ಇಂದು ವಿಧಾನಸಭೆಯ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಮಧ್ಯಪ್ರದೇಶದ ಗೃಹ ಸಚಿವ ಡಾ. ನರೋತ್ತಮ್ ಮಿಶ್ರಾ, ’ಜಿಹಾದ್’ಗೆ ಕಾರಣವಾಗುವ, ನಮ್ಮ ಭಾವನೆಗಳನ್ನು ನೋಯಿಸುವ ಮತ್ತು ನಮ್ಮ ಹೆಣ್ಣುಮಕ್ಕಳನ್ನು ಅಪಾಯಕ್ಕೆ ತಳ್ಳುವಂತಹ ಪ್ರತಿಯೊಂದು ಪ್ರೀತಿಯ ವಿರುದ್ಧವೂ ನಾವು ಇದ್ದೇವೆ ಎಂದು ತಿಳಿಸಿದರು.
ಮಧ್ಯಪ್ರದೇಶದ ಅಸೆಂಬ್ಲಿ ಸೋಮವಾರ 2021 ರ ಧಾರ್ಮಿಕ ಸ್ವಾತಂತ್ರ್ಯ ಮಸೂದೆಯನ್ನು ಅಂಗೀಕರಿಸಿತು, ಇದು ವಿವಾಹದ ಮೂಲಕ ಅಥವಾ ಇತರ ಯಾವುದೇ ಮೋಸದ ವಿಧಾನಗಳಿಂದ ನಡೆದ ಧಾರ್ಮಿಕ ಮತಾಂತರಗಳನ್ನು ಪರಿಶೀಲಿಸುವ ಗುರಿಯನ್ನು ಹೊಂದಿದೆ.
ಈ ಕಾನೂನಿನ ಅಡಿಯಲ್ಲಿ ಶಿಕ್ಷೆಗೊಳಗಾದವರಿಗೆ 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಒಂದು ಲಕ್ಷ ರೂ. ದಂಡ ವಿಧಿಸಲಾಗುತ್ತದೆ.
ಸಾಮಾನ್ಯವಾಗಿ ಇದನ್ನು ಲವ್ ಜಿಹದ್ ಕಾನೂನು ಎಂದೇ ಕರೆಯಲಾಗುತ್ತದೆ.
ಗವರ್ನರ್ ಆನಂದಿಬೆನ್ ಪಟೇಲ್ ಅವರು ಜನವರಿ 9 ರಂದು ಮಧ್ಯಪ್ರದೇಶದ ಧಾರ್ಮಿಕ ಸ್ವಾತಂತ್ರ್ಯ ಮಸೂದೆ-2020 ಕ್ಕೆ ಒಪ್ಪಿಗೆ ನೀಡಿದ್ದರು. ಇದು, ವಂಚನೆ ವಿಧಾನಗಳ ಮೂಲಕ ಧಾರ್ಮಿಕ ಮತಾಂತರಗಳನ್ನು ನಡೆಸಿದರೆ ದಂಡ ಮತ್ತು ಜೈಲುಶಿಕ್ಷೆ ವಿಧಿಸುತ್ತದೆ.
ಕಳೆದ ತಿಂಗಳು, ಗೃಹ ಸಚಿವ ಮಿಶ್ರಾ, ಈ ಕಾನೂನು ಜಾರಿಗೆ ಬಂದ ಒಂದು ತಿಂಗಳೊಳಗೆ ಸುಗ್ರೀವಾಜ್ಞೆಯಡಿ 23 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಹೇಳಿದ್ದರು.
ಇದನ್ನೂ ಓದಿ: ನಮಗೆ ಮಹಿಳೆಯರ ಬಗ್ಗೆ ಹೆಚ್ಚು ಗೌರವವಿದೆ: ವಿವಾದಾತ್ಮಕ ಹೇಳಿಕೆಯ ನಂತರ ಸ್ಪಷ್ಟನೆ ನೀಡಿದ ಸುಪ್ರೀಂ