Homeಕರ್ನಾಟಕಪ್ರವಾಹ ಸಂತ್ರಸ್ತ ಉತ್ತರ ಕರ್ನಾಟಕದಲ್ಲಿ ಅನರ್ಹರ ಮತಬೇಟೆ: ಏನಿರಬಹುದು ಫಲಿತಾಂಶ?

ಪ್ರವಾಹ ಸಂತ್ರಸ್ತ ಉತ್ತರ ಕರ್ನಾಟಕದಲ್ಲಿ ಅನರ್ಹರ ಮತಬೇಟೆ: ಏನಿರಬಹುದು ಫಲಿತಾಂಶ?

- Advertisement -
- Advertisement -

ಒಂದೆಡೆ ಪ್ರವಾಹದಿಂದ ಮನೆಮಠ ಕಳೆದುಕೊಂಡಿರುವ ಸಂತ್ರಸ್ತರು ಮತ್ತೆ ತಮ್ಮ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಇನ್ನೊಂದೆಡೆ ದೊರೆತ ಜನಾದೇಶವನ್ನು ಮೂರು ಕಾಸಿಗೆ ಹರಾಜಿಗಿಟ್ಟು, ಇದ್ದ ಸರಕಾರವನ್ನು ಉರುಳಿಸಿ ಬಿ.ಎಸ್.ಯಡ್ಯೂರಪ್ಪ ನೇತೃತ್ವದ ಹೊಸ ಸರಕಾರ ಸ್ಥಾಪನೆ ಮಾಡಲು ಕಾರಣರಾದ ಅನರ್ಹರೆಂಬ ಬಿರುದಾಂಕಿತ ಜನಪ್ರತಿನಿಧಿಗಳು ಮತ್ತೆ ಮತ ಭಿಕ್ಷೆಗೆ ಇಳಿದಿದ್ದಾರೆ.

ಅಥಣಿ

ಕಳೆದ ಬಾರಿ ಸೋತರೂ ಹೈಕಮಾಂಡ್ ಕೃಪೆಯಿಂದ ಉಪಮುಖ್ಯಮಂತ್ರಿಯಾಗಿ ಎಲ್ಲರ ಕಣ್ಣು ಕುಕ್ಕುತ್ತಿರುವ ಲಕ್ಷ್ಮಣ ಸವದಿಗೆ ಈ ಚುನಾವಣೆ ಬಿಸಿತುಪ್ಪವಾಗಿದೆ. ಯಾರ ಕೈಯಲ್ಲಿ ಸೋಲನುಭವಿಸಿದ್ದರೊ ಅವರನ್ನೆ ಗೆಲ್ಲಿಸುವ ಜವಾಬ್ದಾರಿ ಈಗ ಸವದಿ ಮೇಲಿದೆ. ಕಳೆದ ಬಾರಿಯಂತೆ ಈ ಬಾರಿಯೂ ಮಹೇಶ್ ಕುಮಟಳ್ಳಿ ಹೆಸರಿಗೆ ಅಭ್ಯರ್ಥಿ. ಚುನಾವಣೆ ಮಾಡುತ್ತಿರುವವರು ಇನ್ನಾರೊ. ಹೀಗಾಗಿ ಮೊದಲ ಬಾರಿಗೆ ಚುನಾವಣಾ ಅಖಾಡಕ್ಕೆ ಇಳಿದಿರುವ ಕಾಂಗ್ರೆಸ್‍ನ ಗಜಾನನ ಮಂಗಸೂಳಿಗೆ ಗೊಂದಲದ ಲಾಭವಾದರೆ ಆಶ್ಚರ್ಯವಿಲ್ಲ. ಇಲ್ಲಿ ಯಾರೇ ಗೆದ್ದರೂ ಸೋಲುವುದು ಲಕ್ಷ್ಮಣ ಸವದಿಯೇ. ಯಾಕೆಂದರೆ ಕುಮಟಳ್ಳಿ ಗೆಲ್ಲಿಸಿದರೆ ಕ್ಷೇತ್ರ ಕೈತಪ್ಪುತ್ತದೆ. ಸೋಲಿಸಿದರೆ ಉಪ ಮುಖ್ಯಮಂತ್ರಿ ಪಟ್ಟ. ಇವುಗಳ ಮಧ್ಯೆ ಆಯ್ಕೆ ಬಲು ಕಷ್ಟ.

ಕಾಗವಾಡಕಳೆದ ಬಾರಿಯ ಎದುರಾಳಿಗಳು ಈ ಬಾರಿಯೂ ಮುಖಾಮುಖಿಯಾಗಿದ್ದಾರೆ. ಒಂದೇ ವ್ಯತ್ಯಾಸ ಪಕ್ಷ ಮತ್ತು ಚಿನ್ಹೆ ಅದಲು ಬದಲು. ಕಾಂಗ್ರೆಸ್‍ನ ಶ್ರೀಮಂತ ಪಾಟೀಲ್ ಈ ಬಾರಿ ಅನರ್ಹನೆಂಬ ಹಣೆಪಟ್ಟಿಯೊಂದಿಗೆ ಬಿಜೆಪಿ ಅಭ್ಯರ್ಥಿ. ಜನರ ತಿರಸ್ಕಾರಕ್ಕೆ ಗುರಿಯಾಗಿದ್ದ ರಾಜು ಕಾಗೆ ಈಗ ಕಾಂಗ್ರೆಸ್‍ನ ಹುರಿಯಾಳು. ಇಲ್ಲಿ ಯಾರೇ ಗೆದ್ದರೂ ಅಂತರ ಬಲು ಕಡಿಮೆ.

ಹಿರೇಕೆರೂರುಆಪರೇಷನ್ ಕಮಲಕ್ಕೆ ನಾನು ಬೀಳುವುದಿಲ್ಲವೆನ್ನುತ್ತಲೆ ಕಮಲದ ಗಾಳಕ್ಕೆ ಬಿದ್ದ ಮಾಜಿ ಪೊಲೀಸ್ ಹಾಲಿ ರಾಜಕೀಯ ನಟ ಬಿ.ಸಿ.ಪಾಟೀಲ್‍ರ ಮಂತ್ರಿ ಪದವಿ ಆಸೆಗಾಗಿ ಹಿರೇಕೆರೂರಿನಲ್ಲಿ ಮತ್ತೆ ಚುನಾವಣೆ ಬಂದೊದಗಿದೆ. ಖಾಕಿ ಬಿಟ್ಟು ಖಾದಿ ಹಾಕಿದ್ದ ಪಾಟೀಲರು ಈ ಬಾರಿ ಅದರ ಮೇಲೆ ಕೇಸರಿ ಶಾಲು ಹೊದ್ದಿದ್ದಾರೆ. ಅವರ ಎದುರಾಳಿ ಇನ್ನೊಬ್ಬ ಲಿಂಗಾಯತ ಬನ್ನಿಕೋಡ್ ಕಾಂಗ್ರೆಸ್‍ನಿಂದ ಕಣಕ್ಕಿಳಿದಿದ್ದಾರೆ. ಕಳೆದ ಬಾರಿ 555 ಮತಗಳಿಂದ ಸೋತಿದ್ದ ಬಿಜೆಪಿಯ ಯು.ಬಿ.ಬಣಕಾರ ಈ ಬಾರಿ ಭಿನ್ನಮತವನ್ನು ಹೊರಗಡೆ ತೋರಿಲ್ಲವಾದರು ಒಳಗೆ ಕನ್ನ ಕೊರೆಯಲ್ಲ ಅಂತ ಹೇಳೊಕಾಗಲ್ಲ.

ರಾಣಿಬೆನ್ನೂರಅದೃಷ್ಟ ಒಲಿದರೆ ಒದಕೊಂಡು ಬರುತ್ತದೆ ಅಂತಾರೆ. ಇದು ರಾಣಿಬೆನ್ನೂರ ಕ್ಷೇತ್ರಕ್ಕೆ ಅಕ್ಷರಶಃ ಅನ್ವಯಿಸುತ್ತದೆ. ಯಾಕೆಂದರೆ ಮೊದಲು ಅದೃಷ್ಟ ಕೈ ಹಿಡಿದಿದ್ದು ಆರ್.ಶಂಕರ್‌ಗೆ ಸಮ್ಮಿಶ್ರ ಸರಕಾರದಲ್ಲಿ ಎರಡೆರಡು ಬಾರಿ ಸಚಿವರಾಗಿ ಅಧಿಕಾರ ಸ್ವೀಕರಿಸಿ ನಂತರ ಆಪರೇಷನ್ ಕಮಲಕ್ಕೆ ಒಳಗಾಗಿ ಅನರ್ಹತೆ ಪಟ್ಟಕಟ್ಟಿಕೊಂಡು ಹೆಸರೂ ಕೆಡಿಸಿಕೊಂಡು ಟಿಕೆಟ್ ಪಡೆಯಲೂ ವಿಫಲರಾಗಿದ್ದಾರೆ. ಈ ಮೂಲಕ ತಮ್ಮ ರಾಜಕೀಯ ಜೀವನಕ್ಕೆ ತಾವೇ ಬೆಂಕಿ ಇಟ್ಟುಕೊಂಡಿದ್ದಾರೆ. ಹೀಗಾಗಿ ಶಂಕರ್ ಬದಲು BJP ಇಲ್ಲಿಂದ ಪೂಜಾರಿ ಎಂಬ ಹೊಸಬರಿಗೆ ಟಿಕೆಟ್ ನೀಡಿದೆ. ಇದು ಹಳೆಹುಲಿ K.B ಕೋಳಿವಾಡರನ್ನು ಮತ್ತೊಮ್ಮೆ ಅದೃಷ್ಟದ ಬಾಗಿಲ ಬಳಿ ತಂದು ನಿಲ್ಲಿಸಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಮೂಡಾ ಹಗರಣ ಆರೋಪ : ಸಿಎಂ ಸಿದ್ದರಾಮಯ್ಯ ಸೇರಿ ಆರು ಮಂದಿ ವಿರುದ್ಧ ಲೋಕಾಯುಕ್ತಕ್ಕೆ...

0
ಆಪಾದಿತ ಮೂಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಪತ್ನಿ ಬಿ.ಎಂ ಪಾರ್ವತಿ ಸೇರಿ ಆರು ಮಂದಿ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗಿದೆ. ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಿ, ಇವರ ಸಹೋದರ ಬಿ.ಎಂ ಮಲ್ಲಿಕಾರ್ಜುನಸ್ವಾಮಿ,...