ತೆಲುಗು ನಟ ಅಲ್ಲರಿ ನರೇಶ್‍ನ ಹೊಸ ನರೇಷನ್ ’ನಾಂದಿ’

ಟಾಲಿವುಡ್‍ನಲ್ಲಿ ಹಾಸ್ಯ ಸಿನಿಮಾಗಳ ನಾಯಕ ನಟ ಅಲ್ಲರಿ ನರೇಶ್ ಈ ಬಾರಿ ಹೊಸ ರೀತಿಯ ಪ್ರಯೋಗಾತ್ಮಕ ಸಿನೆಮಾ ಮಾಡಲು ಹೊರಟಿದ್ದಾರೆ.

ಅಲ್ಲರಿ ನರೇಶ್ ನಟನೆಯ ಸಿನಿಮಾ ಅಂದರೆ ಹಾಸ್ಯ ಇದ್ದೇ ಇರುತ್ತದೆ ಎಂಬಷ್ಟು ಖ್ಯಾತಿ ಪಡೆದಿರುವ ಈ ನಟನ ಹೊಸ ಪ್ರಯೋಗ ಚಿತ್ರರಂಗದ ಗಮನ ಸೆಳೆದಿದೆ. ಕಿತಕಿತಲು, ಎವಡಿಗೋಲ ವಾಡಿದೆ ಸುಡಿಗಾಡು ಸಿನೆಮಾಗಳ ಮೂಲಕ ಸಿನಿರಸಿಕರಿಗೆ ಹತ್ತಿರವಾಗಿರುವ ನರೇಶ್ “ನಾಂದಿ” ಎಂಬ ಸಿನೆಮಾ ಮಾಡುತ್ತಿದ್ದು, ಸಿನೆಮಾದ ಮೊದಲ ಪೋಸ್ಟರನಲ್ಲಿ ಬೆತ್ತಲೆಯಾಗಿ ನೇತು ಹಾಕಿದ ಸ್ಥಿತಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಸಿನಿಮಾ ಸಾಮಾಜಿಕ ನೆಲೆಗಟ್ಟಿನ ಮೇಲಿನ ಕ್ರೈಂ ಡ್ರಾಮವಾಗಿದ್ದು, ನರೇಶ್ ಈ ಸಿನೆಮಾದಲ್ಲಿ ಇಂದೆಂದೂ ಕಾಣಿಸಿಕೊಳ್ಳದ ರೀತಿ ಕಾಣಿಸಿಕೊಳ್ಳಲಿದ್ದಾರೆ ಎಂದು ಸಿನೆಮಾ ತಂಡ ಹೇಳಿಕೊಂಡಿದೆ. ಈ ಸಿನೆಮಾವನ್ನು ವಿಜಯ್ ಕನಕಮೇಡಲ ನಿರ್ದೇಶನ ಮಾಡುತ್ತಿದ್ದಾರೆ.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here