Homeಮುಖಪುಟಜಾರ್ಖಂಡ್: ಗೋಹತ್ಯೆ ನಿಲ್ಲಿಸಬೇಕೆಂದು ಯುವಕನ ಕೊರಳು ಕೊಯ್ದ ಸ್ನೇಹಿತರು!

ಜಾರ್ಖಂಡ್: ಗೋಹತ್ಯೆ ನಿಲ್ಲಿಸಬೇಕೆಂದು ಯುವಕನ ಕೊರಳು ಕೊಯ್ದ ಸ್ನೇಹಿತರು!

ಇಂದು ಬೆಳಿಗ್ಗೆ, ಅಲ್ಲಿನ ಸ್ಥಳೀಯ ಶಾಸಕ ಮತ್ತು ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವ ಮಿಥಲೇಶ್ ಠಾಕೂರ್ ಗಢ್ವಾದಲ್ಲಿನ ಸಾಸರ್ ಆಸ್ಪತ್ರೆಗೆ ಭೇಟಿ ನೀಡಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ.

- Advertisement -
- Advertisement -

ಗೋಹತ್ಯೆಯನ್ನು ಬಿಡಬೇಕೆಂದು ಎಂದು ಒತ್ತಾಯಿಸಿ ಯುವಕನೊಬ್ಬನನ್ನು ಆತನ ಗೆಳಯರೇ ಸೇರಿ ಸೋಮವಾರ ರಾತ್ರಿ ಕೊಂದಿರುವ ಘಟನೆ ಜಾರ್ಖಂಡ್ ರಾಜ್ಯದ ಗಢ್ವಾದಲ್ಲಿ ನಡೆದಿದೆ.

ಇಂದು ಬೆಳಿಗ್ಗೆ, ಅಲ್ಲಿನ ಸ್ಥಳೀಯ ಶಾಸಕ ಮತ್ತು ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವ ಮಿಥಲೇಶ್ ಠಾಕೂರ್ ಗಢ್ವಾದಲ್ಲಿನ ಸಾಸರ್ ಆಸ್ಪತ್ರೆಗೆ ಭೇಟಿ ನೀಡಿದ ನಂತರ ಈ ಘಟನೆ ಬೆಳಕಿಗೆ ಬಂದಿದ್ದು, ಅಲ್ಲಿ ಮೃತನ ತಾಯಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಇಡೀ ಕಥೆಯನ್ನು ವಿವರಿಸಿದ್ದಾರೆ.

ಗಢ್ವಾದ ಸದರ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದ್ದು, ಮೃತನ ತಾಯಿ ಆಯೆಷಾ ಖತೂನ್ ಸಲ್ಲಿಸಿದ ದೂರಿನ ಪ್ರಕಾರ, ತನ್ನ ಮಗ ಮೊಹಮ್ಮದ್ ಅರ್ಜೂ (18) ಎಂಬಾತನನ್ನು ನನ್ನ ಮಗನ ಸ್ನೇಹಿತ ಕೈಲ್ ಖುರೇಶಿ ಸೇರಿದಂತೆ ಮೂರು ಮಂದಿ ಒಟ್ಟಾಗಿ ಹಸುವಿನ ಹತ್ಯೆಯನ್ನು ಬಿಡಬೇಕೆಂದು ಒತ್ತಾಯಿಸಿ ಕೊರಳು ಕೊಯ್ದು ಕೊಂದಿದ್ದಾರೆ” ಎಂದು ದಾಖಲಿಸಿದ್ದಾರೆ.

ಇದನ್ನೂ ಓದಿ: ಕಮಲನಾಥ್ ವಿವಾದಾತ್ಮಕ ಹೇಳಿಕೆ ಟೀಕಿಸಿದ ರಾಹುಲ್ ಗಾಂಧಿ

“ಮೃತ ಯುವಕನ ತಾಯಿ, ತನ್ನ ಮಗನನ್ನು ಮೂರು ಜನರು ಕೊಂದಿದ್ದಾರೆ ಎಂದು ಆರೋಪಿಸಿದ್ದಾರೆ. ಹಸುಗಳನ್ನು ವಧಿಸುವುದನ್ನು ಬಿಟ್ಟುಬಿಡಬೇಕೆಂದು ಆರೋಪಿಗಳು ಒತ್ತಾಯಿಸುತ್ತಿದ್ದರು. ಇದು ಆ ಪ್ರದೇಶದಲ್ಲಿ ಅನಗತ್ಯ ಗಲಭೆಯನ್ನು ಸೃಷ್ಟಿಸಿತು. ಎಫ್‌ಐಆರ್‌ನಲ್ಲಿ, ಕೈಲ್ ಖುರೇಶಿ, ಮುನ್ನು ಖುರೇಶಿ ಮತ್ತು ಖಾಲಿದ್ ಖುರೇಶಿ ಎಂಬ ಮೂವರನ್ನು ಹೆಸರಿಸಲಾಗಿದೆ” ಎಂದು ಇನ್ಸ್‌ಪೆಕ್ಟರ್ ರಾಜೇಶ್ ಕುಮಾರ್ ಹೇಳಿದರು.

ಪ್ರಧಾನ ಆರೋಪಿ ಕೈಲ್ ಖುರೇಶಿ ಪ್ರಾಣಿಗಳನ್ನು ವಧಿಸಲು ಬಳಸುವ ತೀಕ್ಷ್ಣವಾದ ಆಯುಧಗಳಿಂದ ಜನರ ಮೇಲೆ ಹಲ್ಲೆ ನಡೆಸುತ್ತಿದ್ದ ಕುಖ್ಯಾತ. ಈ ಹಿಂದೆ ಆತ ತಮ್ಮ ಕುಟುಂಬ ಸದಸ್ಯರ ಮೇಲೆಯೇ ಹಲವಾರು ಬಾರಿ ಹಲ್ಲೆ ಮಾಡಿದ್ದ. ಈ ಪ್ರಕರಣದಲ್ಲಿ ಯಾವುದೇ ತೀರ್ಮಾನಕ್ಕೆ ಬರುವ ಮೊದಲು ಎಲ್ಲಾ ಅಂಶಗಳನ್ನು ಪರಿಗಣಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.


ಇದನ್ನೂ ಓದಿ: ಅತಿ ದೊಡ್ಡ ಪಕ್ಷ ಬಿಜೆಪಿಗೆ ನನ್ನನ್ನು ಕಂಡರೆ ಭಯವೇಕೆ?: ತೇಜಸ್ವಿ ಯಾದವ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...