Homeಮುಖಪುಟಸಹಿಷ್ಣುತೆ ಎಂದರೆ ದ್ವೇಷದ ಮಾತುಗಳನ್ನೂ ಒಪ್ಪಬೇಕೆಂದಲ್ಲ: ಜಸ್ಟೀಸ್ ಚಂದ್ರಚೂಡ್‌

ಸಹಿಷ್ಣುತೆ ಎಂದರೆ ದ್ವೇಷದ ಮಾತುಗಳನ್ನೂ ಒಪ್ಪಬೇಕೆಂದಲ್ಲ: ಜಸ್ಟೀಸ್ ಚಂದ್ರಚೂಡ್‌

- Advertisement -
- Advertisement -

ಇತರರ ಅಭಿಪ್ರಾಯಗಳನ್ನು ಒಪ್ಪಿಕೊಳ್ಳುವುದು ಮತ್ತು ಸಹಿಸಿಕೊಳ್ಳುವುದು ಎಂದರೆ ದ್ವೇಷದ ಮಾತುಗಳನ್ನು ಸಹ ಒಪ್ಪಿಕೊಳ್ಳಬೇಕು ಎಂದಲ್ಲ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹೇಳಿದ್ದಾರೆ.

ಗುಜರಾತ್ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾನಿಲಯದಲ್ಲಿ (ಜಿಎನ್‌ಎಲ್‌ಯು) ಅವರು ಮಾಡಿದ ಘಟಿಕೋತ್ಸವ ಭಾಷಣದಲ್ಲಿ, ಪದವೀಧರ ವಿದ್ಯಾರ್ಥಿಗಳು ತಮ್ಮ ಸ್ವಂತ ಮಾರ್ಗದರ್ಶನ ಹಾಗೂ ಸಮಾನತೆಯ ಆಶಯದಲ್ಲಿ ಮುನ್ನಡೆಯಬೇಕು ಎಂದಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ನೀವು ಹೇಳುವುದನ್ನು ನಾನು ಒಪ್ಪುದಿರಬಹುದು, ಆದರೆ ನಿಮ್ಮ ಅಭಿವ್ಯಕ್ತಿಯನ್ನು ರಕ್ಷಿಸುತ್ತೇನೆ” ಎಂದ ವಾಲ್ಟೈರ್‌ನ ಮಾತನ್ನು ನಾವು ಅಳವಡಿಸಿಕೊಳ್ಳಬೇಕು. ತಪ್ಪುಗಳನ್ನು ಮಾಡುವುದು, ಇತರರ ಅಭಿಪ್ರಾಯಗಳನ್ನು ಒಪ್ಪಿಕೊಳ್ಳುವುದು, ಸಹಿಸಿಕೊಳ್ಳುವುದು ಎಂದರೆ ಕರುಡಾಗಿ ಅನುಸರಿಸುವುದೂ ಅಲ್ಲ. ದ್ವೇಷ ಭಾಷಣದ ಪರ ಇರುತ್ತೇವೆ ಎಂದರ್ಥವಲ್ಲ” ಎಂದು ವಿವರಿಸಿದ್ದಾರೆ.

“ಬಹುಮತದ ರಾಜಕೀಯ, ಸಾಮಾಜಿಕ, ನೈತಿಕ ಘರ್ಷಣೆಗಳ ಹೆಚ್ಚುತ್ತಿರುವ ಗದ್ದಲ ಮತ್ತು ಗೊಂದಲದ ನಡುವೆ ವಿದ್ಯಾರ್ಥಿಗಳು ಹೊರ ಜಗತ್ತಿಗೆ ಕಾಲಿಡುತ್ತಿದ್ದೀರಿ. ನೀವು ತಮ್ಮ ಸ್ವಂತ ಆತ್ಮಸಾಕ್ಷಿ ಮತ್ತು ಸಮಾನತೆ ಆಶಯಗಳ ಮಾರ್ಗದಿಂದ ಮುನ್ನಡೆಯಬೇಕು’’ ಎಂದು ಆಶಿಸಿದ್ದಾರೆ.

ಹಲವು ತೀರ್ಪುಗಳ ಮೂಲಕ ಗಮನ ಸೆಳೆದಿರುವ ಜಸ್ಟೀಸ್ ಚಂದ್ರಚೂಡ್ ಅವರು ಇತ್ತೀಚೆಗೆ ಲಂಡನ್‌ನಲ್ಲಿ ಮಾತನಾಡುತ್ತಾ, ಅನೇಕ ಕಟುವಾದ ಪ್ರಶ್ನೆಗಳನ್ನು ಎದುರಿಸಿದ್ದರು.

ಲಂಡನ್‌ನ ಕಿಂಗ್ಸ್ ಕಾಲೇಜ್‌ನಲ್ಲಿ ನಡೆದ ‘ಮಾನವ ಹಕ್ಕುಗಳ ರಕ್ಷಣೆ, ನಾಗರಿಕ ಸ್ವಾತಂತ್ರ್ಯದ ರಕ್ಷಣೆ: ಪ್ರಜಾಪ್ರಭುತ್ವದಲ್ಲಿ ನ್ಯಾಯಾಲಯಗಳ ಪಾತ್ರ’ ಕುರಿತ ವಿಚಾರಸಂಕಿರಣದಲ್ಲಿ ಹಲವು ಪ್ರಶ್ನೆಗಳನ್ನು ಚಂದ್ರಚೂಡ್ ಅವರಿಗೆ ಕೇಳಲಾಗಿತ್ತು.

ಬುಲ್ಡೋಜರ್‌ಗಳ ಮೂಲಕ ಮುಸ್ಲಿಮರ ಮನೆಗಳ ಧ್ವಂಸ, ಹಿಜಾಬ್ ವಿವಾದ, ಬಾಬರಿ ಮಸೀದಿ ತೀರ್ಪುಗಳಿಗೆ ಸಂಬಂಧಿಸಿದಂತೆ ಭಾರತದ ಸುಪ್ರೀಂ ಕೋರ್ಟ್‌ ಮುಸ್ಲಿಂ ಅಲ್ಪಸಂಖ್ಯಾತರಿಗೆ ನೀಡಿರುವ ನ್ಯಾಯದ ಕುರಿತು ಪ್ರಶ್ನಿಸಲಾಗಿತ್ತು.

ನ್ಯಾಯಮೂರ್ತಿ ಚಂದ್ರಚೂಡ್‌ ಮಾತನಾಡಿ, “ಬಹುತೇಕ ಪ್ರಕರಣಗಳು ಪ್ರಸ್ತುತ ನ್ಯಾಯಾಲಯದಲ್ಲಿವೆ. ಅವುಗಳ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡಲು ಸಾಧ್ಯವಾಗುವುದಿಲ್ಲ. ನ್ಯಾಯಾಧೀಶರಾದ ಬಳಿಕ ಕೆಲವು ನಿರ್ಬಂಧಗಳಿವೆ” ಎಂದು ತಿಳಿಸಿದ್ದರು.

ಇದನ್ನೂ ಓದಿರಿ: ಒಬ್ಬ ಪತ್ರಕರ್ತನಿಗೆ ಬರೆಯಬಾರದು ಎಂದು ಹೇಳಲು ಸಾಧ್ಯವಿಲ್ಲ: ಜುಬೇರ್‌ಗೆ ಜಾಮೀನು ನೀಡುವಾಗ ಜಸ್ಟೀಸ್ ಚಂದ್ರಚೂಡ್ ಹೇಳಿಕೆ

ಬಾಬರಿ ಮಸೀದಿ ಪ್ರಕರಣದಲ್ಲಿ ರಾಮ ಜನ್ಮಭೂಮಿ ಪರವಾಗಿ ತೀರ್ಪು ಹೊರಬಿದ್ದಿತು. “ತೀರ್ಪು ನೀಡಿದ ಪೀಠದ ಭಾಗವಾಗಿರುವುದರಿಂದ ಪ್ರತಿಕ್ರಿಯಿಸಲು ಸಾಧ್ಯವಿಲ್ಲ” ಎಂದು ಸ್ಪಷ್ಟಪಡಿಸಿದ್ದರು.

ಮುಸ್ಲಿಮರು ಅಥವಾ ಇತರ ಅಲ್ಪಸಂಖ್ಯಾತರ ವಿರುದ್ಧದ ತಾರತಮ್ಯದ ಪ್ರಕರಣಗಳನ್ನು ನ್ಯಾಯಾಲಯಗಳು ವ್ಯವಹರಿಸುವುದಿಲ್ಲ ಎಂಬ ಅನಿಸಿಕೆಗಳಿವೆ ಎಂದ ಅವರು, “ಧ್ವಂಸ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಗಮನ ಹರಿಸಿದ್ದು, ಈ ವಿಷಯದ ಬಗ್ಗೆ ನೋಟಿಸ್ ನೀಡಿದೆ” ಎಂದು ಪ್ರತಿಕ್ರಿಯಿಸಿದ್ದರು.

ಸುಪ್ರೀಂ ಕೋರ್ಟ್ ಸಾಮಾನ್ಯವಾಗಿ ರಕ್ಷಣೆಯ ಮೊದಲ ಅಸ್ತ್ರವಾಗಿದೆ. ಧಾರ್ಮಿಕ ಸ್ವಾತಂತ್ರ್ಯದ ವಿಷಯಗಳಲ್ಲಿ ನ್ಯಾಯಾಲಯವು ಧಾರ್ಮಿಕ ಪಂಥಗಳು ಮತ್ತು ನ್ಯಾಯಶಾಸ್ತ್ರದ ಪ್ರತಿಪಾದನೆಗಳನ್ನು ಎತ್ತಿಹಿಡಿದಿದೆ. ಶಿಕ್ಷಣ ಕೇಂದ್ರಗಳನ್ನು ಸ್ಥಾಪಿಸುವ ಅಲ್ಪಸಂಖ್ಯಾತರ ಹಕ್ಕನ್ನು ನಾವು ಎತ್ತಿ ಹಿಡಿದಿದ್ದೇವೆ ಎಂದು ಹೇಳಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಪ್ರತಿಭಟನೆ ಪರಿಣಾಮ: ಗೋವು ನಿಯಂತ್ರಣ ಮಸೂದೆಯನ್ನು ಹಿಂಪಡೆದ ಗುಜರಾತ್ ಸರ್ಕಾರ | Naanu Gauri

ಪ್ರತಿಭಟನೆ ಪರಿಣಾಮ: ಗೋವು ನಿಯಂತ್ರಣ ಮಸೂದೆಯನ್ನು ಹಿಂಪಡೆದ ಗುಜರಾತ್ ಸರ್ಕಾರ

0
ಗುಜರಾತ್‌ನಾದ್ಯಂತ ನಡೆದ ಹೈನುಗಾರಿಕೆ ನಡೆಸುವ ಸಮುದಾಯದ ಪ್ರತಿಭಟನೆಯ ನಂತರ ರಾಜ್ಯ ವಿಧಾನಸಭೆಯು ಗೋವು ನಿಯಂತ್ರಣ ಮಸೂದೆಯನ್ನು ಸರ್ವಾನುಮತದಿಂದ ಹಿಂಪಡೆದಿದೆ. ಸುಮಾರು ಐದು ತಿಂಗಳ ಹಿಂದೆ ರಾಜ್ಯದ ನಗರ ಪ್ರದೇಶಗಳ ರಸ್ತೆಗಳು ಮತ್ತು ಸಾರ್ವಜನಿಕ...