Homeಮುಖಪುಟಖಾತೆ ಹಂಚಿಕೆಯ ಕುರಿತು ಇನ್ನೂ ಸಿಎಂ ಕಚೇರಿಯಲ್ಲಿ ಪತ್ರ ತಯಾರಾಗಿಯೇ ಇಲ್ಲ

ಖಾತೆ ಹಂಚಿಕೆಯ ಕುರಿತು ಇನ್ನೂ ಸಿಎಂ ಕಚೇರಿಯಲ್ಲಿ ಪತ್ರ ತಯಾರಾಗಿಯೇ ಇಲ್ಲ

- Advertisement -
- Advertisement -

ಖಾತೆ ಹಂಚಿಕೆಯ ಕುರಿತು ಇನ್ನೂ ಸಿಎಂ ಕಚೇರಿಯಲ್ಲಿ ಪತ್ರ ತಯಾರಾಗಿಯೇ ಇಲ್ಲ. ಖಾತೆ ಹಂಚಿಕೆಯಾಗಿದೆ ಎಂಬುದು ಸುಳ್ಳು ಎಂದು ಮುಖ್ಯಮಂತ್ರಿಗಳ ಕಚೇರಿಯ ಮೂಲಗಳು ತಿಳಿಸಿವೆ.

ಸದ್ಯ ಒಂದು ಖಾತೆ ಹಂಚಿಕೆಯ ಪಟ್ಟಿಯು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಾಧ್ಯಮಗಳನ್ನು ಸಹ ಅದರ ಆಧಾರದಲ್ಲಿ ಖಾತೆ ಹಂಚಿಕೆಯಾಗಿದೆ ಎಂದು ವರದಿ ಮಾಡಿವೆ. ಆದರೆ ಸಿಎಂ ಕಚೇರಿ ಇನ್ನೂ ಖಾತೆ ಹಂಚಿಕೆಯಾಗಿಲ್ಲ ಎಂದು ಸ್ಪಷ್ಟಪಡಿಸಿದೆ.

ಇಂದು ರಾತ್ರಿ ಅಥವಾ ನಾಳೆ ಬೆಳಿಗ್ಗೆ ಖಾತೆ ಹಂಚಿಕೆ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯನವರು ತಿಳಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್‌ರವರೊಂದಿಗೆ 8 ಶಾಸಕರು ಸಂಪುಟ ದರ್ಜೆಯ ಸಚಿವರಾಗಿ ಕಳೆದ ಶನಿವಾರ ಪ್ರಮಾಣ ವಚನ ಸ್ವೀಕರಿಸಿದ್ದರು. ಇಂದು ಉಳಿದ 24 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅವರ ಪಟ್ಟಿ ಈ ಕೆಳಗಿನಂತಿದೆ.

ಸಿದ್ದರಾಮಯ್ಯ: ಮೈಸೂರು

ಡಿ.ಕೆ ಶಿವಕುಮಾರ್: ರಾಮನಗರ

ಕೆ.ಎಚ್ ಮುನಿಯಪ್ಪ: ಬೆಂಗಳೂರು ಗ್ರಾಮಾಂತರ

ಡಾ.ಜಿ ಪರಮೇಶ್ವರ್: ತುಮಕೂರು

ಸತೀಶ್ ಜಾರಕಿಹೊಳಿ: ಬೆಳಗಾಂ

ಪ್ರಿಯಾಂಕ್ ಖರ್ಗೆ: ಕಲಬುರಗಿ

ರಾಮಲಿಂಗಾರೆಡ್ಡಿ: ಬೆಂಗಳೂರು ನಗರ

ಜಮೀರ್ ಅಹ್ಮದ್ ಖಾನ್: ಬೆಂಗಳೂರು ನಗರ

ಕೆ.ಜೆ ಜಾರ್ಜ್: ಬೆಂಗಳೂರು ನಗರ

ಎಂ.ಬಿ ಪಾಟೀಲ್: ವಿಜಯಪುರ

ಎಚ್.ಕೆ.ಪಾಟೀಲ- ಗದಗ

ಕೃಷ್ಣ ಬೈರೇಗೌಡ- ಬೆಂಗಳೂರು ನಗರ

ಎನ್.ಚಲುವರಾಯಸ್ವಾಮಿ- ಮಂಡ್ಯ

ಕೆ.ವೆಂಕಟೇಶ್‌- ಮೈಸೂರು

ಡಾ.ಎಚ್‌.ಸಿ.ಮಹದೇವಪ್ಪ- ಮೈಸೂರು

ಈಶ್ವರ ಖಂಡ್ರೆ- ಬೀದರ್

ಕೆ.ಎನ್‌.ರಾಜಣ್ಣ- ತುಮಕೂರು

ದಿನೇಶ್‌ ಗುಂಡೂರಾವ್‌- ಬೆಂಗಳೂರು ನಗರ

ಶರಣಬಸಪ್ಪ ದರ್ಶನಾಪುರ- ಯಾದಗಿರಿ

ಶಿವಾನಂದ ಪಾಟೀಲ- ವಿಜಯಪುರ

ಆರ್.ಬಿ.ತಿಮ್ಮಾಪುರ- ಬಾಗಲಕೋಟ

ಎಸ್‌.ಎಸ್‌.ಮಲ್ಲಿಕಾರ್ಜುನ- ದಾವಣಗೆರೆ

ಶಿವರಾಜ ತಂಗಡಗಿ- ಕೊಪ್ಪಳ

ಶರಣ ಪ್ರಕಾಶ ಪಾಟೀಲ- ಕಲಬುರಗಿ

ಮಂಕಾಳ ಸುಬ್ಬ ವೈದ್ಯ- ಉತ್ತರ ಕನ್ನಡ

ಲಕ್ಷ್ಮಿ ಹೆಬ್ಬಾಳ್ಕರ್- ಬೆಳಗಾಂ

ರಹೀಂ ಖಾನ್‌- ಬೀದರ್

ಡಿ.ಸುಧಾಕರ್‌- ಚಿತ್ರದುರ್ಗ

ಸಂತೋಷ್‌ ಎಸ್‌.ಲಾಡ್‌- ಧಾರವಾಡ

ಎನ್‌.ಎಸ್.ಬೋಸರಾಜು- ರಾಯಚೂರು

ಬೈರತಿ ಸುರೇಶ್‌- ಬೆಂಗಳೂರು ನಗರ

ಮಧು ಬಂಗಾರಪ್ಪ- ಶಿವಮೊಗ್ಗ

ಡಾ.ಎಂ.ಸಿ.ಸುಧಾಕರ್‌- ಚಿಕ್ಕಬಳ್ಳಾಪುರ

ಬಿ.ನಾಗೇಂದ್ರ- ಬಳ್ಳಾರಿ

ಇದನ್ನೂ ಓದಿ: ಜಾತಿ ಪ್ರಾತಿನಿಧ್ಯ: ಬೊಮ್ಮಾಯಿ ಸಂಪುಟಕ್ಕಿಂತ ಸಿದ್ದರಾಮಯ್ಯ ಕ್ಯಾಬಿನೆಟ್ ವೈವಿಧ್ಯಮಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಧಾರವಾಡ ಅಖಾಡ: ಕೇಸರಿ ಕೋಟೆಯಲ್ಲೇ ಸಂಘೀ ಸೇನಾಧಿಪತಿ ಪ್ರಹ್ಲಾದ್ ಜೋಶಿಗೆ ನಡುಕ!!

0
ಪೇಡಾ ನಗರಿ, ಸಾಂಸ್ಕೃತಿಕ ರಾಜಧಾನಿ, ಕರ್ನಾಟಕದ ಆಕ್ಸ್‌ಫರ್ಡ್ ಎಂದೆಲ್ಲ ಗುರುತಿಸಲ್ಪಡುವ ಧಾರವಾಡ ನಗರ ಕೇಂದ್ರವಾಗಿರುವ ಧಾರವಾಡ ಲೋಕಸಭಾ ಕ್ಷೇತ್ರ ಮಲೆನಾಡು, ಅರೆಮಲೆನಾಡು ಮತ್ತು ಬಯಲುನಾಡುಗಳ ವಿಭಿನ್ನ ನೈಸರ್ಗಿಕ ಗುಣ-ಧರ್ಮದ ಸೀಮೆ. ಖಡಕ್ ಜವಾರಿ...