Homeಮುಖಪುಟಪ್ರವಾಹ ಪರಿಹಾರ: ಮೋದಿ ಮತ್ತು ಸಂಸದರಿಗೆ ಪ್ರಕಾಶ್ ರಾಜ್ ಗುದ್ದು

ಪ್ರವಾಹ ಪರಿಹಾರ: ಮೋದಿ ಮತ್ತು ಸಂಸದರಿಗೆ ಪ್ರಕಾಶ್ ರಾಜ್ ಗುದ್ದು

- Advertisement -
- Advertisement -

ನಾನು ಉಗುದೆ…ಒರಸ್ಕೊಂಡ್ರೀ…ಈಗ ಜನ ಕ್ಯಾಕರ್ಸ್ಕೊಂಡ್ ಉಗೀತಾ ಇದಾರೆ…ಎಷ್ಟೂಂತ ಒರಸ್ಕೊತೀರಪ್ಪ ಎಂದು ಟ್ವೀಟ್ ಮಾಡುವ ಮೂಲಕ ಪ್ರವಾಹ ಪರಿಹಾರ ವಿಳಂಬ ಮಾಡುತ್ತಿರುವ ಕೇಂದ್ರ ಸರ್ಕಾರ ಮತ್ತು ಸಂಸದರ ವಿರುದ್ಧ ಕಿಡಿಕಾರಿದ್ದಾರೆ.

ಪ್ರಕಾಶ್ ರಾಜ್‌ರವರು ತಮ್ಮ ಟ್ವೀಟ್‌ನಲ್ಲಿ ಕೇಂದ್ರದ ವಿರುದ್ಧ ಕಿಡಿಕಾರಿ ಟ್ವಿಟ್ ಮಾಡಿರುವ ಹಲವು ಸ್ಕ್ರೀನ್‌ಶಾಟ್‌ಗಳನ್ನು ಲಗತ್ತಿಸಿದ್ದಾರೆ. ವಿಶೇಷ ಅಂದ್ರೆ ಅವೆಲ್ಲವೂ ಕನ್ನಡದಲ್ಲಿರವು ಟ್ವೀಟ್‌ಗಳೇ ಆಗಿವೆ.

ಪ್ರಕಾಶ್ ರಾಜ್ ವಿಷಯದಲ್ಲಿ ಮೈಸೂರು ಸಂಸದ ಪ್ರತಾಪ್‌ ಸಿಂಹ ಕೀಳುಮಟ್ಟದ ಟ್ವೀಟ್ ಮಾಡಿದ್ದರು. ಇದರ ಕುರಿತು ಪ್ರಕಾಶ್ ರಾಜ್ ಕೋರ್ಟ್‌ ಮೆಟ್ಟಲು ಸಹ ಏರಿದ್ದರು. ತದನಂತರ ಪ್ರತಾಪ್‌ ಸಿಂಹ ನನ್ನದು ತಪ್ಪಾಯಿತು ಕ್ಷಮಿಸಿಬಿಡಿ ಎಂದು ಬಹಿರಂಗವಾಗಿ ಟ್ವೀಟ್ ಮಾಡಿದ್ದರು. ಅದನ್ನು ಪ್ರಕಾಶ್ ರಾಜ್ ಮನ್ನಿಸಿದ್ದರು.

ಈದ ಅದೇ ವಿಷಯವನ್ನಿಟ್ಟುಕೊಂಡು ನಾನು ಉಗುದೆ…ಒರಸ್ಕೊಂಡ್ರೀ…ಈಗ ಜನ ಕ್ಯಾಕರ್ಸ್ಕೊಂಡ್ ಉಗೀತಾ ಇದಾರೆ…ಎಷ್ಟೂಂತ ಒರಸ್ಕೊತೀರಪ್ಪ ಎಂದು ಪ್ರಕಾಶ್‌ ರಾಜ್ ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ: ಕೋರ್ಟ್ ಛೀಮಾರಿ ಹಾಕಿದ ಬಳಿಕ ಪ್ರಕಾಶ್ ರೈ ಬಳಿ ಕ್ಷಮೆ ಕೇಳಿದ ಸಂಸದ ಪ್ರತಾಪ್ ಸಿಂಹ

ಕಳೆದೆರಡು ವರ್ಷಗಳಿಂದ ಜಸ್ಟ್ ಆಸ್ಕಿಂಗ್‌ ಹೆಸರಿನಲ್ಲಿ ಕೇಂದ್ರದ ಜನವಿರೋಧಿ ಯೋಜನೆಗಳನ್ನು ಪ್ರಶ್ನಿಸುತ್ತಾ ಬಂದಿದ್ದ ಪ್ರಸಿದ್ದ ಚಿತ್ರನಟ ಪ್ರಕಾಶ್‌ರಾಜ್ ಈ ಸಂಸತ್ ಚುನಾವಣೆಯಲ್ಲಿ ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಸ್ವಂತತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆದರ ಅವರು ಕೇವಲ ೨೯ಸಾವಿರ ಮತಗಳನ್ನಷ್ಟೇ ಪಡೆದು ಸೋತಿದ್ದರು.

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ಅದೃಶ್ಯ ಮತದಾರರಿಗೆ ಹೆದರುತ್ತಾರೆ, ಅದಕ್ಕಾಗಿಯೇ ಅವರು ಕಾಂಗ್ರೆಸ್‌ನ್ನು ಟೀಕಿಸುತ್ತಾರೆ: ಮಲ್ಲಿಕಾರ್ಜುನ ಖರ್ಗೆ

0
'ಲೋಕಸಭೆ ಚುನಾವಣೆಯ ಮೊದಲ ಸುತ್ತಿನ ಮತದಾನ ಮುಗಿದಿದ್ದು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅದೃಶ್ಯ ಮತದಾರರ ಭಯವಿದೆ, ಅದಕ್ಕಾಗಿಯೇ ಅವರು ಕಾಂಗ್ರೆಸ್ ಪಕ್ಷವನ್ನು ಟೀಕಿಸುತ್ತಿದ್ದಾರೆ' ಎಂದು ಎಐಸಿಸಿ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಬುಧವಾರ...