Homeಕರ್ನಾಟಕಆರ್‌ಟಿಇ ನಿಧಿ ₹ 1.87 ಕೋಟಿ ದುರುಪಯೋಗ ಆರೋಪ - 20 ಬ್ಲಾಕ್ ಶಿಕ್ಷಣ ಅಧಿಕಾರಿಗಳಿಗೆ...

ಆರ್‌ಟಿಇ ನಿಧಿ ₹ 1.87 ಕೋಟಿ ದುರುಪಯೋಗ ಆರೋಪ – 20 ಬ್ಲಾಕ್ ಶಿಕ್ಷಣ ಅಧಿಕಾರಿಗಳಿಗೆ ನೋಟಿಸ್‌

- Advertisement -
- Advertisement -

ಖಾಸಗಿ ಮತ್ತು ಅನುದಾನ ರಹಿತ ಶಾಲೆಗಳಿಗೆ 2014-15 ರಲ್ಲಿ ಬಿಡುಗಡೆ ಮಾಡಲಾಗಿದ್ದ 1.87 ಕೋಟಿ ರೂಗಳ ಆರ್‌‌ಟಿಇ ಬಾಕಿ ಮರುಪಾವತಿ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪದಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯ ನಾಲ್ವರು ಬ್ಲಾಕ್ ಶಿಕ್ಷಣ ಅಧಿಕಾರಿಗಳು (ಬಿಇಒ) ಸೇರಿದಂತೆ ಒಟ್ಟು 20 ಬಿಇಒಗಳಿಗೆ ಸಾರ್ವಜನಿಕ ಶಿಕ್ಷಣ ಆಯುಕ್ತರ ಕಚೇರಿ (ಸಿಪಿಐ) ನೋಟಿಸ್ ನೀಡಿದೆ.

“ಏಳು ದಿನಗಳಲ್ಲಿ ತಮ್ಮ ಉತ್ತರಗಳನ್ನು ನೀಡಲು ಬಿಇಒ ಗಳನ್ನು ಕೇಳಲಾಗಿದೆ” ಎಂದು ಮೂಲಗಳನ್ನು ಉಲ್ಲೇಖಿಸಿ ಡೆಕ್ಕನ್‌ ಹೆರಾಲ್ಡ್‌ ವರದಿ ಮಾಡಿದೆ.

ಇದನ್ನೂ ಓದಿ: ಆನ್‌ಲೈನ್ ಶಿಕ್ಷಣಕ್ಕೆ ಮಾದರಿ ಸೃಷ್ಟಿಸದೆ, ಮೂಲಸೌಕರ್ಯಗಳಿಗೆ ಕ್ರಮ ತೆಗೆದುಕೊಳ್ಳದೆ ಪೋಷಕರನ್ನು ಆತಂಕಕ್ಕೆ ತಳ್ಳಿರುವ ಸರ್ಕಾರ

ಬೆಂಗಳೂರಿನ ರಮೇಶ್‌ ಬೆಟ್ಟಯ್ಯ ಅವರು, ಆರ್‌ಟಿಇ ಬಾಕಿ ಮರುಪಾವತಿಗಾಗಿ ಬಿಡುಗಡೆ ಮಾಡಿದ ಹಣವನ್ನು ದುರುಪಯೋಗ ಮಾಡಲಾಗಿದೆ ಎಂದು ಆರೋಪಿಸಿ ದೂರು ದಾಖಲಿಸಿದ್ದರು. ಈ ದೂರಿನ ಆಧಾರದ ಮೇಲೆ, ಸಾರ್ವಜನಿಕ ಶಿಕ್ಷಣ ಆಯುಕ್ತರು ಪ್ರಾಥಮಿಕ ಶಿಕ್ಷಣ ನಿರ್ದೇಶಕರಿಗೆ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿದ್ದರು.

ಆರ್‌ಟಿಇ ಕೋಟಾ ಕಾಯ್ದೆಯಡಿ ಪ್ರವೇಶ ಪಡೆದ ಮಕ್ಕಳಿಂದ 2012-13 ರಿಂದ 2015-16 ರವರೆಗೆ ಹೆಚ್ಚುವರಿ ಶುಲ್ಕವನ್ನು ಪಡೆಯಲಾಗಿರುವುದನ್ನು ವಿಶೇಷವಾಗಿ ಉಲ್ಲೇಖಿಸಿ ನಿರ್ದೇಶಕರು ಆಯುಕ್ತರಿಗೆ ವರದಿಯನ್ನು ಸಲ್ಲಿಸಿದ್ದರು. ಆರ್‌ಟಿಇ ಬಾಕಿ ಮರುಪಾವತಿಗಾಗಿ ಹೆಚ್ಚುವರಿ ಪಾವತಿ ಪಡೆದಿರುವ ಬಗ್ಗೆ ಯಾವುದೇ ಅನುಸರಣೆ ವರದಿಯನ್ನು ಸಲ್ಲಿಸಲಾಗಿಲ್ಲ ಎಂದು ವರದಿ ಹೇಳಿದ್ದು, ಬಿಇಒಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ವರದಿಯು ಶಿಫಾರಸು ಮಾಡಿತ್ತು.

ಪ್ರಾಥಮಿಕ ಶಿಕ್ಷಣ ನಿರ್ದೇಶಕರ ವರದಿಯ ಆಧಾರದ ಮೇಲೆ ಜುಲೈ 6 ರಂದು 20 ಬಿಇಒಗಳಿಗೆ ನೋಟಿಸ್ ನೀಡಲಾಗಿದೆ. ಒಂದು ವೇಳೆ ಬಿಇಒಗಳು ನೋಟಿಸ್‌ಗೆ ಉತ್ತರಿಸಲು ವಿಫಲವಾದರೆ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುವುದಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರು ನೋಟಿಸ್‌ನಲ್ಲಿ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಪಠ್ಯಕ್ರಮ ನಿರ್ಧರಿಸಲಿರುವ ಕೇಂದ್ರ: ಒಕ್ಕೂಟ ಕಲ್ಪನೆಗೇ ಅನ್ಯಾಯ ಎಂದ ಶಿಕ್ಷಣ ತಜ್ಞರು

ನಾನುಗೌರಿ.ಕಾಂ ಜೊತೆ ಮಾತನಾಡಿದ ಮಂಗಳೂರು ಮಂಗಳೂರು ದಕ್ಷಿಣ ಬಿಇಒ ರಾಜಲಕ್ಷ್ಮಿ ಕೆ., “ಬಿಇಒ ಕಚೇರಿಗೆ ನೋಟಿಸ್ ಬಂದಿದೆ. ಯಾವುದೆ ಹಣ ದುರುಪಯೋಗ ಆಗಿಲ್ಲ. ದಾಖಲೆಗಳನ್ನು ಪರಿಶೀಲನೆ ಮಾಡಿ ಶಿಕ್ಷಣ ಇಲಾಖೆಯ ಆಕ್ಷೇಪಕ್ಕೆ ಉತ್ತರ ಸಲ್ಲಿಸಲಿದ್ದೇವೆ” ಎಂದು ಹೇಳಿದ್ದಾರೆ.

ಬೆಂಗಳೂರು ದಕ್ಷಿಣ ಬ್ಲಾಕ್‌-1, ಹರಪನಹಳ್ಳಿ, ಗದಗ ನಗರ, ಮೂಡಿಗೆರೆ, ಹನೂರು, ಕೊಳ್ಳೆಗಾಲ, ಹರಪ್ಪನಹಳ್ಳಿ, ಮಾಗಡಿ, ಮೈಸೂರು ಉತ್ತರ, ಮೈಸೂರು ದಕ್ಷಿಣ, ತುಮಕೂರು, ಗೌರಿಬಿದನೂರು, ಹಡಗಲಿ, ಗೌರಿಬಿದನೂರು, ಸಹಾಪುರ, ವಿಜಯಪುರ, ಮಂಗಳುರು ದಕ್ಷಿಣ, ಮೂಡಬಿದಿರೆ, ಪುತ್ತೂರು, ಸುಳ್ಯ ಒಟ್ಟು 20 ಬಿಇಒ ಕಚೇರಿಗೆ ಸಾರ್ವಜನಿಕ ಶಿಕ್ಷಣ ಆಯುಕ್ತರು ನೋಟಿಸ್ ನೀಡಿದ್ದು, 1.87 ಕೋಟಿ ರೂ. ಹಣಗಳ ಉಪಯೋಗದ ಬಗ್ಗೆ ಆಕ್ಷೇಪ ಸಲ್ಲಿಸಲಾಗಿದೆ.

ಇದನ್ನೂ ಓದಿ: ಕೊರೋನಾ ಕಾಲಘಟ್ಟದಲ್ಲಿ ಗ್ರಾಮೀಣ ಮಕ್ಕಳ ಶಿಕ್ಷಣ ಹಕ್ಕು ರಕ್ಷಿಸುವಲ್ಲಿನ ಸವಾಲು ಮತ್ತು ಸಾಧ್ಯತೆಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹೈದರಾಬಾದ್: ಮದರ್ ತೆರೇಸಾ ಶಾಲೆ ಮೇಲೆ ಕೇಸರಿ ವಸ್ತ್ರಧಾರಿಗಳಿಂದ ದಾಳಿ: ಜೈಶ್ರೀರಾಮ್‌ ಘೋಷಣೆ ಕೂಗಿ...

0
ಕೇಸರಿ ಬಣ್ಣದ ಅಂಗಿ ಮತ್ತು ಶಾಲುಗಳನ್ನು ಧರಿಸಿದ್ಧ ಗುಂಪೊಂದು ಹೈದರಾಬಾದ್‌ ಮಂಚೇರಿಯಲ್ ಜಿಲ್ಲೆಯ ಕನ್ನೆಪಲ್ಲಿಯಲ್ಲಿರುವ ಸೇಂಟ್ ಮದರ್ ತೆರೇಸಾ ಆಂಗ್ಲ ಮಾಧ್ಯಮ ಶಾಲೆಯ ಆವರಣಕ್ಕೆ ನುಗ್ಗಿ ಶಾಲೆಯಲ್ಲಿ ದಾಂಧಲೆ ನಡೆಸಿ ಪಾದ್ರಿಯ ಮೇಲೆ...