Homeಮುಖಪುಟಪ್ರಧಾನಿ ಮೋದಿ ಪದವಿ ವಿಚಾರ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿಲ್ಲ: ಗುಜರಾತ್ ವಿವಿ

ಪ್ರಧಾನಿ ಮೋದಿ ಪದವಿ ವಿಚಾರ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿಲ್ಲ: ಗುಜರಾತ್ ವಿವಿ

- Advertisement -
- Advertisement -

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಪದವಿ ಪ್ರಮಾಣಪತ್ರದ ಮಾಹಿತಿಯನ್ನು ಒದಗಿಸುವ ಸಿಐಸಿ ಆದೇಶವನ್ನು ರದ್ದುಗೊಳಿಸುವಂತೆ ಗುಜರಾತ್ ವಿಶ್ವವಿದ್ಯಾಲಯವು ಹೈಕೋರ್ಟ್‌ಗೆ ಕೇಳಿಕೊಂಡಿದೆ. ಬೇಜವಾಬ್ದಾರಿ ಬಾಲಿಶ ಕುತೂಹಲವು ಸಾರ್ವಜನಿಕ ಹಿತಾಸಕ್ತಿಯಾಗಲಾರದು ಎಂದು ಗುಜರಾತ್ ಹೈಕೋರ್ಟ್‌ಗೆ ತಿಳಿಸಿದೆ.

ವಿಶ್ವವಿದ್ಯಾನಿಲಯದ ಪರವಾಗಿವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಕೇಂದ್ರ ಮಾಹಿತಿ ಆಯೋಗದ (ಸಿಐಸಿ) ಏಳು ವರ್ಷಗಳ ಹಿಂದಿನ ಆದೇಶವನ್ನು ಅನುಸರಿಸದಿದ್ದಕ್ಕಾಗಿ ಮಾಹಿತಿ ಹಕ್ಕು (ಆರ್‌ಟಿಐ) ಕಾಯಿದೆಯಡಿ ನೀಡಿರುವ ವಿನಾಯಿತಿಗಳನ್ನು ಉಲ್ಲೇಖಿಸಿ, ಬಾಲಿಶವಾದ ಅರ್ಜಿಯನ್ನು ತಳ್ಳಿಹಾಕಲು 2005ರ ಪಾರದರ್ಶಕತೆ ಕಾನೂನನ್ನು ಬಳಸಲಾಗುತ್ತದೆ ಎಂದು ಪ್ರತಿಪಾದಿಸಿದರು.

ಯಾರೋ ಒಬ್ಬರು ಸಾರ್ವಜನಿಕ ಕಚೇರಿಯನ್ನು ಹೊಂದಿದ್ದಾರೆ ಎಂದ ಮಾತ್ರಕ್ಕೆ ಅವರು ಇನ್ನೊಬ್ಬರ ಎಲ್ಲಾ ವೈಯಕ್ತಿಕ ಮಾಹಿತಿ ಪಡೆಯಲು ಸಾಧ್ಯವಿಲ್ಲ ಎಂದು ಮೆಹ್ತಾ ವಾದಿಸಿದರು.

ಇದನ್ನೂ ಓದಿ: ಪ್ರಧಾನಿ ಭಾಷಣ ಆರಂಭಿಸುತ್ತಿದ್ದಂತೆ ‘ಮೋದಿ-ಅದಾನಿ ಭಾಯಿ-ಭಾಯಿ’ ಘೋಷಣೆ ಕೂಗಿದ ವಿಪಕ್ಷ ನಾಯಕರು

ಪ್ರಧಾನಿ ಮೋದಿ ಅವರ ಪದವಿಗಳ ಬಗೆಗಿನ ಮಾಹಿತಿಯು “ಈಗಾಗಲೇ ಸಾರ್ವಜನಿಕ ಡೊಮೇನ್‌ನಲ್ಲಿದೆ” ಮತ್ತು ಈ ಹಿಂದೆಯೂ ವಿಶ್ವವಿದ್ಯಾಲಯವು ತಮ್ಮ ವೆಬ್‌ಸೈಟ್‌ನಲ್ಲಿ ವಿವರಗಳನ್ನು ಹಾಕಿತ್ತು ಎಂದು ಹೇಳಿದರು.

ಆದರೂ ಕೇಜ್ರಿವಾಲ್ ಪರ ವಕೀಲ ಪರ್ಸಿ ಕವೀನಾ ಅವರು, ಈ ಮಾಹಿತಿಯು ಸಾರ್ವಜನಿಕ ಡೊಮೇನ್‌ನಲ್ಲಿ ಲಭ್ಯವಿಲ್ಲ ಎಂದು ಪ್ರತಿಪಾದಿಸಿದರು.

ಎರಡೂ ಕಡೆಯ ವಾದಗಳನ್ನು ಆಲಿಸಿದ ನ್ಯಾಯಮೂರ್ತಿ ಬಿರೇನ್ ವೈಷ್ಣವ್ ಅವರು, ಸಿಐಸಿ ಆದೇಶವನ್ನು ಪ್ರಶ್ನಿಸಿ ಗುಜರಾತ್ ವಿಶ್ವವಿದ್ಯಾಲಯ ಸಲ್ಲಿಸಿದ್ದ ಅರ್ಜಿಯ ಆದೇಶವನ್ನು ಕಾಯ್ದಿರಿಸಿದ್ದಾರೆ.

ಏಪ್ರಿಲ್ 2016 ರಲ್ಲಿ, ಆಗಿನ ಸಿಐಸಿ ಎಂ ಶ್ರೀಧರ್ ಆಚಾರ್ಯುಲು ಅವರು, ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್‌ ಅವರಿಗೆ ಮೋದಿ ಅವರು ಗಳಿಸಿರುವ ಪದವಿಗಳ ಬಗ್ಗೆ ಮಾಹಿತಿ ನೀಡುವಂತೆ ದೆಹಲಿ ವಿಶ್ವವಿದ್ಯಾಲಯ ಮತ್ತು ಗುಜರಾತ್ ವಿಶ್ವವಿದ್ಯಾಲಯಕ್ಕೆ ನಿರ್ದೇಶನ ನೀಡಿದ್ದರು. ಆದರೆ, ಮೂರು ತಿಂಗಳ ನಂತರ, ಗುಜರಾತ್ ಹೈಕೋರ್ಟ್ ಅಹಮದಾಬಾದ್ ಮೂಲದ ವಿಶ್ವವಿದ್ಯಾನಿಲಯಕ್ಕೆ ಅಗತ್ಯವಿರುವ ಮಾಹಿತಿಯನ್ನು ಒದಗಿಸುವಂತೆ ಸಿಐಸಿ ಆದೇಶವನ್ನು ತಡೆಹಿಡಿಯಿತು.

ಗುರುವಾರದ ವಿಚಾರಣೆಯ ಸಂದರ್ಭದಲ್ಲಿ, ಪಿಎಂ ಮೋದಿ ಪದವಿಗಳ ಬಗ್ಗೆ ಮುಚ್ಚಿಡಲು ಏನೂ ಇಲ್ಲ ಏಕೆಂದರೆ ಅದು “ಈಗಾಗಲೇ ಸಾರ್ವಜನಿಕ ಡೊಮೇನ್‌ನಲ್ಲಿದೆ” ಮತ್ತು ವಿಶ್ವವಿದ್ಯಾಲಯವು ಈ ಹಿಂದೆ ನಿರ್ದಿಷ್ಟ ದಿನಾಂಕದಂದು ಮಾಹಿತಿಯನ್ನು ತನ್ನ ವೆಬ್‌ಸೈಟ್‌ನಲ್ಲಿ ಇರಿಸಿತ್ತು ಎಂದು ಮೆಹ್ತಾ ಹೇಳಿದರು.

ಆರ್‌ಟಿಐ ಕಾಯ್ದೆಯ ಸೆಕ್ಷನ್ 8 ರ ಅಡಿಯಲ್ಲಿ ನೀಡಲಾದ ವಿನಾಯಿತಿಗಳ ಕುರಿತು ಸುಪ್ರೀಂ ಕೋರ್ಟ್ ಮತ್ತು ಇತರ ಹೈಕೋರ್ಟ್‌ಗಳ ಕೆಲವು ಹಿಂದಿನ ತೀರ್ಪುಗಳನ್ನು ಉಲ್ಲೇಖಿಸಿದ ಮೆಹ್ತಾ, “ನೀವು ಅದರ ಬಗ್ಗೆ ಕುತೂಹಲ ಹೊಂದಿರುವ ಕಾರಣಕ್ಕಾಗಿ” ಒಬ್ಬರ ವೈಯಕ್ತಿಕ ಮಾಹಿತಿಯನ್ನು ಪಡೆಯಲು ಸಾಧ್ಯವಿಲ್ಲ ಎಂದು ಹೇಳಿದರು.

“ಆರ್‌ಟಿಐ ಕಾರ್ಯಕರ್ತನಾಗುವುದು ಈಗ ವೃತ್ತಿಯಾಗಿ ಮಾರ್ಪಟ್ಟಿದೆ. ಸಂಪರ್ಕವಿಲ್ಲದ ಎಷ್ಟೋ ಜನರಿಗೆ ಎಷ್ಟೋ ವಿಷಯಗಳ ಬಗ್ಗೆ ಕುತೂಹಲವಿರುತ್ತದೆ. ಅಪರಿಚಿತರು ಅಂತಹ ಮಾಹಿತಿಯನ್ನು ಹುಡುಕುವಂತಿಲ್ಲ. ಬೇಜವಾಬ್ದಾರಿ ಬಾಲಿಶ ಕುತೂಹಲವು ಸಾರ್ವಜನಿಕ ಹಿತಾಸಕ್ತಿಯಾಗಲಾರದು. ಆರ್‌ಟಿಐ ಕಾಯ್ದೆಯ ಸೆಕ್ಷನ್ 8 ರ ಪ್ರಕಾರ, ವಿಶ್ವವಿದ್ಯಾನಿಲಯವು ತನ್ನ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಮೂರನೇ ವ್ಯಕ್ತಿಗೆ ಬಹಿರಂಗಪಡಿಸಲು ನಿರಾಕರಿಸಬಹುದು ಏಕೆಂದರೆ “ವಿಶ್ವಾಸಾರ್ಹ ಸಂಬಂಧ”, ಟ್ರಸ್ಟಿ ಮತ್ತು ಫಲಾನುಭವಿ ನಡುವಿನ ನಂಬಿಕೆಯ ಸಂಬಂಧದ ಕಾರಣಕ್ಕಾಗಿ ಎಂದು ಮೆಹ್ತಾ ಹೇಳಿದ್ದಾರೆ

”ದೊಡ್ಡ ಸಾರ್ವಜನಿಕ ಹಿತಾಸಕ್ತಿಯ ವರ್ಗಕ್ಕೆ ಸೇರಿದರೆ ಒಬ್ಬರು ಮಾಹಿತಿಯನ್ನು ಪಡೆಯಬಹುದು. ಆದರೆ, ನನ್ನ ಸಾರ್ವಜನಿಕ ಚಟುವಟಿಕೆಗೆ ಸಂಬಂಧಿಸದ ಖಾಸಗಿ ಮಾಹಿತಿಯನ್ನು ನೀವು ಹುಡುಕುವಂತಿಲ್ಲ. ಸಾರ್ವಜನಿಕರಿಗೆ ಅದರಲ್ಲಿ ಆಸಕ್ತಿ ಇದೆ ಎಂದ ಮಾತ್ರಕ್ಕೆ ಅದು ಸಾರ್ವಜನಿಕ ಹಿತಾಸಕ್ತಿಯಾಗಲಾರದು. ನ್ಯಾಯಾಲಯಗಳ ವ್ಯಾಖ್ಯಾನವು ಶೈಕ್ಷಣಿಕ ಅರ್ಹತೆ ವೈಯಕ್ತಿಕ ಮಾಹಿತಿಯಾಗಿದೆ, ಅದು ರಾಜಕಾರಣಿ ಅಥವಾ ಇತರ ಯಾವುದೇ ವ್ಯಕ್ತಿಯಾಗಿರಲಿ” ಎಂದು ಸಾಲಿಸಿಟರ್ ಜನರಲ್ ವಾದಿಸಿದರು.

ಮೆಹ್ತಾಗೆ ಪ್ರತಿಕ್ರಿಯಿಸಿದ ವಕೀಲ ಕವಿನಾ, ಪ್ರಧಾನಿ ಪದವಿಗಳ ಬಗ್ಗೆ ಸಾರ್ವಜನಿಕ ಡೊಮೇನ್‌ನಲ್ಲಿ ಮಾಹಿತಿ ಲಭ್ಯವಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಚುನಾವಣೆಯಲ್ಲಿ ಸ್ಪರ್ಧಿಸುವ ರಾಜಕಾರಣಿಗಳು ತಮ್ಮ ಶೈಕ್ಷಣಿಕ ಅರ್ಹತೆಗಳನ್ನು ಬಹಿರಂಗಪಡಿಸಬೇಕು ಎಂದು ಪ್ರಜಾಪ್ರತಿನಿಧಿ ಕಾಯ್ದೆ (RPA) ಕಡ್ಡಾಯಗೊಳಿಸಿದೆ ಎಂದು ಕವಿನಾ ವಾದಿಸಿದರು.

ಅಮೆರಿಕದ ಮಾಜಿ ಅಧ್ಯಕ್ಷ ಟ್ರಂಪ್ ಮತ್ತು ಅವರ ಉತ್ತರಾಧಿಕಾರಿ ಬಿಡೆನ್ ಅವರ ನಿವಾಸಗಳನ್ನು ಎಫ್‌ಬಿಐ ಹೇಗೆ ಶೋಧಿಸಿದೆ ಎಂಬುದಕ್ಕೆ ಕವಿನಾ ಉದಾಹರಣೆ ನೀಡಿದರು.

”ಪದವಿಗಳ ಕುರಿತಾದ ಈ ಮಾಹಿತಿಯು ಸಾರ್ವಜನಿಕ ಚಟುವಟಿಕೆ ಮತ್ತು ಆಸಕ್ತಿಯೊಂದಿಗೆ ನೇರ ಸಂಪರ್ಕವನ್ನು ಹೊಂದಿದೆ. ಟ್ರಂಪ್ ಅವರ ಮನೆ ಮತ್ತು ಬಿಡೆನ್ ಅವರ ಮನೆಯನ್ನು FBI ತನಿಖೆ ನಡೆಸುತ್ತದೆ. ನೀವು ಸ್ಥಾನಮಾನದಲ್ಲಿ ದೊಡ್ಡವರಿರಬಹುದು ಆದರೆ, ನೀವು ಕಾನೂನಿಗಿಂತ ಮೇಲಲ್ಲ” ಎಂದು ಕವಿನಾ ಹೇಳಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪಂಜಾಬ್‌: ಸಿಖ್ಖರ ಪವಿತ್ರ ಗ್ರಂಥದ ಪುಟಗಳನ್ನು ಹರಿದು ಹಾಕಿದ ಆರೋಪ; ಯುವಕನನ್ನು ಥಳಿಸಿ ಹತ್ಯೆ

0
ಚಂಡೀಗಢ ಗುರುದ್ವಾರವೊಂದರ ಬಳಿ ಸಿಖ್ಖರ ಪವಿತ್ರ ಗ್ರಂಥವಾದ ಗುರು ಗ್ರಂಥ ಸಾಹಿಬ್‌ನ ಕೆಲವು ಪುಟಗಳನ್ನು ಹರಿದು ಹಾಕಿದ ಆರೋಪದಲ್ಲಿ ಶನಿವಾರದಂದು  19 ವರ್ಷದ ಯುವಕನನ್ನು ಥಳಿಸಿ ಹತ್ಯೆ ಮಾಡಿರುವ ಘಟನೆ ಪಂಜಾಬ್‌ನ ಫಿರೋಝ್‌ಪುರ್‌ನಲ್ಲಿ ನಡೆದಿದೆ. ಪೊಲೀಸ್...