Homeಮುಖಪುಟವಿಮಾನಗಳು, ವಿಮಾನ ನಿಲ್ದಾಣಗಳಲ್ಲಿ ಭಾರತೀಯ ಸಂಗೀತವನ್ನು ಹಾಕಲು ಸಚಿವಾಲಯದ ಒತ್ತಾಯ

ವಿಮಾನಗಳು, ವಿಮಾನ ನಿಲ್ದಾಣಗಳಲ್ಲಿ ಭಾರತೀಯ ಸಂಗೀತವನ್ನು ಹಾಕಲು ಸಚಿವಾಲಯದ ಒತ್ತಾಯ

- Advertisement -
- Advertisement -

ದೇಶದ ಎಲ್ಲಾ ವಿಮಾನಯಾನ ಸಂಸ್ಥೆಗಳನ್ನು ತಮ್ಮ ವಿಮಾನಗಳಲ್ಲಿ ಮತ್ತು ದೇಶದ ವಿಮಾನ ನಿಲ್ದಾಣಗಳಲ್ಲಿ ಭಾರತೀಯ ಸಂಗೀತವನ್ನು ನುಡಿಸುವಂತೆ ನಾಗರಿಕ ವಿಮಾನಯಾನ ಸಚಿವಾಲಯವು ಒತ್ತಾಯಿಸಿದೆ. ಭಾರತೀಯ ಸಾಂಸ್ಕೃತಿಕ ಸಂಶೋಧನಾ ಮಂಡಳಿಯ ವಿನಂತಿಯ ಮೇರೆಗೆ ಈ ಮನವಿ ಮಾಡಲಾಗಿದೆ ಎಂದು ತಿಳಿಸಿದೆ.

“ಜಗತ್ತಿನಾದ್ಯಂತದ ಹೆಚ್ಚಿನ ವಿಮಾನಯಾನ ಸಂಸ್ಥೆಗಳು ತಮ್ಮ ದೇಶಕ್ಕೆ ಸಂಬಂಧಿಸಿದ ಸಂಗೀತವನ್ನು ಪ್ಲೇ ಮಾಡಲಾಗುತ್ತದೆ. ಉದಾಹರಣೆಗೆ ಅಮೆರಿಕನ್ ಏರ್‌ಲೈನ್ಸ್‌ನಲ್ಲಿ ಜಾಝ್, ಆಸ್ಟ್ರಿಯನ್ ಏರ್‌ಲೈನ್ಸ್‌ನಲ್ಲಿ ಮೊಜಾರ್ಟ್ ಮತ್ತು ಮಧ್ಯಪ್ರಾಚ್ಯದ ವಿಮಾನಯಾನದಲ್ಲಿ ಅರಬ್ ಸಂಗೀತ ನುಡಿಸಲಾಗುತ್ತದೆ” ಎಂದು ನಾಗರಿಕ ವಿಮಾನಯಾನ ಸಚಿವಾಲಯದ ಸಚಿವಾಲಯ ಜಂಟಿ ಕಾರ್ಯದರ್ಶಿ ಉಷಾ ಪಾಧಿ ಅವರು ನಾಗರಿಕ ವಿಮಾನಯಾನ ನಿರ್ದೇಶನಾಲಯದ ಮುಖ್ಯಸ್ಥ ಅರುಣ್ ಕುಮಾರ್ ಮತ್ತು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ ಅಧ್ಯಕ್ಷ ಸಂಜೀವ್ ಕುಮಾರ್ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಹಿಂದೂ ರಾಷ್ಟ್ರಕ್ಕಾಗಿ ‘ಕೊಲೆ’ ಮಾಡುವಂತೆ ಅಪ್ರಾಪ್ತ ಮಕ್ಕಳಿಗೆ ಪ್ರತಿಜ್ಞೆ ಮಾಡಿಸಿದ ದುಷ್ಕರ್ಮಿಗಳು!

ಪತ್ರದಲ್ಲಿ, “ಭಾರತೀಯ ವಿಮಾನಯಾನ ಸಂಸ್ಥೆಗಳು ವಿಮಾನದಲ್ಲಿ ಭಾರತೀಯ ಸಂಗೀತವನ್ನು ತುಂಬಾ ಅಪರೂಪಕ್ಕೆ ನುಡಿಸುತ್ತವೆ, ಆದರೆ ನಮ್ಮ ಸಂಗೀತವು ಶ್ರೀಮಂತ ಪರಂಪರೆ ಮತ್ತು ಸಂಸ್ಕೃತಿಯನ್ನು ಹೊಂದಿದೆ. ಪ್ರತಿಯೊಬ್ಬ ಭಾರತೀಯನು ಅದರ ಬಗ್ಗೆ ನಿಜವಾಗಿಯೂ ಹೆಮ್ಮೆಪಡುತ್ತಾರೆ” ಎಂದು ತಿಳಿಸಿದ್ದಾರೆ.

“ಭಾರತದ ವಿಮಾನಯಾನ ಸಂಸ್ಥೆಗಳು ಸಾಮಾನ್ಯವಾಗಿ ವಿದೇಶಿ ಸಂಗೀತವನ್ನು ಮಾತ್ರ ನುಡಿಸುವುದನ್ನು ನಾವು ನೋಡಿದ್ದೇವೆ, ಅದನ್ನು ಯಾರೂ ಆನಂದಿಸಲು ಸಾಧ್ಯವಿಲ್ಲ ಅಥವಾ ಅರ್ಥಮಾಡಿಕೊಳ್ಳುವುದಿಲ್ಲ. ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ಭಾರತೀಯ ಸಂಗೀತವನ್ನು ವಿಮಾನಗಳಲ್ಲಿ, ವಿಮಾನ ನಿಲ್ದಾಣಗಳಲ್ಲಿ ಪ್ಲೇ ಮಾಡುವುದನ್ನು ಕಡ್ಡಾಯಗೊಳಿಸಿದರೆ ಅದು ಜನರನ್ನು ತಲುಪುತ್ತದೆ ಎಂದು ನಾವು ನಿಮ್ಮನ್ನು ಒತ್ತಾಯಿಸುತ್ತೇವೆ” ಎಂದು ಪತ್ರದಲ್ಲಿ ತಿಳಿಸಲಾಗಿದೆ.


ಇದನ್ನೂ ಓದಿ: ಯುಪಿ: 16 ವರ್ಷದ ದಲಿತ ಬಾಲಕಿಗೆ ಅಮಾನವೀಯವಾಗಿ ಥಳಿಸಿದ ದುಷ್ಕರ್ಮಿಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಜ್ರಿವಾಲ್ ವಿರುದ್ಧ ಎನ್ಐಎ ತನಿಖೆಗೆ ಶಿಫಾರಸು ಮಾಡಿದ ದೆಹಲಿ ಲೆಫ್ಟಿನೆಂಟ್ ಗವರ್ನರ್

0
ನಿಷೇಧಿತ ಭಯೋತ್ಪಾದಕ ಸಂಘಟನೆ 'ಸಿಖ್ಸ್ ಫಾರ್ ಜಸ್ಟೀಸ್' ನಿಂದ ತಮ್ಮ ಪಕ್ಷಕ್ಕೆ ದೇಣಿಗೆ ಪಡೆದ ಆರೋಪದ ಮೇಲೆ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಎನ್ಐಎ ತನಿಖೆಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ...