Homeರಂಜನೆಕ್ರೀಡೆಇಂದಿನಿಂದ ಐಪಿಎಲ್‌ ಮತ್ತೆ ಆರಂಭ: ಮುಂಬೈ ಮತ್ತು ಚೆನೈ ತಂಡಗಳ ನಡುವೆ ಸೆಣಸಾಟ

ಇಂದಿನಿಂದ ಐಪಿಎಲ್‌ ಮತ್ತೆ ಆರಂಭ: ಮುಂಬೈ ಮತ್ತು ಚೆನೈ ತಂಡಗಳ ನಡುವೆ ಸೆಣಸಾಟ

ದೇಶದಲ್ಲಿ ಕೊರೊನಾ ಸಾಂಕ್ರಾಮಿಕ ತೀವ್ರಗತಿಯಲ್ಲಿ ಹರಡುತ್ತಿದ್ದ ಸಮಯದಲ್ಲಿ ಐಪಿಎಲ್ ಆರಂಭವಾಗಿ ಭಾರಿ ಟೀಕೆಗೆ ಗುರಿಯಾಗಿತ್ತು.

- Advertisement -
- Advertisement -

ಕೊರೊನಾ ಸಾಂಕ್ರಾಮಿಕದ ನಡುವೆ ಆರಂಭವಾಗಿ ಟೀಕೆಗೆ ಒಳಗಾಗಿ, ಕೊರೊನಾ 2ನೇ ಅಲೆಯ ಕಾರಣದಿಂದಾಗಿ ಅರ್ಧಕ್ಕೆ ನಿಂತುಹೋಗಿದ್ದ ಐಪಿಎಲ್‌-2021 ಇದೀಗ ಮತ್ತೆ ಆರಂಭವಾಗುತ್ತಿದೆ. ಮೇ ತಿಂಗಳ ಆರಂಭದಲ್ಲಿ ಐಪಿಎಲ್‌ ಪಂದ್ಯಗಳು ಅರ್ಧಕ್ಕೆ ನಿಂತು ಹೋಗಿದ್ದವು. ನಾಲ್ಕು ತಿಂಗಳ ನಂತರ ಇಂದು (ಭಾನುವಾರ) ಮುಂಬೈ ಮತ್ತು ಚೆನೈ ತಂಡಗಳ ನಡುವೆ ದುಬೈನಲ್ಲಿ ಸಂಜೆ 7:30ಕ್ಕೆ ಪಂದ್ಯ ನಡೆಯಲಿದೆ.

ಕೊರೊನಾದಿಂದ ಅರ್ಧಕ್ಕೆ ನಿಂತಿದ್ದ ಪಂದ್ಯಗಳ ಪೈಕಿ ಇನ್ನೂ 31 ಪಂದ್ಯಗಳು ನಡೆಯಬೇಕಿದೆ. ಈ ಪಂದ್ಯಗಳು ದುಬೈ, ಶಾರ್ಜಾ, ಅಬುಧಾಬಿಯಲ್ಲಿ ನಡೆಯಲಿದ್ದು, ಫೈನಲ್‌ ಪಂದ್ಯ ಅಕ್ಟೋಬರ್ 15 ರಂದು ನಡೆಯಲಿದೆ.

ಮೇ 2ರಂದು ಅಹ್ಮದಾಬಾದ್‌ನಲ್ಲಿ ಪಂಜಾಬ್‌-ಡೆಲ್ಲಿ ನಡುವಿನ ಮುಖಾಮುಖಿ ಬಳಿಕ ಕೊರೊನಾ ಕಾರಣದಿಂದಾಗಿ ಪಂದ್ಯಾವಳಿಯನ್ನು ನಿಲ್ಲಿಸಲಾಗಿತ್ತು. ಮೊದಲಿದ್ದ ವೇಳಾಪಟ್ಟಿಯನ್ನು ಬದಲಿಸಲಾಗಿದೆ. ಇಲ್ಲಿನ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ ಎದುರಾಗಲಿವೆ.

ಈ ಬಾರಿಯ ಐಪಿಎಲ್‌ನಿಂದ ಡೇವಿಡ್‌ ಮಲಾನ್‌, ಕ್ರಿಸ್‌ ವೋಕ್ಸ್‌, ಜಾನಿ ಬೇರ್‌ಸ್ಟೊ, ಜಾಸ್‌ ಬಟ್ಲರ್‌, ಜೋಫ್ರ ಆರ್ಚರ್‌, ರಿಲೀ ಮೆರೆಡಿತ್‌, ಜೇ ರಿಚರ್ಡ್‌ಸನ್‌, ಪ್ಯಾಟ್‌ ಕಮಿನ್ಸ್‌ ಮೊದಲಾದ ವಿದೇಶಿ ಆಟಗಾರರು ಹೊರಗುಳಿದ್ದಾರೆ. ಕೆಲವು ಸ್ಟಾರ್‌ ವಿದೇಶಿ ಆಟಗಾರರು ಹಿಂದೆ ಸರಿದರೂ ಕೂಟದ ಆಕರ್ಷಣೆಯೇನೂ ಕಡಿಮೆ ಆಗದೆಂಬುದೊಂದು ಲೆಕ್ಕಾಚಾರವಿದೆ.

ಇದನ್ನೂ ಓದಿ: ಕೊಹ್ಲಿ ನಿರ್ಧಾರಕ್ಕೆ ಬಿಸಿಸಿಐ ಅಧ್ಯಕ್ಷ ಗಂಗೂಲಿ ಪ್ರತಿಕ್ರಿಯೆ

2019ರ ಬಳಿಕ ಪ್ರೇಕ್ಷಕರಿಗೆ ಬಾಗಿಲು ತೆರೆಯುವ ಕಾರಣಕ್ಕಾಗಿಯೂ ಯುಎಇ ಆವೃತ್ತಿಯ ಐಪಿಎಲ್‌ ಆಕರ್ಷಣೆ ಹೆಚ್ಚಿದೆ. ಸ್ಟೇಡಿಯಂ ಸಾಮರ್ಥ್ಯದ ಶೇ. 50 ವೀಕ್ಷಕರಿಗೆ ಅವಕಾಶ ಕಲ್ಪಿಸಲಾಗಿದೆ. ಎರಡೂ ಡೋಸ್‌ ಕೋವಿಡ್‌ ಲಸಿಕೆ ಪಡೆದಿರುವ ಪ್ರೇಕ್ಷಕರು ಆನ್‌ಲೈನ್‌ನಲ್ಲೇ ಟಿಕೆಟ್‌ಗಳನ್ನು ಖರೀದಿಸಿ ಪಂದ್ಯ ವೀಕ್ಷಿಸಬಹುದಾಗಿದೆ.

ಐಪಿಎಲ್ ಆರಂಭದಲ್ಲಿ ಭಾರತದಲ್ಲಿ ನಡೆದ 29 ಪಂದ್ಯಗಳಲ್ಲಿ 2020ರ ರನ್ನರ್ ಅಪ್‌ ಡೆಲ್ಲಿ ಕ್ಯಾಪಿಟಲ್ಸ್‌ 12 ಅಂಕಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದೆ. ಆಡಿದ 8 ಪಂದ್ಯಗಳಲ್ಲಿ ಆರನ್ನು ಗೆದ್ದಿದೆ. ಚೆನ್ನೈ ಮತ್ತು ಆರ್‌ಸಿಬಿ ತಲಾ 10 ಅಂಕ ಗಳಿಸಿವೆ. ಆದರೆ ರನ್‌ರೇಟ್‌ನಲ್ಲಿ ಮುಂದಿರುವ ಧೋನಿ ಪಡೆ ದ್ವಿತೀಯ ಸ್ಥಾನದಲ್ಲಿದೆ. ಕೊಹ್ಲಿ ಟೀಮ್‌ಗೆ 3ನೇ ಸ್ಥಾನ. ಭಾನುವಾರದ ಮೊದಲ ಪಂದ್ಯವನ್ನು ಗೆದ್ದರೆ ಚೆನ್ನೈ ಅಗ್ರಸ್ಥಾನಕ್ಕೆ ಜಿಗಿಯಲಿದೆ.

ದೇಶದಲ್ಲಿ ಕೊರೊನಾ ಸಾಂಕ್ರಾಮಿಕ ತೀವ್ರ ರೀತಿಯಲ್ಲಿ ಹರಡುತ್ತಿದ್ದ ಸಮಯದಲ್ಲಿ ಐಪಿಎಲ್ ಆರಂಭವಾಗಿ ಭಾರಿ ಟೀಕೆಗೆ ಗುರಿಯಾಗಿತ್ತು. ಆಮ್ಲಜನಕವಿಲ್ಲದ, ಆಸ್ಪತ್ರೆಗಳಲ್ಲಿ ಬೆಡ್‌ಗಳು ಸಿಗದ ಜನರ ಆಕ್ರಂದನ ಮುಗಿಲು ಮುಟ್ಟಿದ್ದ ಬಗ್ಗೆ ಅಂತರಾಷ್ಟ್ರೀಯ ಪತ್ರಿಕೆಗಳು ವರದಿ ಮಾಡಿದ್ದವು. ಈ ನಡುವೆ ಐಪಿಎಲ್ ಆರಂಭಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

ಸಾಮಾಜಿಕ ಕಾರ್ಯಕರ್ತ ನಿಖಿಲ್ ಜೆ ಆಳ್ವಾ ಅವರು, “ಪ್ರಾಚೀನ ಕಾಲದಲ್ಲಿ, ಪರಿಸ್ಥಿತಿಯು ಕೆಟ್ಟದಾಗಿದ್ದಾಗ ನಾಗರೀಕರ ಗಮನವನ್ನು ಬೇರೆಡೆಗೆ ಸೆಳೆಯಲು ರೋಮ್‌ನ ಚಕ್ರವರ್ತಿಗಳು ಕಾಲೊಸಿಯಂನಲ್ಲಿ ಗ್ಲಾಡಿಯೇಟರ್ ಆಟಗಳನ್ನು ಆಯೋಜಿಸಿಸುತ್ತಿದ್ದರು. ಭಾರತದಲ್ಲಿ ನಮಗೆ ಐಪಿಎಲ್ ಇದೆ” ಎಂದು ಹೇಳಿದ್ದರು.


ಇದನ್ನೂ ಓದಿ:  ಜನರ ಗಮನ ಬೇರೆಡೆ ಸೆಳೆಯಲು ರೋಮ್‌ ಚಕ್ರವರ್ತಿಗಳು ಗ್ಲಾಡಿಯೇಟರ್‌‌ಗಳನ್ನು ಆಡಿಸುತ್ತಿದ್ದರು, ನಮಗೆ ಐಪಿಎಲ್ ಇದೆ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK: ಜಾತಿ ಗಣತಿ ಕುರಿತ ರಾಹುಲ್ ಗಾಂಧಿಯ ವೈರಲ್ ಕ್ಲಿಪ್ ಎಡಿಟೆಡ್

0
ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿರುವ ಭಾಷಣದ ಕ್ಲಿಪ್‌ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅನೇಕ ಬಾರಿ ಸುಳ್ಳು ಸುದ್ದಿಗಳನ್ನು ಹಂಚಿಕೊಂಡಿರುವ ಬಲ ಪಂಥೀಯ ಎಕ್ಸ್...