Homeಮುಖಪುಟರಾಜಸ್ಥಾನ ವಿಧಾನಸಭೆ ಆಗಸ್ಟ್ 14 ಕ್ಕೆ: ಗವರ್ನರ್ ಕಾಲ್ರಾಜ್ ಮಿಶ್ರಾ

ರಾಜಸ್ಥಾನ ವಿಧಾನಸಭೆ ಆಗಸ್ಟ್ 14 ಕ್ಕೆ: ಗವರ್ನರ್ ಕಾಲ್ರಾಜ್ ಮಿಶ್ರಾ

- Advertisement -
- Advertisement -

ಆಗಸ್ಟ್ 14 ರಂದು ರಾಜಸ್ಥಾನ ವಿಧಾನಸಭೆ ಅಧಿವೇಶನವನ್ನು ಕರೆಯಲಾಗುವುದು ಎಂದು ಗವರ್ನರ್ ಕಲ್ರಾಜ್ ಮಿಶ್ರಾ ಅವರ ಕಚೇರಿಯ ನೋಟಿಸ್ ತಿಳಿಸಿದೆ.

ಸರ್ಕಾರ ವಿಶ್ವಾಸ ಮತ ಯಾಚಿಸಲು ಬಯಸದಿದ್ದರೆ ಕೊರೊನಾ ವೈರಸ್ ದೃಷ್ಟಿಯಿಂದ ಅಧಿವೇಶನವನ್ನು ಕರೆಯಲು ಯಾವುದೇ ಕಾರಣವಿಲ್ಲ ಎಂದು ಮಿಶ್ರಾ ಹೇಳಿದರು. ಅಂತಹ ಸಂದರ್ಭದಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಎಲ್ಲಾ ಸುರಕ್ಷತಾ ಕ್ರಮಗಳೊಂದಿಗೆ ಕಿರು ಅಧಿವೇಶನ ನಡೆಸಬಹುದು ಎಂದು ಅವರು ಹೇಳಿದರು.

ಮೊದಲ ವಿನಂತಿಯನ್ನು ಮಾಡಿದ ದಿನದಿಂದ ನಿಖರವಾಗಿ 21 ದಿನಗಳವರೆಗೆ ಅಧಿವೇಶನ ಕೇಳಲು ಮುಖ್ಯಮಂತ್ರಿ ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಜ್ಯಪಾಲರು ಬಿಜೆಪಿ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ ಮತ್ತು ಕ್ಯಾಬಿನೆಟ್ ಪ್ರಸ್ತಾಪಗಳನ್ನು ತಡೆಯಲು ತಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿ ಹೋಗುತ್ತಿದ್ದಾರೆ ಎಂದು ಮುಖ್ಯಮಂತ್ರಿ ಆರೋಪಿಸಿದ್ದರು.

ಸಚಿನ್ ಪೈಲಟ್ ಹಾಗೂ ಅವರ ಬೆಂಬಲಿಗ ಶಾಸಕರು ಅನರ್ಹಗೊಂಡರೆ ವಿಧಾನಸಭೆಯಲ್ಲಿ ಬಹುಮತದ ಸಂಖ್ಯೆಯು ಕಡಿಮೆಯಾಗುತ್ತದೆ. ಇದು ಗೆಹ್ಲೋಟ್ ಗೆ ವಿಶ್ವಾಸ ಮತವನ್ನು ಗೆಲ್ಲಲು ಹಾಗೂ ಮುಂದಿನ ಆರು ತಿಂಗಳುಗಳವರೆಗೆ ಅವರ ಸರ್ಕಾರವನ್ನು ಸುರಕ್ಷಿತವಾಗಿರಲು ಸಹಾಯವಾಗುತ್ತದೆ.

ಆದರೆ ಅವರನ್ನು ಅನರ್ಹಗೊಳಿಸದಿದ್ದರೆ ಅಡ್ಡ ಮತದಾನ ಮಾಡುವ ಅವಕಾಶವಿರುತ್ತದೆ. ಇದಾದ ನಂತರ ಅವರನ್ನು ಅನರ್ಹಗೊಳಿಸಿದರೂ ಅವರ ಮತವನ್ನು ಗಣನೆಗೆ ಪಡೆಯಲಾಗಿ ಕಾಂಗ್ರೆಸ್ ಸರ್ಕಾರ ಕುಸಿಯುವ ಸಾಧ್ಯತೆಯಿದೆ.


ಇದನ್ನೂ ಓದಿ: 3 ನೇ ಬಾರಿ ಸದನ ನಡೆಸುವ ಪ್ರಸ್ತಾಪ ತಿರಸ್ಕರಿಸಿದ ರಾಜಸ್ಥಾನ ರಾಜ್ಯಪಾಲ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಕಲ್ಕತ್ತಾ ಹೈಕೋರ್ಟ್ ಮಾರಾಟ ಆಗಿದೆ’ ಎಂದ ಮಮತಾ ಬ್ಯಾನರ್ಜಿ ವಿರುದ್ಧ ಕ್ರಮಕ್ಕೆ ವಕೀಲರ ಗುಂಪು...

0
‘ಕಲ್ಕತ್ತಾ ಹೈಕೋರ್ಟ್ ಮಾರಾಟ ಆಗಿದೆ' ಎಂದು ಹೈಕೋರ್ಟ್‌ ವಿರುದ್ಧ ಟೀಕೆಯನ್ನು ಮಾಡಿದ್ದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಬೇಕೆಂದು ವಕೀಲರ ಗುಂಪು ಗುರುವಾರ ಕಲ್ಕತ್ತಾ ಹೈಕೋರ್ಟ್‌ಗೆ ಒತ್ತಾಯಿಸಿದೆ. ಶಾಲಾ...