Homeದಲಿತ್ ಫೈಲ್ಸ್ಯುಪಿ: ದಲಿತ ಯುವಕನನ್ನು ಶೂಗಳಿಂದ ಥಳಿಸಿದ ಗ್ರಾಮದ ಮುಖ್ಯಸ್ಥ

ಯುಪಿ: ದಲಿತ ಯುವಕನನ್ನು ಶೂಗಳಿಂದ ಥಳಿಸಿದ ಗ್ರಾಮದ ಮುಖ್ಯಸ್ಥ

- Advertisement -
- Advertisement -

ಗ್ರಾಮದ ಮುಖ್ಯಸ್ಥ ಗ್ರಾಮದ ಮಾಜಿ ಮುಖ್ಯಸ್ಥನೊಂದಿಗೆ ಸೇರಿ ದಲಿತ ಸಮುದಾಯದ ಯುವಕನಿಗೆ ಶೂಗಳಿಂದ ಥಳಿಸಿ, ಕೊಲೆ ಬೆದರಿಕೆ ಹಾಕಿರುವ ಘಟನೆ ಉತ್ತರ ಪ್ರದೇಶದ ಮುಜಾಫರ್‌ ನಗರದಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮ ಗಳಲ್ಲಿ ವೈರಲ್ ಆದ ನಂತರ ಮುಜಾಫರ್‌ನಗರದಲ್ಲಿ ಹಲ್ಲೆ ನಡೆಸಿದ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಆಗಸ್ಟ್ 20 ರಂದು ತಿಳಿಸಿದ್ದಾರೆ.

“27 ವರ್ಷದ ದಿನೇಶ್ ಕುಮಾರ್ ಅವರನ್ನು ತಾಜ್‌ಪುರದ ಗ್ರಾಮದ ಮುಖ್ಯಸ್ಥ ಶಕ್ತಿ ಮೋಹನ್ ಗುರ್ಜಾರ್ ಮತ್ತು ರೆಟಾ ನಾಗ್ಲಾ ಗ್ರಾಮದ ಮಾಜಿ ಗ್ರಾಮ ಮುಖ್ಯಸ್ಥ ಗಜೆ ಸಿಂಗ್ ಶೂಗಳಿಂದ ಹೊಡೆದಿದ್ದು, ಕೊಲೆ ಬೆದರಿಕೆಯನ್ನೂ ಹಾಕಿದ್ದಾರೆ” ಎಂದು ಪೊಲೀಸರು ತಿಳಿಸಿದ್ದಾರೆ ಎಂದು ದಿ ವೈರ್‌ ವರದಿ ಮಾಡಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಇಬ್ಬರ ಮೇಲೂ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ನಗರ) ಅರ್ಪಿತ್ ವಿಜಯವರ್ಗಿಯಾ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಗ್ರಾಮದ ಮುಖಂಡ ಶಕ್ತಿ ಮೋಹನ್‌ನನ್ನು ಪೊಲೀಸರು ಬಂಧಿಸಿದ್ದು, ಎರಡನೇ ಆರೋಪಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಮೊದಲ ಬೆಂಚ್‌ನಲ್ಲಿ ಕುಳಿತ ಕಾರಣ ದಲಿತ ಬಾಲಕಿಗೆ ಶಿಕ್ಷಕಿಯಿಂದ ಥಳಿತ; ಎಫ್‌ಐಆರ್‌

ದಲಿತ ಸಮುದಾಯದ ಸದಸ್ಯರೊಂದಿಗೆ ಭೀಮ್ ಆರ್ಮಿ ಕಾರ್ಯಕರ್ತರು ಘಟನೆಯ ವಿರುದ್ಧ ಛಾಪರ್ ಪೊಲೀಸ್ ಠಾಣೆಯ ಹೊರಗೆ ಧರಣಿ ನಡೆಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದರು. ಈ ಪ್ರದೇಶದಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.

ಉತ್ತರ ಪ್ರದೇಶದ ಸಹರಾನ್‌ಪುರ ವಿಭಾಗದ ಅಡಿಯಲ್ಲಿ ಬರುವ ಮುಜಾಫರ್‌ ನಗರವು ಸಾಕಷ್ಟು ದಲಿತ ಜನಸಂಖ್ಯೆಯನ್ನು ಹೊಂದಿದೆ. ಆದರೂ ಇಲ್ಲಿ ಜಾತಿ ಸಂಬಂಧಿತ ಘಟನೆಗಳು ಏರಿಕೆಯಾಗುತ್ತಲೆ ಇದೆ.

ಇದನ್ನೂ ಓದಿ: ಸಕಲೇಶಪುರ: ದನ ಸಾಗಿಸುತ್ತಿದ್ದಾನೆಂದು ದಲಿತ ಮುಖಂಡನ ಮೇಲೆ ಬಜರಂಗದಳದ ದುಷ್ಕರ್ಮಿಗಳಿಂದ ಹಲ್ಲೆ

ಈ ತಿಂಗಳ ಆರಂಭದಲ್ಲಿ, ಮುಜಾಫರ್‌ ನಗರದಲ್ಲಿ 30 ವರ್ಷದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಲಾಗಿದ್ದು, ಬಂದೂಕು ಗುರಿಯಿಟ್ಟು ಅವರ ಬಟ್ಟೆಗಳನ್ನು ಬಿಚ್ಚುವಂತೆ ಒತ್ತಾಯಿಸಲಾಗಿತ್ತು. ಈ ಕೃತ್ಯವು ಕ್ಯಾಮೆರಾದಲ್ಲಿ ದಾಖಲಾಗಿದೆ ಎಂದು ಪೊಲೀಸರನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.

ಸಂತ್ರಸ್ತೆ ನೀಡಿದ ಪೊಲೀಸ್‌ ದೂರಿನ ಪ್ರಕಾರ, ಮಹಿಳೆ ಹುಲ್ಲಿಗಾಗಿ ಹೊಲಕ್ಕೆ ಹೋಗಿದ್ದರು. ಅಲ್ಲಿ ಆರೋಪಿಗಳು ತನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದು, ಬಂದೂಕು ತೋರಿಸಿ ತನ್ನ ಬಟ್ಟೆಗಳನ್ನು ತೆಗೆಯುವಂತೆ ಒತ್ತಾಯಿಸಿ ನಂತರ ವೀಡಿಯೊ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಎಲ್ಲಾ ಏಳು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಧಾರವಾಡ ಅಖಾಡ: ಕೇಸರಿ ಕೋಟೆಯಲ್ಲೇ ಸಂಘೀ ಸೇನಾಧಿಪತಿ ಪ್ರಹ್ಲಾದ್ ಜೋಶಿಗೆ ನಡುಕ!!

0
ಪೇಡಾ ನಗರಿ, ಸಾಂಸ್ಕೃತಿಕ ರಾಜಧಾನಿ, ಕರ್ನಾಟಕದ ಆಕ್ಸ್‌ಫರ್ಡ್ ಎಂದೆಲ್ಲ ಗುರುತಿಸಲ್ಪಡುವ ಧಾರವಾಡ ನಗರ ಕೇಂದ್ರವಾಗಿರುವ ಧಾರವಾಡ ಲೋಕಸಭಾ ಕ್ಷೇತ್ರ ಮಲೆನಾಡು, ಅರೆಮಲೆನಾಡು ಮತ್ತು ಬಯಲುನಾಡುಗಳ ವಿಭಿನ್ನ ನೈಸರ್ಗಿಕ ಗುಣ-ಧರ್ಮದ ಸೀಮೆ. ಖಡಕ್ ಜವಾರಿ...