Homeಮುಖಪುಟಚಂದ್ರಬಾಬು ನಾಯ್ಡು ಜಾಣ ನಡೆ ಏನು ಗೊತ್ತೇ?

ಚಂದ್ರಬಾಬು ನಾಯ್ಡು ಜಾಣ ನಡೆ ಏನು ಗೊತ್ತೇ?

ರಾಜ್ಯದಲ್ಲಿ ಗೆಲ್ಲದಿದ್ದರೂ ಕೇಂದ್ರದ ಅಧಿಕಾರದ ಚುಕ್ಕಾಣಿ ಹಿಡಿಯುವ ಮೈತ್ರಿಕೂಟದ ಸಂಚಾಲಕರಾದರೆ ಚಂದ್ರಬಾಬು ನಾಯ್ಡು ಅವರಿಗೆ ಹಲವು ಅನುಕೂಲಗಳಿವೆ.

- Advertisement -
- Advertisement -

||ನಾನು ಗೌರಿ ಡೆಸ್ಕ್||
ಕೇಂದ್ರದಲ್ಲಿ ಮೈತ್ರಿ ಕೂಟದ ಸರ್ಕಾರವೊಂದನ್ನು ರಚಿಸಬೇಕೆಂದು ಬೇರೆ ಇನ್ನಾವುದೇ ಪಕ್ಷ ಅಥವಾ ನಾಯಕರಿಗಿಂತ ಹೆಚ್ಚಾಗಿ ಓಡಾಡುತ್ತಿರುವುದು ತೆಲುಗುದೇಶಂ ಪಕ್ಷದ ನಾಯಕ ಚಂದ್ರಬಾಬು ನಾಯ್ಡು. ಸಾಮಾನ್ಯವಾಗಿ ಕಾಂಗ್ರೆಸ್‍ನ ಕೆಲವು ನಾಯಕರು ಅಥವಾ ಎನ್‍ಸಿಪಿಯ ಶರದ್‍ಪವಾರ್ ಈ ಪಾತ್ರವನ್ನು ವಹಿಸುತ್ತಿದ್ದರು. ಆದರೆ, ಅದನ್ನೀಗ ನಾಯ್ಡು ಏಕೆ ಮಾಡುತ್ತಿದ್ದಾರೆ?


ಹಾಗೆ ನೋಡಿದರೆ ಇದು ಅವರಿಗೇನೂ ಹೊಸದಲ್ಲ. ಕಾಂಗ್ರೆಸ್ ಮತ್ತು ಬಿಜೆಪಿಗಳೆರಡನ್ನೂ ಸರ್ಕಾರದಿಂದ ಹೊರಗಿಟ್ಟು ಸರ್ಕಾರ ನಡೆಸಿದ್ದು 1996ರಲ್ಲಿ ಸಂಯುಕ್ತ ರಂಗದ ಮೂಲಕ. ಆಗಲೂ ಅದರ ಸಂಚಾಲಕರಾಗಿದ್ದು ಚಂದ್ರಬಾಬು ನಾಯ್ಡುವೇ. ಆ ನಂತರ ನಾಯ್ಡು ಎನ್‍ಡಿಎ ಸೇರುವ ಹೊತ್ತಿಗೆ ಅದರ ಸಂಚಾಲಕರಾಗಿದ್ದು ಸಮತಾ ಪಕ್ಷದ ಜಾರ್ಜ್ ಫರ್ನಾಂಡೀಸ್. ಸಮತಾ ಪಕ್ಷವು ಜೆಡಿಯು ಆದ ಮೇಲೂ ಜಾರ್ಜ್ ಅದರ ಸಂಚಾಲಕರಾಗಿದ್ದರು. 2008ರಲ್ಲಿ ಅನಾರೋಗ್ಯದಿಂದ ಅವರು ಹಿಂದೆ ಸರಿದಾಗ ಜೆಡಿಯುನ ಶರದ್ ಯಾದವ್ ಸಂಚಾಲಕರಾದರು.

ಇದನ್ನೂ ಓದಿ: ರಾಜಕಾರಣಿಗಳ  ಎಕ್ಸಿಟ್ ಪೋಲ್ ಏನು ಹೇಳುತ್ತದೆ?
ಜೆಡಿಯು ಎನ್‍ಡಿಎದಿಂದ ಹೊರಹೋದ ಮೇಲೆ ಎನ್‍ಡಿಎ ಸಂಚಾಲಕರಾಗಿದ್ದು ಇದೇ ಚಂದ್ರಬಾಬು ನಾಯ್ಡು. ಅವರು ಸಂಚಾಲಕರಾಗಿದ್ದಾಗಲೇ ಮತ್ತೆ ಎನ್‍ಡಿಎ ಅಧಿಕಾರವನ್ನು ಹಿಡಿದರೂ, ಬಿಜೆಪಿ ಜೊತೆಗಿನ ಅವರ ಸಂಬಂಧ ಉಳಿದುಕೊಳ್ಳಲಿಲ್ಲ. ಅದರಲ್ಲೂ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ಕೊಡುವುದೂ ಸೇರಿದಂತೆ ಹಲವು ವಿಚಾರಗಳಲ್ಲಿ ಮೋದಿ ನಾಯ್ಡು ಅವರನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ. ಹಾಗಾಗಿ ಅವರು ಎನ್‍ಡಿಎ ತೊರೆದರಲ್ಲದೇ ಮೋದಿಯನ್ನು ಕೆಳಗಿಳಿಸುವ ಶಪಥ ತೊಟ್ಟರು.


ಹೊಸ ರಾಜ್ಯವಾಗಿ ಆಂಧ್ರಪ್ರದೇಶ ಮತ್ತೊಮ್ಮೆ ಉದಯವಾದ ಮೇಲೆ ನಾಯ್ಡು ಅವರಿಗೆ ದೊಡ್ಡ ಸವಾಲು ಎದುರಾಯಿತು. ಆದಾಯ ತಂದುಕೊಡುವ ಮೆಟ್ರೋ ನಗರ ಹೈದರಾಬಾದ್ ಇಲ್ಲದೇ ರಾಜ್ಯವನ್ನು ನಡೆಸಬೇಕು ಮತ್ತು ಹೊಸ ರಾಜಧಾನಿಯನ್ನೂ ಕಟ್ಟಿಕೊಳ್ಳಬೇಕು. ಅದನ್ನು ಯಶಸ್ವಿಯಾಗಿಯೇ ನಡೆಸಿದ ಅವರು, ಕೇಂದ್ರದ ನೆರವನ್ನು ಕೇಳಿದರು. ಅಂತಹ ನೆರವನ್ನು ಉದಾರವಾಗಿ ನೀಡುವ ಇರಾದೆ ಮೋದಿಯವರದ್ದಾಗಿರಲಿಲ್ಲ. ಇಂತಹ ಸಂದರ್ಭದಲ್ಲಿ ವಿಶೇಷ ಸ್ಥಾನಮಾನಕ್ಕೆ ಆಗ್ರಹಿಸಿ ವಿರೋಧ ಪಕ್ಷ ವೈಎಸ್‍ಆರ್‍ಸಿಪಿಯ ಜಗನ್ ದೆಹಲಿಯಲ್ಲೂ ಧರಣಿ ಹೂಡಿದ್ದರು. ಹೀಗಾಗಿ ಕೇಂದ್ರದ ವಿರುದ್ಧ ತೊಡೆ ತಟ್ಟುವು ಅನಿವಾರ್ಯತೆ ಚಂದ್ರಬಾಬು ನಾಯ್ಡು ಅವರಿಗೆ ಉಂಟಾಯಿತು.


ಲೋಕಸಭೆಯ ಜೊತೆ ಜೊತೆಗೇ ವಿಧಾನಸಭಾ ಚುನಾವಣೆಯನ್ನೂ ಎದುರಿಸುತ್ತಿರುವ ಆಂಧ್ರದಲ್ಲಿ, ಈ ಸಾರಿ ಜಗನ್ ಅಧಿಕಾರಕ್ಕೆ ಬರುತ್ತಾರೆ ಎಂದು ಸಮೀಕ್ಷೆಗಳು ಹೇಳುತ್ತಿವೆ. ಆದರೆ, ನಾಯ್ಡು ಅವರ ವಿಶ್ವಾಸ ಅಲುಗಾಡಿಲ್ಲ. ಒಂದು ವೇಳೆ, ಅಧಿಕಾರಕ್ಕೆ ಬರದೇ ಹೋದರೂ, ತನಗೊಂದು ವಿಶೇಷ ಸ್ಥಾನ ಕಲ್ಪಿಸಿಕೊಳ್ಳಲು ಅವರು ದೆಹಲಿಯ ದಾರಿ ತುಳಿದಿದ್ದಾರೆ.


ಯುಪಿಎ ಸರ್ಕಾರವೂ ಆಗದು, ತೃತೀಯ ರಂಗ ಮಾತ್ರವೇ ಅಧಿಕಾರಕ್ಕೆ ಬರುವುದೂ ಸಾಧ್ಯವಿಲ್ಲ. ಅಂತಹ ಸಂದರ್ಭದಲ್ಲಿ ಹುಟ್ಟಿಕೊಳ್ಳಬಹುದಾದ ಹೊಸ ರಂಗಕ್ಕೆ ಸಂಚಾಲಕರಾಗಿ ಚಂದ್ರಬಾಬು ನಾಯ್ಡು ಸಹಜ ಆಯ್ಕೆಯಾಗಿರುತ್ತಾರೆ. ಅದಕ್ಕೆ ಬೇಕಾದಷ್ಟು ಕೆಲಸವನ್ನು ಅವರೀಗಾಗಲೇ ಮಾಡಿದ್ದಾರೆ. ಮುಖ್ಯಮಂತ್ರಿಯಾಗದೇ ಇದ್ದರೂ ಅಂತಹ ರಂಗವೊಂದರ ಸಂಚಾಲಕರಾಗಿ, ಅಮರಾವತಿ (ಆಂಧ್ರದ ಹೊಸ ರಾಜಧಾನಿ)ಯಲ್ಲೋ ಅಥವಾ ದೆಹಲಿಯಲ್ಲೋ ಕೂತು ಪತ್ರಿಕಾಗೋಷ್ಠಿ ಮಾಡಿ, ಆಂಧ್ರಕ್ಕೆ ವಿಶೇಷ ಸ್ಥಾನಮಾನವನ್ನು ಘೋಷಿಸುವ ಅವಕಾಶ ಅವರದ್ದಾಗಿರುತ್ತದೆ.


ಈ ಮೂಲಕ ಮುಖ್ಯಮಂತ್ರಿಯಾಗದೇ ಹೋದರೂ ಆಂಧ್ರದ ಉದ್ಧಾರಕನಾಗಿ ನಾಯ್ಡುವೇ ಇರುತ್ತಾರೆ. ನಿಧಾನಕ್ಕೆ ಜಗನ್‍ರನ್ನು ಹಣಿದು, ತನಗೋ ಅಥವಾ ತನ್ನ ಮಗ ನಾರಾ ಲೋಕೇಶ್‍ಗೋ ಮುಂದಿನ ಅವಧಿಯಲ್ಲಿ ಸ್ಥಾನ ಮಾಡಿಕೊಳ್ಳಲು ಅನುಕೂಲವಾಗುತ್ತದೆ. ಚಂದ್ರಬಾಬು ನಾಯ್ಡು ಅವರಿಗೆ ಈ ಲೆಕ್ಕಾಚಾರವೂ ಇರುವುದರಲ್ಲಿ ಸಂದೇಹವೇನಿಲ್ಲ. ಮೋದಿಯನ್ನು ಪ್ರಧಾನಿಯಾಗದಂತೆ ತಡೆಯಬೇಕು ಮತ್ತು ದೇಶದ ಪ್ರಜಾತಂತ್ರವು ಬಹಳ ಕೆಟ್ಟ ಪರಿಸ್ಥಿತಿಯಲ್ಲಿರುವುದರಿಂದ ಇದು ತನ್ನ ಕರ್ತವ್ಯ ಎಂದು ಹೇಳುತ್ತಿರುವ ಅವರ ಮಾತುಗಳು ಸಂಪೂರ್ಣ ಸುಳ್ಳಲ್ಲದಿರಬಹುದು. ಆದರೆ, ಈ ಲೆಕ್ಕಾಚಾರ ಇಲ್ಲವೇ ಇಲ್ಲ ಎಂದೂ ಹೇಳಲಾಗದು.

ಇದನ್ನೂ ಓದಿ: ಚಂದ್ರಬಾಬು ನಾಯ್ಡು ಅವರ ಅಭ್ಯರ್ಥಿ ಪ್ರಣಬ್ ಮುಖರ್ಜಿ

ಆದರೆ, ಯಾವ ಸಾಧ್ಯತೆ ಎಷ್ಟು ಎಂಬುದನ್ನು ಖಚಿತವಾಗಿ ಹೇಳಲು ಸಾಧ್ಯವಾಗುವುದು ಮೇ 23ರ ಸಂಜೆಯೇ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ರತಿಭಟನೆಗೆ ಹೋಗುವ ಮಹಿಳೆಯರು ಗ್ಯಾಂಗ್‌ರೇಪ್‌ ಆನಂದಿಸುತ್ತಾರೆ ಎಂದಿದ್ದ ಟಿ.ಜಿ. ಮೋಹನ್‌ದಾಸ್‌ ವಿರುದ್ಧ ಎಫ್‌ಐಆರ್‌ ದಾಖಲು

ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವವರ ಮೇಲೆ, ನನ್ನ ಕೈಯಲ್ಲಿ ಅಧಿಕಾರವಿದ್ದರೆ ಗುಂಡು ಹಾರಿಸುತ್ತಿದ್ದೆ ಎಂದು ಇತ್ತೀಚಿನ ಯೂಟ್ಯೂಬ್ ವೀಡಿಯೊದಲ್ಲಿ ಹೇಳಿಕೆ ನೀಡಿದ್ದ ಹಿಂದುತ್ವವಾದಿ ಚಿಂತಕ ಟಿ.ಜಿ. ಮೋಹನ್‌ದಾಸ್ ವಿರುದ್ಧ ತಿರುವನಂತಪುರಂ ಸಿಟಿ...

ಫ್ರಾನ್ಸ್‌ನಲ್ಲಿ ಕೆಲಸದ ಸಮಯ ಟ್ರ್ಯಾಕಿಂಗ್ ಲೋಪ: ಇನ್ಫೋಸಿಸ್‌ಗೆ ₹1.9 ಕೋಟಿ ದಂಡ: ನಾರಾಯಣಮೂರ್ತಿಯವರ ‘70 ಗಂಟೆ ಶ್ರಮ’ದ ಮಾದರಿ ಟ್ರೋಲ್

ಭಾರತೀಯ ಐಟಿ ರಫ್ತು ಸೇವಾ ರಂಗದ ಬೃಹತ್ ಸಂಸ್ಥೆಯಾದ ಇನ್ಫೋಸಿಸ್‌ಗೆ ಫ್ರಾನ್ಸ್‌ನಲ್ಲಿ ಹಿನ್ನಡೆಯಾಗಿದೆ. ಉದ್ಯೋಗಿಗಳ ಕೆಲಸದ ಸಮಯವನ್ನು ದಾಖಲಿಸುವ ವ್ಯವಸ್ಥೆಯಲ್ಲಿನ ನ್ಯೂನತೆಗಳು ಹಾಗೂ ಸ್ಥಳೀಯ ಕಾರ್ಮಿಕ ನಿಯಮಾವಳಿಗಳ ಪಾಲನೆಯಲ್ಲಿ ಕಂಡುಬಂದ ಲೋಪಗಳ ಹಿನ್ನೆಲೆಯಲ್ಲಿ...

ವೋಟರ್ ಐಡಿ, ಬ್ಯಾಂಕ್ ಪಾಸ್‌ಬುಕ್, ಆಧಾರ್, ಜಮೀನಿನ ಹಕ್ಕು ಪತ್ರ ಇದ್ದ ಮಾತ್ರಕ್ಕೆ ಭಾರತೀಯ ಪ್ರಜೆಯಾಗಲ್ಲ: ಕಲ್ಕತ್ತಾ ಹೈಕೋರ್ಟ್

ಆಧಾರ್ ಕಾರ್ಡ್, ಪಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಬ್ಯಾಂಕ್ ಪಾಸ್‌ಬುಕ್ ಮತ್ತು ಪಿತ್ರಾರ್ಜಿತ ಜಮೀನಿನ ದಾಖಲೆಗಳು ಭಾರತೀಯ ಪೌರತ್ವವನ್ನು ನಿರೂಪಿಸಲು ಅಂತಿಮ ಅಥವಾ ನಿರ್ಣಾಯಕ ಪುರಾವೆಗಳಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ಮಹತ್ವದ...

‘ನಿಮ್ಮ ಸಮಯ ಬಂದಿದೆ’: ಟೌನ್‌ಶಿಪ್ ಯೋಜನೆ ವಿರುದ್ಧದ ಪ್ರತಿಭಟನೆಗೆ 500 ದಿನ: ‘Gen-Z’ ಯುವಕರ ಬೆಂಬಲ ಕೋರಿದ ಬಿಡದಿ ರೈತರು

ಬೆಂಗಳೂರು: ಪ್ರಸ್ತಾವಿತ ಬಿಡದಿ ಟೌನ್‌ಶಿಪ್ ಯೋಜನೆ ವಿರುದ್ಧ ಕೃಷಿ ಭೂಮಿ ಉಳಿವಿಗಾಗಿ ನಡೆಯುತ್ತಿರುವ ರೈತರ ಸುದೀರ್ಘ ಹೋರಾಟವು ಇದೀಗ ಒಂದು ಪ್ರಮುಖ ಘಟ್ಟಕ್ಕೆ ಬಂದು ತಲುಪಿದೆ. ಭೂಸ್ವಾಧೀನದ ವಿರುದ್ಧ ಸತತವಾಗಿ ನಡೆಯುತ್ತಿರುವ ಈ...

ಕೊಡಗಿನ ಆದಿವಾಸಿ ಹಾಡಿಗಳಲ್ಲಿ ಎಸ್‌ಐಆರ್ ಅವ್ಯವಸ್ಥೆ : ಬಿಎಲ್‌ಒಗಳಿಗೆ ತರಬೇತಿಯ ಕೊರತೆ, ಇನ್ನೂ ತಲುಪದ ಗಣತಿ ಫಾರಂ

ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಬಹಳ ಯಶಸ್ವಿಯಾಗಿ ನಡೆಯುತ್ತಿದೆ, ಮತದಾರರಿಗೆ ಎಲ್ಲಾ ರೀತಿಯ ಸಹಾಯಗಳನ್ನು ಒದಗಿಸಲಾಗುತ್ತಿದೆ ಎಂದು ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಅನ್ಬುಕುಮಾರ್ ಅವರು ಪದೇ...

SIR: ಉಡುಪಿಯಲ್ಲಿ ಕರ್ತವ್ಯನಿರತ BLO ಮೇಲೆ ಹಲ್ಲೆಗೆತ್ನಿಸಿದ ಮಾಜಿ ಪಂಚಾಯತ್ ಅಧ್ಯಕ್ಷ, FIR ದಾಖಲು

ಚುನಾವಣಾ ಮತದಾರರ ಪಟ್ಟಿ ಪರಿಷ್ಕರಣೆ (SIR) ಕರ್ತವ್ಯದಲ್ಲಿದ್ದ ಅಂಗನವಾಡಿ ಕಾರ್ಯಕರ್ತೆ ಹಾಗೂ ಬಿಎಲ್‌ಒ (BLO) ಮಹಿಳೆ ಮೇಲೆ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದ ಗಂಭೀರ ಆರೋಪ ಉಡುಪಿ...

ಕೋಟ್ಯಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ NTA ಚೆಲ್ಲಾಟ: RTI ನಲ್ಲಿ ಬಯಲಾಯ್ತು NTA ಕರ್ಮಕಾಂಡ

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಎನ್ನುವ ಈ ಸರ್ಕಾರಿ ಸಂಸ್ಥೆಯ ಮೇಲೆ ಪ್ರತಿವರ್ಷ ಕೋಟ್ಯಂತರ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಕನಸುಗಳನ್ನು ಇಟ್ಟುಕೊಳ್ಳುತ್ತಾರೆ. 2018ರಲ್ಲಿ ಸ್ಥಾಪನೆಯಾದ ದಿನದಿಂದ ಇಲ್ಲಿಯವರೆಗೆ ಎನ್‌ಟಿಎ ಸುಮಾರು 270ಕ್ಕೂ ಹೆಚ್ಚು...

ಬಾಗಲಕೋಟೆ: ಪತಿಯಿಂದ 23 ವರ್ಷದ ಪತ್ನಿಯ ಕ್ರೂರ ಕೊಲೆ, ಪೋಷಕರಿಗೆ ವೀಡಿಯೊ ಕರೆ ಮಾಡಿ ಮಗಳ ಸಾವು-ಬದುಕಿನ ಹೋರಾಟ ತೋರಿಸಿದ ವಿಕೃತ ಪತಿ

ಬಾಗಲಕೋಟೆ: ಪತಿಯೋರ್ವ ತನ್ನ 23 ವರ್ಷದ ಪತ್ನಿಯ ಮೇಲೆ ವಿವಾಹೇತರ ಅನೈತಿಕ ಸಂಬಂಧದ ಶಂಕೆ ವ್ಯಕ್ತಪಡಿಸಿ, ಆಕೆಯ ಮೇಲೆ ಮರದ ದಿಮ್ಮಿಯಿಂದ ಕ್ರೂರವಾಗಿ ಹಲ್ಲೆ ನಡೆಸಿ, ತದನಂತರ ನೇಣಿಗೆ ಬಿಗಿದು ಅತ್ಯಂತ ಅಮಾನವೀಯವಾಗಿ...

ಕಾನೂನು-ಸುವ್ಯವಸ್ಥೆಗೆ ವಿದ್ಯಾರ್ಥಿಗಳು ಸಮಸ್ಯೆಯಾಗುತ್ತಾರೆ ಎಂದು ಪರಿಗಣಿಸಿದ್ದು ಏಕೆ: ಅಭಿಷೇಕ್ ಬ್ಯಾನರ್ಜಿ

ರಾಷ್ಟ್ರ ರಾಜಧಾನಿ ದೆಹಲಿ ಮತ್ತು ದೆಶದಾದ್ಯಂತ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಭಾರೀ ಪೊಲೀಸ್ ಬಲಪ್ರಯೋವನ್ನು ವಿಪಕ್ಷಗಳು ಇಂದು ಲೋಕಸಭೆಯಲ್ಲಿ ಖಂಡಿಸಿವೆ. ವಿದ್ಯಾರ್ಥಿಗಳ...

ಪಬ್ಲಿಕ್ ಟಿವಿ ನಿರೂಪಕ ಅರುಣ್ ಬಡಿಗೇರ್ ವಿರುದ್ದ ಮೈಸೂರಿನಲ್ಲಿ ದೂರು ದಾಖಲು

ಸಂವಿಧಾನಬದ್ಧ ಮೀಸಲಾತಿಯ ಕುರಿತು ಅತ್ಯಂತ ನಿಂದನಾತ್ಮಕ, ಅವಹೇಳನಕಾರಿ ಹಾಗೂ ಸಮಾಜದಲ್ಲಿ ದ್ವೇಷ ಪ್ರಚೋದಿಸುವ ರೀತಿಯ ಹೇಳಿಕೆ ನೀಡಿರುವ 'ಪಬ್ಲಿಕ್ ಟಿವಿ' ನಿರೂಪಕ ಅರುಣ್ ಬಡಿಗೇರ್ ವಿರುದ್ಧ ಮೈಸೂರಿನಲ್ಲಿ ಕಾನೂನು ಕ್ರಮಕ್ಕೆ ಆಗ್ರಹಿಸಿ ಪೊಲೀಸ್‌...