Homeಮುಖಪುಟಸಿಎಸ್‌ಕೆ ಬ್ಯಾಟಿಂಗ್ ಕ್ರಮಾಂಕ ಬದಲಿಸಿ ರಾಬಿನ್‌ಗೆ ವಂಚನೆ: ಜಾಲತಾಣದಲ್ಲಿ ಚರ್ಚೆ

ಸಿಎಸ್‌ಕೆ ಬ್ಯಾಟಿಂಗ್ ಕ್ರಮಾಂಕ ಬದಲಿಸಿ ರಾಬಿನ್‌ಗೆ ವಂಚನೆ: ಜಾಲತಾಣದಲ್ಲಿ ಚರ್ಚೆ

ಆರಂಭಿಕ ಆಟಗಾರರಾಗಿ ಕ್ರಿಸ್‌ಗೆ ಬರುತ್ತಿದ್ದ ರಾಬಿನ್‌ ಉತ್ತಪ್ಪ ಉತ್ತಮ ಪ್ರದರ್ಶನವನ್ನೂ ನೀಡಿದ್ದಾರೆ. ಕ್ರಮಾಂಕ ಬದಲಾದಾಗ ವಿಫಲರಾಗಿದ್ದಾರೆ

- Advertisement -
- Advertisement -

ಈ ಬಾರಿಯ ಐಪಿಎಲ್‌ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ನೀಡುತ್ತಿರುವ ಚೆನ್ನೈ ಸೂಪರ್‌ ಕಿಂಗ್ಸ್‌ (ಸಿಎಸ್‌ಕೆ) ತಂಡಕ್ಕೆ ಆರಂಭದಲ್ಲಿ ರವೀಂದ್ರ ಜಡೇಜಾ ನಾಯಕರಾಗಿದ್ದರು. ಜಡೇಜಾ ನಾಯಕತ್ವ ತೊರೆದ ಬಳಿಕ ಮತ್ತೆ ಸಿಎಸ್‌ಕೆಗೆ ಮಹೇಂದ್ರ ಸಿಂಗ್‌ ಧೋನಿ ನಾಯಕತ್ವ ವಹಿಸಿದರು. ನಂತರದಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಸಿಎಸ್‌ಕೆ ಎರಡು ಪಂದ್ಯಗಳಲ್ಲಿ ಗೆದ್ದಿದೆ. ಆದರೆ ನಾಯಕ ಧೋನಿ ಧೋರಣೆ ಕುರಿತು ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ.

ಜಡೇಜಾ ನಾಯಕತ್ವದಲ್ಲಿ ತಂಡ ಮುನ್ನಡೆಯುತ್ತಿದ್ದಾಗ ಆರಂಭಿಕ ಆಟಗಾರರಾಗಿ ಅಥವಾ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದು ಮಿಂಚುತ್ತಿದ್ದ, ಕೆಲವು ಪಂದ್ಯಗಳ ಗೆಲುವಿಗೂ ಕಾರಣರಾಗಿದ್ದ ಕೊಡಗಿನ ರಾಬಿನ್‌ ಉತ್ತಪ್ಪ ಅವರ ಬ್ಯಾಟಿಂಗ್ ಕ್ರಮಾಂಕ ಬದಲಾಯಿಸಿರುವುದು ಕೆಲವರ ಆಕ್ರೋಶಕ್ಕೆ ಕಾರಣವಾಗಿದೆ. ಕೆಳ ಕ್ರಮಾಂಕದಲ್ಲಿ ರಾಬಿ‌ನ್ ಅವರನ್ನು ಬ್ಯಾಟಿಂಗ್‌ಗೆ ಇಳಿಸುತ್ತಿರುವ ನಾಯಕ ಧೋನಿ, ‘ಕ್ರಿಕೆಟ್ ರಾಜಕಾರಣ’ ಮಾಡುತ್ತಿದ್ದಾರೆಂಬ ಆರೋಪ ಕೇಳಿಬಂದಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಈ ಬಾರಿಯ ಐಪಿಎಲ್‌ನಲ್ಲಿ ಕೆಕೆಆರ್‌ ವಿರುದ್ಧ ಮಾರ್ಚ್ 26ರಂದು ಮೊದಲ ಪಂದ್ಯವನ್ನಾಡಿದ್ದ ಸಿಎಸ್‌ಕೆ ಕಡಿಮೆ ಮೊತ್ತವನ್ನು ಗಳಿಸಿತ್ತು. ಧೋನಿ ಅರ್ಧ ಶತಕ (50*/38) ಸಿಡಿಸಿದ್ದರು. 21 ಬಾಲ್‌ಗಳಲ್ಲಿ 28 ರನ್‌ ಗಳಿಸುವ ಮೂಲಕ ರಾಬಿನ್‌ ಉತ್ತಪ್ಪ ಅತಿ ಹೆಚ್ಚು ರನ್‌ ಗಳಿಸಿದ ಎರಡನೇ ಆಟಗಾರರಾಗಿದ್ದರು.

ಮಾರ್ಚ್‌ 31ರಂದು ಎಲ್‌ಎಸ್‌ಜಿ ವಿರುದ್ಧ ನಡೆದ ಪಂದ್ಯದಲ್ಲಿ 27 ಬಾಲ್‌ಗಳಲ್ಲಿ 50 ರನ್‌ ಸಿಡಿಸಿದ್ದ ರಾಬಿ‌ನ್‌ ಉತ್ತಪ್ಪ ಸಿಎಸ್‌ಕೆ ಅತ್ಯುತ್ತಮ ಮೊತ್ತ ಗಳಿಸಲು ಕಾರಣವಾಗಿದ್ದರು. ಸಿಎಸ್‌ಕೆ ಪರ ಈ ಪಂದ್ಯದಲ್ಲಿ ಅತಿಹೆಚ್ಚು ರನ್‌ ಸಿಡಿಸಿದ ಆಟಗಾರರಾಗಿಯೂ ಹೊಮ್ಮಿದ್ದರು.

ಇದನ್ನೂ ಓದಿರಿ: ಐಪಿಎಲ್‌: ಪಂಜಾಬ್‌ ವಿರುದ್ಧದ ಪಂದ್ಯದಲ್ಲಿ ಕ್ರೀಡಾಸ್ಫೂರ್ತಿ ಮೆರೆದ ಕ್ವಿಂಟನ್ ಡಿಕಾಕ್‌

ಏಪ್ರಿಲ್‌ 12ರಂದು ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಸಿಎಸ್‌ಕೆ ಪರ ಶಿವ ದುಬೆ 46 ಬಾಲ್‌ಗಳಲ್ಲಿ 95 ರನ್‌ ಸಿಡಿಸಿ ಅಜೇಯರಾಗಿ ಉಳಿದರೆ, ರಾಬಿನ್ ಉತ್ತಪ್ಪ 50 ಬಾಲ್‌ಗಳಲ್ಲಿ 88 ರನ್‌ ಗಳಿಸಿ ಪಂದ್ಯದ ಗೆಲುವಿನಲ್ಲೂ ಮುಖ್ಯಪಾತ್ರ ವಹಿಸಿದ್ದರು.

ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಆಂಬಟಿ ರಾಯುಡು (40/35) ಬಿಟ್ಟರೆ ಅತಿ ಹೆಚ್ಚು ರನ್‌ ಗಳಿಸಿದ್ದು ರಾಬಿನ್ ಉತ್ತಪ್ಪ (30/25). ಇತರ ಆಟಗಾರರಂತೆಯೇ ರಾಬಿನ್‌ ಕೆಲವು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿರುವುದು ನಿಜ. ಆದರೆ ಧೋನಿ ನಾಯಕತ್ವ ವಹಿಸಿಕೊಂಡ ಬಳಿಕ ರಾಬಿನ್ ಉತ್ತಪ್ಪರನ್ನು ಕೆಳಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಕಳುಹಿಸಿದ್ದಾರೆ. ಆಡಿರುವ ಮೂರು ಪಂದ್ಯಗಳಲ್ಲೂ ಇದು ನಿಚ್ಚಳವಾಗಿ ಕಾಣುತ್ತಿದೆ ಎಂಬ ಆರೋಪಗಳು ಬಂದಿವೆ.

ಧೋನಿ ನಾಯಕತ್ವ ವಹಿಸಿಕೊಂಡ ಬಳಿಕ ನಡೆದ ಮೊದಲ ಪಂದ್ಯದಲ್ಲಿ ಎಸ್‌ಆರ್‌ಎಚ್‌ ವಿರುದ್ಧ ಸಿಎಸ್‌ಕೆ ಗೆಲವು ಗಳಿಸಿತ್ತು. ಋತುರಾಜ್‌ ಗಾಯಕ್ವಾಡ್‌, ದೇವನ್‌ ಕಾನ್ವೆ ಉತ್ತಮ ಆರಂಭ ನೀಡಿದರು. 99 ರನ್‌ ಗಳಿಸಿ ಋತುರಾಜ್‌ ಔಟ್ ಆದ ಬಳಿಕ ಧೋನಿ ಕ್ರೀಸ್‌ಗೆ ಬಂದರು. 7 ಬಾಲ್‌ ಆಡಿ 8 ರನ್‌ ಗಳಿಸಿದರು. ಇನ್ನಿಂಗ್ಸ್‌ ಮುಗಿಯುವ ಹಂತದಲ್ಲಿದ್ದಾಗ ಧೋನಿ ಔಟ್ ಆದರು. ಆದರೆ ನಂತರದಲ್ಲಿ ಕ್ರೀಸ್‌ಗೆ ಬಂದಿದ್ದು ರವೀಂದ್ರ ಜಡೇಜಾ. ಈ ಭಾರಿಯ ಐಪಿಎಲ್‌ನಲ್ಲಿ ಜಡೇಜಾ ಉತ್ತಮ ಪ್ರದರ್ಶನವನ್ನೇನೂ ನೀಡಿಲ್ಲ ಎಂಬುದು ಗಮನಾರ್ಹ.

ಇದನ್ನೂ ಓದಿರಿ: IPL2022: ಸಿಎಸ್‌ಕೆ ನಾಯಕತ್ವ ತ್ಯಜಿಸಿದ ಜಡೇಜಾ – ಫಾಫ್ ಡು ಪ್ಲೆಸಿಸ್ ಕೂಡ ಅದೇ ಹಾದಿ ಹಿಡಿಯುವರೆ?

ಆರ್‌ಸಿಬಿ ವಿರುದ್ಧದ ಎರಡನೇ ಪಂದ್ಯದಲ್ಲಿ ರಾಬಿ‌ನ್‌  ಮೂರನೇ ಕ್ರಮಾಂಕದಲ್ಲಿ ಬಂದರೂ ಮೂರು ಬಾಲ್‌ಗಳಲ್ಲಿ ಒಂದು ರನ್‌ ಗಳಿಸಿ ಔಟ್‌ ಆದರು. ಆದರೆ ನಂತರದ ಪಂದ್ಯದಲ್ಲಿ ಏಳನೇ ಕ್ರಮಾಂಕದಲ್ಲಿ ರಾಬಿನ್‌ ಅವರಿಗೆ ಬ್ಯಾಟಿಂಗ್ ನೀಡಲಾಗಿದೆ. ಡೆಲ್ಲಿ ಕ್ಯಾಪಿಟಲ್‌ ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿ ಸಿಎಸ್‌ಕೆ ಗೆದ್ದಿದೆ. ದೇವನ್ ಕಾನ್ವೆ, ಶಿವಂ ದೂಬೆ, ಋತುರಾಜ್‌ ಉತ್ತಮ ರನ್‌ ಗಳಿಸಿದ್ದರು. ಆದರೆ ಮೊಯಿನ್ ಅಲಿ ಬಳಿಕ ರಾಬಿನ್‌ ಅವರನ್ನು ಕ್ರೀಸ್‌ಗಿಳಿಸಲಾಗಿತ್ತು. ಇನ್ನಿಂಗ್ಸ್‌ ಅಂತ್ಯದಲ್ಲಿ ಆಡಲು ಬಂದ ರಾಬಿನ್‌ ಉತ್ತಪ್ಪ ಕೇವಲ 1 ಬಾಲ್‌ ಆಡಿ ಡಕ್‌ಔಟ್‌ ಆದರು.

ಉತ್ತಪ್ಪ ಅವರನ್ನು ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿರುವ ಲೇಖಕ ಅಲ್ಮೇಡಾ ಗ್ಲಾಡ್‌ಸನ್‌, “ಈತ ಭಾರತದ ಕ್ಯಾಪ್ಟನ್ ಆಗಿದ್ದಾಗಲೂ ಓಪನರ್ ಆಗಿರುವ ರಾಬಿನ್ ಉತ್ತಪ್ಪರನ್ನು ಆರನೇ, ಏಳನೇ ಕ್ರಮಾಂಕದಲ್ಲಾಡಿಸಿ ಆತನ ಕರಿಯರನ್ನೇ ಹಾಳು ಮಾಡಿದ್ದ. ಇದೀಗ ಸಿಎಸ್ಕೆಯಲ್ಲೂ ಅದೇ ಮಾಡುತ್ತಿದ್ದಾನೆ. ಜಡೇಜಾ ಕ್ಯಾಪ್ಟನ್ ಆಗಿರುವತನಕ ಓಪನರ್ ಆಗಿ ಚೆನ್ನಾಗಿಯೇ ಪರ್ಫಾಮ್ ಮಾಡಿದ್ದ ರಾಬಿನ್ಗೆ ಈತ ಕ್ಯಾಪ್ಟನ್ ಆಗುತ್ತಲೇ ಬ್ಯಾಟಿಂಗೇ ಸಿಗುತ್ತಿಲ್ಲ. ಮತ್ತದೇ ನಾಟಕ, ಆರು, ಏಳನೇ ಕ್ರಮಾಂಕ. ಇವರು ಕಳೆದ ಹದಿನೈದು ವರುಷಗಳಲ್ಲಿ ಒಬ್ಬನೇ ಒಬ್ಬ ವಿಕೆಟ್-ಕೀಪರ್‌ನ ಕರಿಯರ್ ಸೆಟ್ ಆಗಲು ಬಿಡಲಿಲ್ಲ. ರಾಬಿನ್, ಪಾರ್ಥೀವ್, ಕಾರ್ತಿಕ್ ಎಲ್ಲರ ಅಂತಾರಾಷ್ಟ್ರೀಯ ಕರಿಯರ್ ಬ್ಲಾಕ್ ಮಾಡ್ಬಿಟ್ಟ. Without doubt, he is by far the greatest politician to have ever played cricket” ಎಂದು ಆರೋಪಿಸಿದ್ದಾರೆ.

“ಉತ್ತಪ್ಪ ಅವರ ಸ್ಥಾನವನ್ನು ವಿದೇಶಿ ಆಟಗಾರನಿಗೆ ಬಿಟ್ಟುಕೊಟ್ಟಿದ್ದು ಏಕೋ ಸರಿ ಕಾಣಲಿಲ್ಲ. ನಮ್ಮಲ್ಲೆ ಪ್ರತಿಭೆಗಳಿರುವಾಗ ಹೊರಗಿನ ಪ್ರತಿಭೆಗಳಿಗೆ ಮಣೆ ಹಾಕುವುದು ಎಷ್ಟು ಸರಿ?” ಎಂದು ಹಕೀಂ ತೀರ್ಥಹಳ್ಳಿ ಪ್ರಶ್ನಿಸಿದ್ದಾರೆ.

ಇದನ್ನೂ ಓದಿರಿ: IPL2022: ಸತತ ಮುಗ್ಗರಿಸುತ್ತಿರುವ ದಿಗ್ಗಜ ತಂಡಗಳು – ಗೆಲುವಿನ ಅಲೆಯಲ್ಲಿ ಹೊಸ ತಂಡಗಳು

“ರಾಬಿನ್ ಉತ್ತಪ್ಪ ಟಿಟ್ವೆಂಟಿ ಫಾರ್ಮಾಟಿಗೆ ಅತ್ಯುತ್ತಮ ಆರಂಭಿಕ ಆಟಗಾರ. ಕೊಟ್ಟ ಅವಕಾಶ ಕಡಿಮೆ; ಆಯ್ಕೆ ಮಾಡಿದರೂ, ಆತನನ್ನು ಸರಿಯಾಗಿ‌ ಬಳಸಿಕೊಳ್ಳಲಿಲ್ಲ. ರಾಬಿನ್ ತರಹ ಕೆಲವು ಉತ್ತಮ ಆಟಗಾರರಿಗೂ ತಮ್ಮ ಪ್ರತಿಭೆಯನ್ನು ಸಂಪೂರ್ಣವಾಗಿ ಬಳಸಲು ಸಾಕಷ್ಟು ಅವಕಾಶಗಳು ದೊರೆಯಲಿಲ್ಲ. ಇದಕ್ಕೆ ಧೋನಿ ಹೊಣೆಯೋ ಅಥವಾ ಬಿಸಿಸಿಐ ಮ್ಯಾನೇಜ್ಮೆಂಟ್ ಅವರ ತೀರ್ಮಾನವೋ ತಿಳಿಯದು. ಬಿಸಿಸಿಐ ಎಂಬ ವ್ಯಾಪಾರೀಕರಣದ ಸಂಸ್ಥೆಯ ಪಾರದರ್ಶಕತೆಯ ಕುರಿತು ಸಾಕಷ್ಟು ಅನುಮಾನಗಳಿವೆ” ಎಂದು ಪವನ್‌ ಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.

“ಧೋನಿಯ ಬಗ್ಗೆ ಹಾಗೇ ಹೇಳುವುದನ್ನು ನಾನು ಒಪ್ಪಲಾರೆ, ಒಬ್ಬ ಅತ್ಯುತ್ತಮ ಕ್ರಿಕೆಟರ್ ನಾಯಕನ ಸ್ಥಾನ ಹೊತ್ತು ತನ್ನ ಟಾಪ್ ಆರ್ಡರ್ ಬ್ಯಾಟಿಂಗ್ ಅನ್ನೇ ಫಿನಿಷರ್ ಮಾಡಿಕೊಳ್ಳಲಿಲ್ಲವೇ? ತಂಡದ ಅಗತ್ಯಕ್ಕೆ ತಕ್ಕ ಹಾಗೆ ಆಡಿಸುವವರು ಸ್ವಾರ್ಥದ ಲೇಪ ಹಚ್ಚುವುದು ನಾನು ಒಪ್ಪಲಾರೆ” ಎಂದು ಆದರ್ಶ‌ ಎಂಬವರು ಅಭಿಪ್ರಾಯಪಟ್ಟಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳದ ಆಹಾರ ಸಂಸ್ಕೃತಿಯನ್ನು ಗೌರವಿಸುತ್ತೇವೆ ಎಂಬ ಬಿಜೆಪಿಯ ಚುನಾವಣಾ ಭರವಸೆಗೆ ಈಗ ‘ಮೊಟ್ಟೆ’ ಮೊದಲ ಬಲಿ

ಚುನಾವಣಾ ಸಮಯದಲ್ಲಿ, ಬಿಜೆಪಿ ಪರಿಸ್ಥಿತಿಯನ್ನು ಮತ್ತು ಮೀನಿನ ಮಾರುಕಟ್ಟೆಯ ನಾಡಿಮಿಡಿತವನ್ನು ಸರಿಯಾಗಿಯೇ ಅರ್ಥಮಾಡಿಕೊಂಡಿತ್ತು. ಅವರ ನಾಯಕರು ಟಿವಿ ಕ್ಯಾಮೆರಾಗಳ ಮುಂದೆ ಮೀನುಗಳನ್ನು ಪ್ರದರ್ಶಿಸಿದರು ಮತ್ತು ಕುರಿ ಮಾಂಸದೂಟವನ್ನು ಸವಿದಿದ್ದರು. ಬಂಗಾಳಿಗಳ ತಟ್ಟೆಗೆ (ಆಹಾರಕ್ಕೆ)...

24 ಗಂಟೆಗೂ ಮೊದಲೇ ಮಹಾರಾಷ್ಟ್ರದಲ್ಲಿ TET ಪ್ರಶ್ನೆ ಪತ್ರಿಕೆ ಸೋರಿಕೆ: ರದ್ದಾದ ಪರೀಕ್ಷೆ

ಮಹಾರಾಷ್ಟ್ರದಲ್ಲಿ ಮತ್ತೊಂದು ಪರೀಕ್ಷಾ ಅಕ್ರಮದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಜೂನ್ 28ರ ಭಾನುವಾರ ನಡೆಯಬೇಕಿದ್ದ ‘ಶಿಕ್ಷಕರ ಅರ್ಹತಾ ಪರೀಕ್ಷೆ’ (TET) ಆರಂಭಕ್ಕೆ ಕೇವಲ 24 ಗಂಟೆಗಳ ಮುನ್ನವೇ ಪ್ರಶ್ನೆ ಪತ್ರಿಕೆ ಸೋರಿಕೆಯಾದ...

ಸೌತೆಕಾಯಿ ಕೃಷಿಗೆ ತನ್ನ ಸಚಿವಾಲಯದಿಂದಲೇ ₹99 ಲಕ್ಷ ಸಬ್ಸಿಡಿ ಪಡೆದ ಕೇಂದ್ರ BJP ಸಚಿವ ಭಾಗೀರಥ್ ಚೌಧರಿ

ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವ ಭಾಗೀರಥ್ ಚೌಧರಿ ಅವರು ತಮ್ಮದೇ ಸಚಿವಾಲಯದ ವ್ಯಾಪ್ತಿಗೆ ಒರುವ ಯೋಜನೆಯಡಿ, ವಾಣಿಜ್ಯ ಸೌತೆಕಾಯಿ ಕೃಷಿ ಯೋಜನೆಗಾಗಿ 99.03 ಲಕ್ಷ ರೂ. ಸಬ್ಸಿಡಿ (ಸಹಾಯಧನ) ಪಡೆದಿರುವುದು ತನಿಖಾ...

‘ಆರ್‌ಎಸ್‌ಎಸ್‌ ನೋಂದಣಿಯಾದರೆ ಒಳ್ಳೆಯದು’: ರಾಮಮಂದಿರ ಹಗರಣ ವಿಚಾರದಲ್ಲಿ ‘ಸತ್ಯ ಹೊರಬರಬೇಕು’: ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

‘ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (ಆರ್‌ಎಸ್‌ಎಸ್‌) ನೋಂದಣಿ ಮಾಡಿಸಿದರೆ ಯಾರಿಗೂ ಆರೋಪ ಮಾಡಲು ಅವಕಾಶ ಇರುವುದಿಲ್ಲ’ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಶುಕ್ರವಾರ ಹೇಳಿದ್ದಾರೆ. ಆರ್‌ಎಸ್‌ಎಸ್ ನೋಂದಣಿ ಕುರಿತು ಕರ್ನಾಟಕದ ಗೃಹ ಸಚಿವ...

ತುಮಕೂರಿನಲ್ಲಿ ಮಲಹೊರುವ ಪದ್ದತಿ ಜೀವಂತ; ದಲಿತ ಕಾರ್ಮಿಕರನ್ನು ಶೌಚಗುಂಡಿ ಸ್ವಚ್ಛತೆಗೆ ನಿಯೋಜಿಸಿದ ಕೆಇಬಿ ಇಂಜಿನಿಯರ್ಸ್ ಸಂಘ

ದಶಕಗಳ ಹಿಂದೆಯೇ ತಲೆ ಮೇಲೆ ಮಲಹೊರುವ ಅನಿಷ್ಠ ಪದ್ಧತಿಯನ್ನು ದೇಶದಲ್ಲಿ ನಿಷೇಧಿಸಲಾಗಿದೆ. ಕಾನೂನಿನ ಪ್ರಕಾರ ಈ ಅಮಾನವೀಯ ಪದ್ಧತಿ ನಿಷೇದಗೊಂಡಿದ್ದರು ರಾಜ್ಯದಲ್ಲಿ ಮಾತ್ರ ಇನ್ನೂ ಜೀವಂತವಾಗಿರುವುದು ತುಮಕೂರಿನಲ್ಲಿ ಮತ್ತೊಮ್ಮೆ ಬಹಿರಂಗವಾಗಿದೆ. ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್...

ವರ್ಷ ಪೂರೈಸಿದ ಎಸ್‌ಐಆರ್‌ ಪ್ರಕ್ರಿಯೆ; ಸುಮಾರು 6 ಕೋಟಿ ಹೆಸರುಗಳು ಡಿಲೀಟ್

ಸುಮಾರು ಆರು ಕೋಟಿ ಮತದಾರರನ್ನು ಅಳಿಸಲು ಕಾರಣವಾದ, ವಿರೋಧ ಪಕ್ಷಗಳು ಮತ್ತು ಚುನಾವಣಾ ಆಯೋಗದ ನಡುವೆ ಘರ್ಷಣೆಗೆ ಕಾರಣವಾದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯು 19 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ...

ರಾಮ ಮಂದಿರ ಹಗರಣ | ಶಿವಸೇನೆ ಕೊಟ್ಟ 1 ಕೋಟಿ ರೂ.ಗೆ ರಸೀದಿ ಸಿಕ್ಕಿಲ್ಲ : ಸಂಜಯ್ ರಾವತ್

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರಕ್ಕೆ ನೀಡಿದ 1 ಕೋಟಿ ರೂಪಾಯಿ ದೇಣಿಗೆಗೆ ತಮ್ಮ ಪಕ್ಷ ಶಿವಸೇನೆ (ಯುಬಿಟಿ) ರಸೀದಿಯನ್ನು ಸ್ವೀಕರಿಸಿಲ್ಲ ಎಂದು ಸಂಜಯ್ ರಾವತ್ ಶುಕ್ರವಾರ (ಜೂ.26) ಹೇಳಿದ್ದಾರೆ. ರಾಮ ಮಂದಿರದ ದೇಣಿಗೆ...

ರಾಮ ಮಂದಿರ ಹಗರಣ: ಶ್ರೀರಾಮ ಜನ್ಮಭೂಮಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಟ್ರಸ್ಟಿ ಅನಿಲ್ ಮಿಶ್ರಾ ರಾಜೀನಾಮೆ

ಶ್ರೀ ರಾಮ ಜನ್ಮಭೂಮಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ರಾಮ ಮಂದಿರ ದೇಣಿಗೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ನೈತಿಕ ಹೊಣೆ ಹೊತ್ತು, ಸದಸ್ಯ ಟ್ರಸ್ಟಿ ಅನಿಲ್ ಮಿಶ್ರಾ ಅವರೊಂದಿಗೆ ಶುಕ್ರವಾರ ರಾಜೀನಾಮೆ...

‘ಕೂಡಿ ಹಾಕಿ ಥಳಿಸುತ್ತಿದ್ದರು, ತಪ್ಪಿಸಿಕೊಳ್ಳದಂತೆ ನಾಯಿ ಬಿಟ್ಟಿದ್ದರು’: ಭೀಕರ ಶೋಷಣೆಯಿಂದ 12 ಜೀತ ಕಾರ್ಮಿಕರ ರಕ್ಷಣೆ

ಮೂರು ತಿಂಗಳ ಕಾಲ 68 ವರ್ಷದ ಮೆಹರ್ಬಾನ್ ಶಾ ಅನಿಶ್ಚಿತತೆಯಲ್ಲಿ ಜೀವನ ನಡೆಸುತ್ತಿದ್ದರು. ದುಡಿಯಲು ಹೋಗಿದ್ದ ಅವರ ಕಿರಿಯ ಮಗ ದಿಲ್ಶಾದ್ ಮೊಹಮ್ಮದ್ ಜೀವಂತವಾಗಿದ್ದಾನಾ?, ಇಲ್ಲಾ ಮರಣ ಹೊಂದಿದ್ದಾನಾ? ಎಂಬುವುದು ಅವರಿಗೆ ಗೊತ್ತಿರಲಿಲ್ಲ. 24...

ಅಯ್ಯೋಧ್ಯೆ ರಾಮ ಮಂದಿರ ಹಗರಣ: ಎಂಟು ಜನರ ವಿರುದ್ಧ ಎಫ್‌ಐಆರ್; ಪ್ರಭಾವಿ ವ್ಯಕ್ತಿಗಳನ್ನು ರಕ್ಷಿಸಲಾಗಿದೆ ಎಂದು ಪ್ರತಿಪಕ್ಷಗಳ ಆರೋಪ 

ಅಯೋಧ್ಯೆ: ವಿಶ್ವದಾದ್ಯಂತ ಕೋಟ್ಯಂತರ ಭಕ್ತರ ಆರಾಧ್ಯ ದೈವವಾಗಿರುವ ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ ಭಕ್ತರು ಸಮರ್ಪಿಸಿದ ನಗದು, ಚಿನ್ನಾಭರಣ ಸೇರಿದಂತೆ ಇತರೆ ಬೆಲೆಬಾಳುವ ಕಾಣಿಕೆಗಳ ಕಳ್ಳತನ ಮತ್ತು ಹಣ ದುರುಪಯೋಗದ ಗಂಭೀರ ಹಗರಣವೊಂದು...