Homeಮುಖಪುಟ’ಬಿಡಾಡಿ ದನಗಳ ಸಂರಕ್ಷಣೆಯಲ್ಲಿ ಅದ್ಭುತ ಕೆಲಸ ಮಾಡಿದ್ದೇವೆ’- ಉತ್ತರ ಪ್ರದೇಶ ಸರ್ಕಾರ

’ಬಿಡಾಡಿ ದನಗಳ ಸಂರಕ್ಷಣೆಯಲ್ಲಿ ಅದ್ಭುತ ಕೆಲಸ ಮಾಡಿದ್ದೇವೆ’- ಉತ್ತರ ಪ್ರದೇಶ ಸರ್ಕಾರ

- Advertisement -
- Advertisement -

ಇತ್ತೀಚೆಗೆ ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯ ರೈತರು ನೂರಾರು ಬಿಡಾಡಿ ದನಗಳನ್ನು ಸಿಎಂ ಯೋಗಿ ಆದಿತ್ಯನಾಥ್‌ ಅವರು ಚುನಾವಣಾ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದ ತೆರೆದ ಮೈದಾನಕ್ಕೆ ಬಿಟ್ಟಿದ್ದರು. ಈ ಬೆನ್ನಲೆ ಹೇಳಿಕೆ ಬಿಡುಗಡೆ ಮಾಡಿರುವ ರಾಜ್ಯ ಸರ್ಕಾರ “ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ನಿರ್ಗತಿಕ ಜಾನುವಾರುಗಳ ಸಂರಕ್ಷಣೆಯ ವಿಷಯದಲ್ಲಿ “ಅದ್ಭುತ ಕೆಲಸ” ಮಾಡಿದೆ ಎಂದು ಹೇಳಿದೆ.

“ರಾಜ್ಯ ಸರ್ಕಾರ ಮತ್ತು ರಾಜ್ಯದ ಜನರು ದನಗಳ ಸಂರಕ್ಷಣೆ ವಿಚಾರದಲ್ಲಿ ಸಂಪೂರ್ಣವಾಗಿ ಸಂವೇದನಾಶೀಲರಾಗಿದ್ದಾರೆ. ರಾಜ್ಯ ಸರ್ಕಾರವು ಈ ವಿಷಯದಲ್ಲಿ ಗಮನಾರ್ಹ ಕೆಲಸವನ್ನು ಮಾಡಿರುವುದರಿಂದ ದೀರ್ಘಕಾಲದಿಂದ ಬಾಕಿ ಉಳಿದಿರುವ ಸಮಸ್ಯೆಯನ್ನು ಪರಿಹರಿಸಲಾಗಿದೆ. ಕೆಲವೇ ಕೆಲವು ಗೋವುಗಳು ರಸ್ತೆ ಮತ್ತು ಕೃಷಿ ಕ್ಷೇತ್ರದಲ್ಲಿ ಓಡಾಡುತ್ತಿವೆ. ಉಳಿದಂತೆ ನಿರ್ಗತಿಕ ಗೋವುಗಳು ಇಲ್ಲಿ ಅಲೆದಾಡುತ್ತಿಲ್ಲ ಎಂದು ತಿಳಿಸುತ್ತಿದ್ದೇವೆ” ಎಂದು ಯುಪಿ ಸರ್ಕಾರವು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.

ರಾಜ್ಯದಲ್ಲಿ ಐದನೇ ಹಂತದ ಮತದಾನದ ಮುನ್ನಾದಿನದಂದು (ಫೆ.16) ಈ ಹೇಳಿಕೆ ಬಂದಿದೆ. ಬಿಡಾಡಿ ದನಗಳು ಉತ್ತರ ಪ್ರದೇಶದಲ್ಲಿ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಹೊಲಗಳಿಗೆ ನುಗ್ಗಿ ಬೆಳೆಗಳನ್ನು ನಾಶಪಡಿಸುತ್ತಿದ್ದು, ಇದು ಯುಪಿಯಲ್ಲಿ ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

ಇದನ್ನೂ ಓದಿ: ಯುಪಿ ಚುನಾವಣೆ: ಅಯೋಧ್ಯೆಯಲ್ಲಿ ಬದಿಗೆ ಸರಿದ ರಾಮಮಂದಿರ; ವ್ಯಾಪಾರಿಗಳ ಕೂಗು ಮುನ್ನಲೆಗೆ

ಈ ಬಿಡಾಡಿ ದನಗಳಿಂದ ತಮ್ಮ ಬೆಳೆಯನ್ನು ರಕ್ಷಿಸಲು ರೈತರು ತಮ್ಮ ಹೊಲಗಳಿಗೆ ಮುಳ್ಳುತಂತಿಯಿಂದ ಬೇಲಿ ಹಾಕುತ್ತಿದ್ದಾರೆ. ತಮ್ಮ ಬೆಳೆಗಳನ್ನು ರಕ್ಷಿಸಲು ನಿದ್ರೆಯಿಲ್ಲದ ಇಡೀ ರಾತ್ರಿಯನ್ನು ಕಳೆಯುತ್ತಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ತಿಳಿಸಿವೆ.

ಈ ಸಮಸ್ಯೆ ಯುಪಿಯಲ್ಲಿ ಚುನಾವನೆ ಮೇಲೂ ಪ್ರಭಾವ ಬಿರಲಿದ್ದು, ಪ್ರಧಾನಿ ನರೇಂದ್ರ ಮೋದಿ ಕೂಡ ತ್ಮ ಚುನಾವಣಾ ಭಾಷಣದಲ್ಲಿ ಬಿಡಾಡಿ ದನಗಳ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿದ್ದರು. ಕಳೆದ ವಾರ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ರಾಜ್ಯದಲ್ಲಿ ಬಿಜೆಪಿ ಅಧಿಕಾರ ಉಳಿಸಿಕೊಂಡರೆ ಬಿಡಾಡಿ ದನಗಳ ಸಮಸ್ಯೆ ಬಗೆಹರಿಯಲಿದೆ ಎಂದು ಭರವಸೆ ನೀಡಿದ್ದರು.

ಬಿಡಾಡಿ ಪ್ರಾಣಿಗಳಿಂದ ನೀವು ಎದುರಿಸುವ ಸಮಸ್ಯೆಗಳ ನಿವಾರಣೆಗೆ ಮಾರ್ಚ್ 10ರ ನಂತರ ಹೊಸ ವ್ಯವಸ್ಥೆ ಮಾಡಲಾಗುವುದು. ಹಾಲು ನೀಡದ ಪ್ರಾಣಿಗಳ ಸಗಣಿಯಿಂದ ಆದಾಯ ಗಳಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಚುನಾವಣಾ ರ್‍ಯಾಲಿಯಲ್ಲಿ ಭರವಸೆ ನೀಡಿದ್ದರು.

ಪ್ರಸ್ತುತ, ಸ್ವ-ಸಹಾಯ ಗುಂಪುಗಳು ನಡೆಸುತ್ತಿರುವ 572 ಗೋಶಾಲಾಗಳು ಯುಪಿ ಗೋಶಾಲಾ ಕಾಯ್ದೆಯಡಿ ರಾಜ್ಯದಲ್ಲಿ ನೋಂದಾಯಿಸಲ್ಪಟ್ಟಿವೆ. ಅವುಗಳಲ್ಲಿ 394 ಸಕ್ರಿಯವಾಗಿವೆ ಎಂದು ಯುಪಿ ಸರ್ಕಾರದ ಹೇಳಿಕೆ ತಿಳಿಸಿದೆ.

“ದೌರ್ಬಲ, ವೃದ್ಧ, ನಿರ್ಗತಿಕ ಮತ್ತು ರೋಗಪೀಡಿತ ಪ್ರಾಣಿಗಳಿಗೆ ಆಶ್ರಯ ನೀಡುವ ಜೊತೆಗೆ ಜಾನುವಾರುಗಳ ಪೋಷಣೆ ಮತ್ತು ಸಂತಾನೋತ್ಪತ್ತಿ ಉದ್ದೇಶದಿಂದ ಈ ಗೋಶಾಲೆಗಳನ್ನು ಸ್ಥಾಪಿಸಲಾಗಿದೆ. ಈ ಗೋಶಾಲೆಗಳಲ್ಲಿ ನಿರ್ಗತಿಕ ಪ್ರಾಣಿಗಳು ಮತ್ತು ಸ್ಥಳೀಯ ಆಡಳಿತ ಮತ್ತು ಪೊಲೀಸರಿಂದ ಪಡೆದ ಜಾನುವಾರುಗಳನ್ನು ಇರಿಸಿ ನೋಡಿಕೊಳ್ಳಲಾಗುತ್ತದೆ” ಎಂದು ರಾಜ್ಯ ಸರ್ಕಾರ ಹೇಳಿದೆ.

ಹಿಂದಿನ ಸರ್ಕಾರಗಳು ಈ ವಿಷಯದಲ್ಲಿ ಸಾಕಷ್ಟು ಕ್ರಮಕೈಗೊಂಡಿಲ್ಲ. ಇಂತಹ ನಿರ್ಗತಿಕ ಜಾನುವಾರುಗಳ ಸಂರಕ್ಷಣೆಗಾಗಿ ಹಿಂದಿನ ಸರ್ಕಾರಗಳು ಯಾವುದೇ ಪ್ರಯತ್ನಗಳನ್ನು ಮಾಡಲಿಲ್ಲ ಎಂದು ಆರೋಪಿಸಿದೆ.

ಇಂದು ಉತ್ತರ ಪ್ರದೇಶದ 12 ಜಿಲ್ಲೆಗಳಿಗೆ ಸೇರಿದ 61 ಕ್ಷೇತ್ರಗಳಲ್ಲಿ ಐದನೇ ಹಂತದ ಮತದಾನ ನಡೆಯುತ್ತಿದೆ. ಬೆಳಿಗ್ಗೆ 7 ಗಂಟೆಗೆ ಆರಂಭವಾಗಿ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ. ಯುಪಿಯ 403 ವಿಧಾನಸಭಾ ಸ್ಥಾನಗಳಲ್ಲಿ 231 ಕ್ಷೇತ್ರಗಳಲ್ಲಿ ಈಗಾಗಲೇ ಮತದಾನ ನಡೆದಿದೆ.


ಇದನ್ನೂ ಓದಿ: ಯುಪಿ ಸಿಎಂ ರ್‍ಯಾಲಿ ನಡೆಯುವ ಮೈದಾನಕ್ಕೆ ಬಿಡಾಡಿ ದನಗಳನ್ನು ಬಿಟ್ಟ ರೈತರು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಧಾರವಾಡ ಅಖಾಡ: ಕೇಸರಿ ಕೋಟೆಯಲ್ಲೇ ಸಂಘೀ ಸೇನಾಧಿಪತಿ ಪ್ರಹ್ಲಾದ್ ಜೋಶಿಗೆ ನಡುಕ!!

0
ಪೇಡಾ ನಗರಿ, ಸಾಂಸ್ಕೃತಿಕ ರಾಜಧಾನಿ, ಕರ್ನಾಟಕದ ಆಕ್ಸ್‌ಫರ್ಡ್ ಎಂದೆಲ್ಲ ಗುರುತಿಸಲ್ಪಡುವ ಧಾರವಾಡ ನಗರ ಕೇಂದ್ರವಾಗಿರುವ ಧಾರವಾಡ ಲೋಕಸಭಾ ಕ್ಷೇತ್ರ ಮಲೆನಾಡು, ಅರೆಮಲೆನಾಡು ಮತ್ತು ಬಯಲುನಾಡುಗಳ ವಿಭಿನ್ನ ನೈಸರ್ಗಿಕ ಗುಣ-ಧರ್ಮದ ಸೀಮೆ. ಖಡಕ್ ಜವಾರಿ...