Homeಕರೋನಾ ತಲ್ಲಣಕಳೆದ 24 ಗಂಟೆಗಳಲ್ಲಿ 22,771 ಪ್ರಕರಣ: ದೇಶದಲ್ಲಿ ಒಟ್ಟು 6.48 ಲಕ್ಷ ಸೋಂಕಿತರು!

ಕಳೆದ 24 ಗಂಟೆಗಳಲ್ಲಿ 22,771 ಪ್ರಕರಣ: ದೇಶದಲ್ಲಿ ಒಟ್ಟು 6.48 ಲಕ್ಷ ಸೋಂಕಿತರು!

- Advertisement -
- Advertisement -

ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 22,771 ಪ್ರಕರಣಗಳು ದಾಖಲಾಗಿವೆ. ಭಾರತವು ಕೊರೊನಾ ವೈರಸ್ ಪ್ರಕರಣಗಳಲ್ಲಿ ಮತ್ತೊಂದು ಏರಿಕೆ ದಾಖಲಿಸಿ, ಒಟ್ಟು ಸೋಂಕಿತರ ಪ್ರಮಾಣ 6,48,315 ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಶನಿವಾರದ ಅಂಕಿ ಅಂಶಗಳು ತಿಳಿಸಿದೆ.

ಸಕ್ರಿಯ ಪ್ರಕರಣಗಳ ಸಂಖ್ಯೆ 2,35,433 ಆಗಿದ್ದು, ಒಂದೇ ದಿನದಲ್ಲಿ 442 ರೋಗಿಗಳು  ಸಾವನಪ್ಪಿದ್ದಾರೆ. ಒಟ್ಟಾರೆ ಕೊರೊನಾ ವೈರಸ್‌ಗೆ ಬಲಿಯಾದವರ ಸಂಖ್ಯೆ 18,655 ಕ್ಕೆ ತಲುಪಿದೆ.

ಶುಕ್ರವಾರ ಬೆಳಿಗ್ಗೆ 20,903 ಪ್ರಕರಣಗಳ ದಾಖಲೆಯ ನಂತರವೂ, ಭಾರತ ಸತತ ಎರಡನೇ ದಿನ 20,000 ಕ್ಕೂ ಹೆಚ್ಚು ಕೋವಿಡ್ -19 ಪ್ರಕರಣಗಳನ್ನು ವರದಿ ಮಾಡಿದೆ.

ಆರೋಗ್ಯ ಸಚಿವಾಲಯದ ಕೋವಿಡ್ -19 ಡ್ಯಾಶ್‌ಬೋರ್ಡ್ ಪ್ರಕಾರ, ಶುಕ್ರವಾರ ಮತ್ತು ಶನಿವಾರ ಬೆಳಿಗ್ಗೆ 14,335 ರೋಗಿಗಳು ವೈರಲ್ ಕಾಯಿಲೆಯಿಂದ ಗುಣಮುಖರಾಗಿದ್ದರಿಂದ ಚೇತರಿಕೆಯ ಪ್ರಮಾಣವು 60.80% ಕ್ಕೆ ಸುಧಾರಿಸಿದೆ.

ಈವರೆಗೆ ದೇಶಾದ್ಯಂತ 3,94,226 ಜನರನ್ನು ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 2,35,433 ಆಗಿದೆ.

ಭಾರತದ ಅತಿ ಹೆಚ್ಚು ಹಾನಿಗೊಳಗಾದ ರಾಜ್ಯವಾದ ಮಹಾರಾಷ್ಟ್ರದಲ್ಲಿ 1,92,990 ಕೋವಿಡ್ -19 ಪ್ರಕರಣಗಳು ಮತ್ತು ಇದುವರೆಗೆ 8,376 ಸಾವುನೋವುಗಳಿವೆ.

ಉದ್ದೇಶಿತ ಪರೀಕ್ಷೆಯಿಂದಾಗಿ ರಾಜ್ಯವು ಪ್ರಕರಣಗಳ ಹೆಚ್ಚಳಕ್ಕೆ ಸಾಕ್ಷಿಯಾಗಿದೆ ಎಂದು ಸರ್ಕಾರಿ ಹಿರಿಯ ಅಧಿಕಾರಿಗಳು ಮತ್ತು ತಜ್ಞರು ತಿಳಿಸಿದ್ದಾರೆ. ಹಾಗೆಯೇ ಸ್ವತಂತ್ರ  ಪ್ರಕರಣಗಳಲ್ಲಿ ಹೆಚ್ಚಳ ಕಂಡುಬಂದರೂ, ಪ್ರಮಾಣವು ತೀವ್ರವಾಗಿ ಏರುತ್ತಿಲ್ಲ ಎಂದೂ ತಿಳಿಸಿದ್ದಾರೆ.

ದಕ್ಷಿಣದ ರಾಜ್ಯಗಳಲ್ಲಿ  ತಮಿಳುನಾಡು ಈಗ 1,00,000 ಕ್ಕೂ ಹೆಚ್ಚು ಕೋವಿಡ್ -19 ಪ್ರಕರಣಗಳನ್ನು ಹೊಂದಿರುವ ಎರಡನೇ ರಾಜ್ಯವಾಗಿದೆ. ಅಲ್ಲಿ 1,02,721 ಸೋಂಕಿತ ಪ್ರಕರಣಗಳಿದ್ದು, ಸಾವಿನ ಸಂಖ್ಯೆ 1,385 ಕ್ಕೆ ತಲುಪಿದೆ.

ಈವರೆಗೆ 95,40,132 ಮಾದರಿಗಳನ್ನು ಪರೀಕ್ಷಿಸಲಾಗಿದೆ ಮತ್ತು ಅದರಲ್ಲಿ 2,42,383 ಮಾದರಿಗಳನ್ನು ಶುಕ್ರವಾರ ಪರೀಕ್ಷಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಹೇಳಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ, 94,695 ಕೋವಿಡ್ -19 ಪ್ರಕರಣಗಳು ದಾಖಲಾಗಿದೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಚೀನಾದ ವುಹಾನ್ ನಗರದಿಂದ ಮೊದಲ ಬಾರಿಗೆ ವರದಿಯಾದ ನಂತರ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ 11 ಮಿಲಿಯನ್ ಮೀರಿದೆ ಮತ್ತು ಅರ್ಧ ಮಿಲಿಯನ್‌ಗಿಂತಲೂ ಹೆಚ್ಚು ಜನರನ್ನು ಕೊಂದಿದೆ.


ಇದನ್ನೂ ಓದಿ: ಆಂಬುಲೆನ್ಸ್‌ಗಾಗಿ 2 ಗಂಟೆ ಕಾಯುವಿಕೆ: ಮನೆ ಮುಂದೆ ಪ್ರಾಣಬಿಟ್ಟ ಬೆಂಗಳೂರಿನ ಕೊರೊನಾ ಸೋಂಕಿತ!

ಆಗಸ್ಟ್ 15 ರೊಳಗೆ ಕೊರೊನಾ ಲಸಿಕೆ ಬಿಡುಗಡೆ ಮಾಡಲಿರುವ ಐಸಿಎಂಆರ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...