ಮಾಸ್ಟರ್ ಕ್ಲಾಸ್‍ನಲ್ಲಿ ಟಿ.ಕೆ ದಯಾನಂದ್ ಕತೆ ಆಯ್ಕೆ..

ಭಾರತದ ಅತ್ಯುತ್ತಮ ಕತೆಗಾರರಿಗೆ ನೀಡಲಾಗುವ ವೇದಿಕೆ ಮಾಸ್ಟರ್ ಕ್ಲಾಸ್. ಸಿನಿಮಾ ಕತೆ ಬರಹಗಾರರು ಕತೆಗಳಲ್ಲಿ ತಮ್ಮ ಸೃಜನಶೀಲತೆಯ ಪ್ರತಿಭೆಯನ್ನು ಪ್ರದರ್ಶಿಸಲು ಇದೊಂದು ಉತ್ತಮ ವೇದಿಕೆ. ಮಾಸ್ಟರ್‍ಕ್ಲಾಸ್‍ನಲ್ಲಿ ಕತೆ ಹೇಳಬಯಸುವವರು ಜೀವನದ ನೈಜಕತೆಗಳಿಂದ ಸ್ಫೂರ್ತಿ ಹೊಂದಿದ, ಸಾಮಾನ್ಯವಾಗಿದ್ದರೂ ಅಸಾಧಾರಣವಾಗಿರುವ, ಫಿಕ್ಷನ್‍ಗಿಂತಲೂ ವಿಭಿನ್ನವಾದ ಕತೆಗಳನ್ನು ಕಳುಹಿಸಬೇಕು. ಅಂಥತೊಂದು ಮಾಸ್ಟರ್‍ಕ್ಲಾಸ್ ಪ್ರತಿಭೆ ನಮ್ಮ ಸ್ಯಾಂಡಲ್‍ವುಡ್‍ನಲ್ಲಿ ಚಿಗುರೊಡೆಯುತ್ತಿದೆ. ಅವರೇ ಕಳೆದ ವರ್ಷ ನೂರರ ಸಂಭ್ರಮವನ್ನು ಪೂರೈಸಿದ ಸಿನಿಮಾ ಬೆಲ್‍ಬಾಟಂ ಚಿತ್ರದ ಕತೆಗಾರ ಟಿ.ಕೆ.ದಯಾನಂದ್.

ಅವರು ಸಹ ಮಾಸ್ಟರ್ ಕ್ಲಾಸ್‍ನಲ್ಲಿ ಭಾಗವಹಿಸಿ ಕತೆಹೇಳಿದ್ದರು. ಒಬ್ಬ ವೈದ್ಯ, ಆತನಿಗೆ ಒಬ್ಬ ಸಹಾಯಕ. ಆ ಸಹಾಯಕನ ಸುತ್ತ ಒಂದು ಕತೆಯನ್ನು ಎಣೆದು ಮಾಸ್ಟರ್ ಕ್ಲಾಸ್ ವೇದಿಕೆಯಲ್ಲಿ ದಯಾನಂದ್ ಪ್ರಸ್ತುತಪಡಿಸಿದ್ದರು. ಆ ಕತೆ ನೆರೆದಿದ್ದ ಎಲ್ಲರ ಮನಗೆದ್ದು ಆಯ್ಕೆಯಾಗಿದೆ. ಮಾಸ್ಟರ್‍ಕ್ಲಾಸ್‍ನಲ್ಲಿ ಆಯ್ಕೆಯಾಗುವ ಕತೆಗಳು ಬಾಲಿವುಡ್‍ನಲ್ಲಿ ಚಿತ್ರೀಕರಣಗೊಳ್ಳುತ್ತವೆ.

ಕನ್ನಡ ಕತೆಗಾರನ ಕತೆಯೊಂದು ಬಾಲಿವುಡ್ ಅಂಗಳದಲ್ಲಿ ಅಬ್ಬರಿಸುವುದು ಕನ್ನಡಿಗರ ಹೆಮ್ಮೆಯ ಸಂಗತಿ.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here