Homeಮುಖಪುಟಕಡಿಮೆ ಪ್ರಯಾಣಿಕರ ಕಾರಣಕ್ಕೆ ‘ರಾಮಾಯಣ ಯಾತ್ರಾ ರೈಲು’ ರದ್ದುಗೊಳಿಸಿದ IRCTC!

ಕಡಿಮೆ ಪ್ರಯಾಣಿಕರ ಕಾರಣಕ್ಕೆ ‘ರಾಮಾಯಣ ಯಾತ್ರಾ ರೈಲು’ ರದ್ದುಗೊಳಿಸಿದ IRCTC!

- Advertisement -
- Advertisement -

ಭಾರತ್ ಗೌರವ್ ಸರಣಿಯ ಅಡಿಯಲ್ಲಿ ಆಗಸ್ಟ್ 24 ರಂದು ಓಡಬೇಕಿದ್ದ ಎರಡನೇ ‘ರಾಮಾಯಣ ಯಾತ್ರಾ ರೈಲು’ ಕಡಿಮೆ ಸಂಖ್ಯೆಯ ಪ್ರಯಾಣಿಕರ ಕಾರಣದಿಂದ ರದ್ದುಗೊಂಡಿದೆ ಎಂದು ಮಂಗಳವಾರ ವರದಿಯಾಗಿದೆ. ಈ ಬಗ್ಗೆ IRCTC ಇತ್ತೀಚೆಗೆ ಬಿಡುಗಡೆ ಮಾಡಿದ ಹೇಳಿಕೆ ತಿಳಿಸಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (IRCTC) ಈ ಹಿಂದೆ 20 ದಿನಗಳ ಕಾಲ ‘ಭಾರತ್ ಗೌರವ್’ ಪ್ರವಾಸಿ ರೈಲು ಮೂಲಕ ‘ಶ್ರೀ ರಾಮಾಯಣ ಯಾತ್ರೆ’ ಧಾರ್ಮಿಕ ಪ್ರವಾಸ ಪ್ಯಾಕೇಜ್ ಅನ್ನು ಪರಿಚಯಿಸಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಭಾರತ್ ಗೌರವ್ ಸರಣಿಯ ಅಡಿಯಲ್ಲಿ ಆಗಸ್ಟ್ 24 ರಂದು ಓಡಬೇಕಿದ್ದ ಎರಡನೇ ರಾಮಾಯಣ ಯಾತ್ರಾ ರೈಲು ಕಡಿಮೆ ಸಂಖ್ಯೆಯ ಪ್ರಯಾಣಿಕರ ಕಾರಣದಿಂದ ರದ್ದುಗೊಂಡಿದೆ” ಎಂದು  IRCTC ಇತ್ತೀಚೆಗೆ ಬಿಡುಗಡೆ ಮಾಡಿದ ಹೇಳಿಕೆ ತಿಳಿಸಿದೆ. ಪ್ರವಾಸವು ಆಗಸ್ಟ್ 24 ರಿಂದ ಪ್ರಾರಂಭವಾಗಬೇಕಿತ್ತು. ಹೊಸ ದೆಹಲಿಯ ಸಫ್ದರ್‌ಜಂಗ್ ರೈಲು ನಿಲ್ದಾಣದಿಂದ ರೈಲು ಹೊರಡುವ ಒಂದು ದಿನದ ಮೊದಲು ಅದನ್ನು ರದ್ದುಗೊಳಿಸಲಾಗಿದೆ.

ಇದನ್ನೂ ಓದಿ: ಬಾಬರಿ ತೀರ್ಪಿತ್ತ ದಿನ ಇತರ ನ್ಯಾಯಮೂರ್ತಿ‌ಗಳನ್ನು ಡಿನ್ನರ್‌ಗೆ ಕರೆದೊಯ್ದು, ಉತ್ತಮ ವೈನ್‌ ಕೊಡಿಸಿದ್ದೆ: ನಿವೃತ್ತ ಸಿಜೆಐ ರಂಜನ್ ಗೊಗೊಯ್

ಅಯೋಧ್ಯೆ, ಜನಕಪುರ, ಸೀತಾಮರ್ಹಿ, ಬಕ್ಸರ್, ವಾರಣಾಸಿ, ಪ್ರಯಾಗ್‌ರಾಜ್, ಚಿತ್ರಕೂಟ, ನಾಸಿಕ್, ಹಂಪಿ, ರಾಮೇಶ್ವರಂ, ಕಾಂಚೀಪುರಂ ಮತ್ತು ಭದ್ರಾಚಲಂ ಸೇರಿದಂತೆ ರಾಮನಿಗೆ ಸಂಬಂಧಿಸಿದ ಎಲ್ಲಾ ಪ್ರಮುಖ ಸ್ಥಳಗಳನ್ನು ಒಳಗೊಂಡು ಈ ರೈಲು ಪ್ರವಾಸವನ್ನು ಪರಿಚಯಿಸಲಾಗಿತ್ತು. ದೆಹಲಿಯ ಸಫ್ದರ್‌ಜಂಗ್, ತುಂಡ್ಲಾ, ಗಾಜಿಯಾಬಾದ್, ಅಲಿಗಢ, ಕಾನ್ಪುರ್ ಮತ್ತು ಲಕ್ನೋದಿಂದ ಪ್ರಯಾಣಿಕರು ರೈಲು ಹತ್ತಬಹುದಾಗಿತ್ತು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಹೊಟ್ಟೆಗೆ ಹಿಟ್ಟಿಲ್ಲ ಈಗಿನ ಪರಿಸ್ಥಿತಿಯಲ್ಲಿ ಮತ್ತೆ ರಾಮಾಯಣ ಯಾತ್ರೆ ಯಾರಿಗೆ ಬೇಕು……ಜನರು ಸ್ವಲ್ಪ ವಿದ್ಯಾವಂತರಾಗಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Must Read

ಪಂಜಾಬ್‌: ಸಿಖ್ಖರ ಪವಿತ್ರ ಗ್ರಂಥದ ಪುಟಗಳನ್ನು ಹರಿದು ಹಾಕಿದ ಆರೋಪ; ಯುವಕನನ್ನು ಥಳಿಸಿ ಹತ್ಯೆ

0
ಚಂಡೀಗಢ ಗುರುದ್ವಾರವೊಂದರ ಬಳಿ ಸಿಖ್ಖರ ಪವಿತ್ರ ಗ್ರಂಥವಾದ ಗುರು ಗ್ರಂಥ ಸಾಹಿಬ್‌ನ ಕೆಲವು ಪುಟಗಳನ್ನು ಹರಿದು ಹಾಕಿದ ಆರೋಪದಲ್ಲಿ ಶನಿವಾರದಂದು  19 ವರ್ಷದ ಯುವಕನನ್ನು ಥಳಿಸಿ ಹತ್ಯೆ ಮಾಡಿರುವ ಘಟನೆ ಪಂಜಾಬ್‌ನ ಫಿರೋಝ್‌ಪುರ್‌ನಲ್ಲಿ ನಡೆದಿದೆ. ಪೊಲೀಸ್...