿ ಗಟ್ಟಿಯಿರುವ ಪಕ್ಷವಾಗಿದೆ. ಈ ನಿಟ್ಟಿನಲ್ಲಿ ಕಾರ್ಯಕರ್ತರೊಂದಿಗೆ ಮಾತನಾಡುತ್ತೇನೆ” ಎಂದು ಹೇಳಿದ್ದಾರೆ. ಮಂಗಳೂರು | ಮುಸ್ಲಿಂ ನಾಯಕರು
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: #AllEyesOnDeck | 6ನೇ ದಿನಕ್ಕೆ ಕಾಲಿಟ್ಟ ಗಾಝಾಗೆ ಹೊರಟ ‘ಮದ್ಲೀನ್’ ಪ್ರಯಾಣ; ಇಸ್ರೇಲ್‌ನಿಂದ ಬಂಧನಕ್ಕೆ ಸಿದ್ಧತೆ!
#AllEyesOnDeck | 6ನೇ ದಿನಕ್ಕೆ ಕಾಲಿಟ್ಟ ಗಾಝಾಗೆ ಹೊರಟ ‘ಮದ್ಲೀನ್’ ಪ್ರಯಾಣ; ಇಸ್ರೇಲ್‌ನಿಂದ ಬಂಧನಕ್ಕೆ ಸಿದ್ಧತೆ!