Homeಮುಖಪುಟನಾವು ಯಾವಾಗ ಎಚ್ಚರಗೊಳ್ಳುತ್ತೇವೆ? ರಾಜಸ್ಥಾನ ಬಿಕ್ಕಟ್ಟಿನ ಮಧ್ಯೆ ಕಪಿಲ್ ಸಿಬಲ್ ಆತ್ಮಾವಲೋಕನ!

ನಾವು ಯಾವಾಗ ಎಚ್ಚರಗೊಳ್ಳುತ್ತೇವೆ? ರಾಜಸ್ಥಾನ ಬಿಕ್ಕಟ್ಟಿನ ಮಧ್ಯೆ ಕಪಿಲ್ ಸಿಬಲ್ ಆತ್ಮಾವಲೋಕನ!

ಕಪಿಲ್ ಸಿಬಲ್‌ ಅವರ ಈ ಟ್ವೀಟ್‌ ಆತ್ಮಾವಲೋಕನವು, ಪಕ್ಷದ ಸ್ಥಿತಿಯ ಬಗೆಗಿನ ಬೇಸರವನ್ನು, ಪಕ್ಷದ ಮುಖಂಡರ ನಿಷ್ಕ್ರಿಯತೆಯನ್ನು ತೋರಿಸುತ್ತದೆ ಎಂಬ ಚರ್ಚೆಗಳು ಆರಂಭವಾಗಿವೆ.

- Advertisement -
- Advertisement -

ರಾಜಸ್ಥಾನದ ಉಪಮುಖ್ಯಮಂತ್ರಿ ಸಚಿನ್ ಪೈಲಟ್ 19 ಶಾಸಕರೊಂದಿಗೆ ಪಕ್ಷ ತ್ಯಜಿಸಿ ಬಿಜೆಪಿ ಸೇರುವ ಸೂಚನೆ ನೀಡಿದ ನಂತರ ಕಾಂಗ್ರೆಸ್ ಹಿರಿಯ ಮುಖಂಡ ಕಪಿಲ್ ಸಿಬಲ್ ಆತ್ಮಾವಲೋಕನಕ್ಕೆ ಮುಂದಾಗಿದ್ದಾರೆ.

“ನಮ್ಮ ಪಕ್ಷದ ಕುರಿತು ಚಿಂತಿತನಾಗಿದ್ದೇನೆ. ನಮ್ಮ ಅಶ್ವಶಾಲೆಗಳಿಂದ ಕುದುರೆಗಳು ತಪ್ಪಿಸಿಕೊಂಡ ನಂತರವೇ ನಾವು ಎಚ್ಚರಗೊಳ್ಳುತ್ತೇವೆ” ಎಂದು ವಿ‍ಷಾಧದ ದನಿಯಲ್ಲಿ ಕಪಿಲ್ ಸಿಬಲ್ ಟ್ವೀಟ್ ಮಾಡಿದ್ದಾರೆ.

ಕಪಿಲ್ ಸಿಬಲ್‌ ಅವರ ಈ ಟ್ವೀಟ್‌ ಆತ್ಮಾವಲೋಕನವು, ಪಕ್ಷದ ಸ್ಥಿತಿಯ ಬಗೆಗಿನ ಬೇಸರವನ್ನು, ಪಕ್ಷದ ಮುಖಂಡರ ನಿಷ್ಕ್ರಿಯತೆಯನ್ನು ತೋರಿಸುತ್ತದೆ ಎಂಬ ಚರ್ಚೆಗಳು ಆರಂಭವಾಗಿವೆ.

ಕಳೆದ ವರ್ಷ ಕರ್ನಾಟಕ, ಈ ವರ್ಷ ಮಧ್ಯಪ್ರದೇಶ ಸೇರಿದಂತೆ ಭಾರತದ ಪ್ರಮುಖ ಮತ್ತು ದೊಡ್ಡ ರಾಜ್ಯಗಳಲ್ಲಿ ಕಾಂಗ್ರೆಸ್‌ ಪಕ್ಷವು ಬಿಜೆಪಿಯ ಆಪರೇಷನ್‌ ಕಮಲಕ್ಕೆ ಸೋತು ಅಧಿಕಾರ ಕಳೆದುಕೊಂಡಿದೆ. ಈಗ ರಾಜಸ್ಥಾನದಲ್ಲಿಯೂ ಅದೇ ಸ್ಥಿತಿ ಎದರಿಸುತ್ತಿದ್ದು, ಸಚಿನ್ ಪೈಲಟ್ ಪಕ್ಷ ತ್ಯಜಿಸುವುದು ಬಹುತೇಕ ಖಚಿತವಾಗಿದೆ.

ಸಚಿನ್ ಪೈಲಟ್ ಮಾರ್ಚ್‌ನಿಂದ ಬಿಜೆಪಿಯೊಂದಿಗೆ ಸಂಪರ್ಕದಲ್ಲಿದ್ದರು ಎಂದು ಮೂಲಗಳು ತಿಳಿಸಿವೆ. ಮಧ್ಯಪ್ರದೇಶದಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ 22 ಶಾಸಕರೊಂದಿಗೆ ಪಕ್ಷದಿಂದ ಹೊರಬಂದು ಬಿಜೆಪಿ ಸೇರಿದಾಗ ಅಲ್ಲಿನ ಮಧ್ಯಪ್ರದೇಸ ಸರ್ಕಾರ ಕುಸಿದುಬಿದ್ದಿದೆ.

ಅಶೋಕ್ ಗೆಹ್ಲೋಟ್‌ರೊಂದಿಗಿನ ಅನುಭವ ಸಾಕಾಗಿದೆ ಎಂದು ಸಚಿನ್ ಪೈಲಟ್ ಹೇಳಿದ್ದಾರೆ. ಸರ್ಕಾರ ಉರುಳಿಸುವ ಆರೋಪದ ಸಮನ್ಸ್ ಅನ್ನು ನೀಡಿರುವುದು ಒಬ್ಬ ಉಪಮುಖ್ಯಮಂತ್ರಿಯನ್ನು ನಡೆಸಿಕೊಳ್ಳುವ ರೀತಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದು ರಾತ್ರಿ 9 ಗಂಟೆಗೆ ತಮ್ಮ ನಿವಾಸಿದಲ್ಲಿ ಕಾಂಗ್ರೆಸ್ ಶಾಸಕರ ಸಭೆಯನ್ನು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕರೆದಿದ್ದಾರೆ. ಸಚಿನ್ ಪೈಲಟ್‌ರವರಿಗೆ ಕರೆ ಮಾಡಲು ಪ್ರಯತ್ನಿಸಲಾಯಿತು. ಆದರೆ ಅವರು ಕರೆಗೆ ಉತ್ತರಿಸಿಲ್ಲ ಎಂದು ಗೆಹ್ಲೋಟ್ ಸಹವರ್ತಿಗಳು ತಿಳಿಸಿದ್ದಾರೆ.


ಇದನ್ನೂ ಓದಿ: ಸಚಿನ್ ಪೈಲಟ್‌ಗೆ 19 ಶಾಸಕರ ಬೆಂಬಲ: CM ಸ್ಥಾನಕ್ಕೆ ಪಟ್ಟು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...